ಬ್ರೇಕಿಂಗ್ ನ್ಯೂಸ್
05-09-24 08:42 pm Mangalore Correspondent ಕರಾವಳಿ
ಮಂಗಳೂರು, ಸೆ.5: ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಗ್ರಂಥಿ ದೊಡ್ಡದಾಗಿದೆ ಎಂದು ವೈದ್ಯರು ಔಷಧಿ ಬರೆದುಕೊಟ್ಟು ಎಡವಟ್ಟು ಮಾಡಿಕೊಂಡ ಆರೋಪ ಕೇಳಿಬಂದಿದ್ದು ಮಗುವಿನ ಹೆತ್ತವರು ಈ ಬಗ್ಗೆ ಸುರತ್ಕಲ್ ಠಾಣೆ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗೆ ದೂರು ನೀಡಿದ್ದಾರೆ.
ಸುರತ್ಕಲ್ ಮುಕ್ಕದ ಶ್ರೀನಿವಾಸ ಮೆಡಿಕಲ್ ಕಾಲೇಜಿನ ವೈದ್ಯರಲ್ಲಿಗೆ ಆಗಸ್ಟ್ 29ರಂದು ಸಸಿಹಿತ್ಲಿನ ಕುಟುಂಬವೊಂದು ನಾಲ್ಕು ತಿಂಗಳ ಚುಚ್ಚುಮದ್ದಿಗಾಗಿ ಮಗುವನ್ನು ಕರೆತಂದಿದ್ದರು. ಈ ವೇಳೆ, ಮಗುವನ್ನು ಪರೀಕ್ಷೆ ನಡೆಸಿದ ವೈದ್ಯರು ಹೈಪೋ ಥೈರಾಯ್ಡ್ ಆಗಿರುವ ಬಗ್ಗೆ ಹೇಳಿದ್ದು ಟೆಸ್ಟ್ ಮಾಡಿಸಿದ್ದಾರೆ. ಥೈರಾಯ್ಡ್ ಗ್ರಂಥಿ 12.05 ಟಿಎಸ್ಎಚ್ ಇರುವುದಾಗಿ ವರದಿ ಬಂದಿದ್ದು, ಇದು ಗಂಭೀರ ಕಾಯಿಲೆಗೆ ತುತ್ತಾಗಬಹುದು ಎಂದು ಹೇಳಿ ವೈದ್ಯರು ಔಷಧಿ ಬರೆದುಕೊಟ್ಟಿದ್ದಾರೆ. ಥೈರೋ ನಾರ್ಮ್ 50 ಎಂಸಿಜಿಯ ಮಾತ್ರೆಗಳನ್ನು ತಾಯಿ ಹಾಲಿನ ಜೊತೆಗೆ ಮಿಕ್ಸ್ ಮಾಡಿ ನೀಡುವಂತೆ ವೈದ್ಯರು ಸೂಚಿಸಿದ್ದರು.
ಅದರಂತೆ, ಔಷಧಿಯನ್ನು ಮೆಡಿಕಲ್ ನಿಂದ ಪಡೆದು ಮನೆಗೆ ತೆರಳಿದ್ದ ಹೆತ್ತವರಿಗೆ ಇಷ್ಟೊಂದು ಮಾತ್ರೆಯನ್ನು ಇಷ್ಟು ಸಣ್ಣ ಮಗುವಿಗೆ ಕೊಟ್ಟರೆ ಹೇಗೆ. ಮಗುವಿಗೆ ತೊಂದರೆ ಏನೂ ಇಲ್ಲದಿದ್ದಾಗ ಮದ್ದು ಕೊಡುವುದೇ ಎಂಬ ಚಿಂತೆಯಲ್ಲಿ ಪರಿಚಯದ ಬೇರೊಂದು ವೈದ್ಯರಲ್ಲಿ ಸಲಹೆ ಕೇಳಿದ್ದಾರೆ. 50 ಎಂಜಿ ಮಾತ್ರೆ ಕೊಟ್ಟಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರಿಂದ ಅವರ ಸಲಹೆಯಂತೆ ಮನೆಯವರು ಮಗುವನ್ನು ಸೆ.3ರಂದು ಮಂಗಳೂರಿನ ಎಜೆ ಆಸ್ಪತ್ರೆಗೆ ಕರೆತಂದು ಟೆಸ್ಟ್ ಮಾಡಿಸಿದ್ದಾರೆ. ಆಗ ಮಗುವಿಗೆ ಥೈರಾಯ್ಡ್ ಸಮಸ್ಯೆ ಇಲ್ಲ. ಥೈರಾಯ್ಡ್ ಟಿಎಸ್ಎಚ್ ವ್ಯಾಲ್ಯೂ 5.29 ಸಹಜ ಇದೆಯೆಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಮಗುವಿನ ಹೆತ್ತವರಿಗೆ ಗಾಬರಿಯಾಗಿದ್ದು, ಒಂದ್ವೇಳೆ ಶ್ರೀನಿವಾಸ ಆಸ್ಪತ್ರೆ ವೈದ್ಯರು ಕೊಟ್ಟ ಔಷಧಿಯನ್ನು ಮಗುವಿಗೆ ಕೊಡುತ್ತಿದ್ದರೆ ತೊಂದರೆ ಆಗುತ್ತಿತ್ತು ಎಂದು ಚಿಂತೆಗೆ ಒಳಗಾಗಿದ್ದಾರೆ.
ಆನಂತರ, ಮತ್ತೆ ಶ್ರೀನಿವಾಸ ಆಸ್ಪತ್ರೆಗೆ ತೆರಳಿ ಎಜೆಯಲ್ಲಿ ಟೆಸ್ಟ್ ಮಾಡಿದ ರಿಪೋರ್ಟ್ ತೋರಿಸಿದ್ದಾರೆ. ಅಲ್ಲಿನ ವೈದ್ಯರು ನಮಗೇನೂ ಗೊತ್ತಿಲ್ಲ. ರಿಪೋರ್ಟ್ ಆಧರಿಸಿ ಮದ್ದು ಕೊಟ್ಟಿದ್ದೇವೆ ಎಂದು ಜಾರಿಕೊಳ್ಳುವ ಯತ್ನ ಮಾಡಿದ್ದಾರೆ. ಮಗುವಿನ ತಂದೆ ರಾಮ ಸಾಲ್ಯಾನ್ ಆಸ್ಪತ್ರೆಯಲ್ಲಿ ರಂಪ ಮಾಡಿದ್ದಕ್ಕೆ, ನೇರವಾಗಿ ಆಂಬುಲೆನ್ಸ್ ನಲ್ಲಿ ಮನೆಗೆ ಬಂದು ಮಗುವನ್ನು ಮತ್ತೆ ಆಸ್ಪತ್ರೆಗೆ ಕರೆತಂದು ಟೆಸ್ಟ್ ಮಾಡಿಸಿದ್ದಾರೆ. ಆಗ ಥೈರಾಯ್ಡ್ ಸಹಜ ಇದೆಯೆಂದು ರಿಪೋರ್ಟ್ ಬಂದಿದ್ದಾಗಿ ತಿಳಿಸಿದ್ದಾರೆ. ಹಾಗಾದ್ರೆ, ಇದು ಹೇಗೆ ಸಾಧ್ಯವಾಯ್ತು. ನೀವು ನೀಡಿದ ಔಷಧಿಯನ್ನು ನಾವೇನೂ ಮಗುವಿಗೆ ನೀಡಿಲ್ಲ. ಏನೂ ಇಲ್ಲದೆ ಸರಿಯಾಯಿತೇ ಎಂದು ಪ್ರಶ್ನೆ ಮಾಡಿದ್ದಾರೆ.
ನಾಲ್ಕು ದಿನ ಆಯ್ತಲ್ಲ. ಕೆಲವೊಮ್ಮೆ ಸರಿಯಾಗುತ್ತೆ ಎಂದು ವೈದ್ಯರು ಹೇಳಿದ್ದು ಹೆತ್ತವರನ್ನು ದಂಗುಬಡಿಸಿದೆ. ನೀವು ಹೀಗೆ ಮಾಡಿದರೆ ಹೇಗೆ.. ಥೈರಾಯ್ಡ್ ಗ್ರಂಥಿ ದೊಡ್ಡದಾಗಿದೆ ಎಂದು ಮದ್ದು ಕೊಟ್ಟಿದ್ದೀರಿ. ನಾವು ಬಡವರು. ಯಾರೋ ಹೇಳಿದರು ಅಂತ ಬೇರೆ ಕಡೆ ಟೆಸ್ಟ್ ಮಾಡಿದ್ದೇವೆ. ನಿಮ್ಮನ್ನು ನಂಬಿ ನಾವು ಔಷಧಿಗೆ ಬರೋದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಆನಂತರ, ಒಟ್ಟು ಘಟನೆ ಬಗ್ಗೆ ಸುರತ್ಕಲ್ ಠಾಣೆಗೆ ದೂರು ನೀಡಿದ್ದು ಕ್ರಮಕ್ಕೆ ಆಗ್ರಹ ಮಾಡಿದ್ದಾರೆ. ಅಲ್ಲದೆ, ಪೊಲೀಸರ ಸಲಹೆಯಂತೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಚ್.ಆರ್ ತಿಮ್ಮಯ್ಯ ಅವರಿಗೂ ದೂರು ನೀಡಿದ್ದಾರೆ. ಶ್ರೀನಿವಾಸ ಆಸ್ಪತ್ರೆಯ ಎಡವಟ್ಟು ಬಗ್ಗೆ ಡಿಎಚ್ಓ ಬಳಿ ಪ್ರಶ್ನೆ ಮಾಡಿದಾಗ, ನಾವು ತನಿಖೆ ಮಾಡಿ 15 ದಿನದ ಒಳಗೆ ಏಕ್ಷನ್ ಮಾಡುತ್ತೇವೆ ಎಂದಿದ್ದಾರೆ ಎಂದು ರಾಮ ಸಾಲ್ಯಾನ್ ಒಟ್ಟು ಘಟನೆಯ ಬಗ್ಗೆ ಹೆಡ್ ಲೈನ್ ಕರ್ನಾಟಕಕ್ಕೆ ತಿಳಿಸಿದ್ದಾರೆ.
Mangalore Parents of 4 month year old baby file complaint against srinivas hospital mukka for wrong lab report. Baby was issued report of thyroid of 12. But the thryiod report was 5 when checked at AJ Hospital.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm