ಬ್ರೇಕಿಂಗ್ ನ್ಯೂಸ್
05-09-24 05:49 pm Mangalore Correspondent ಕರಾವಳಿ
ಉಳ್ಳಾಲ, ಸೆ.5: ತಲಪಾಡಿಯಿಂದ ಮಂಗಳೂರು ನಡುವೆ ಚಲಿಸುವ ಪದ್ಮ ಟ್ರಾವೆಲ್ಸ್ ಖಾಸಗಿ ನಗರ ಸಾರಿಗೆ ಬಸ್ ಮತ್ತು ಮಂಜೇಶ್ವರದ ಹೊಸಂಗಡಿ ಜಂಕ್ಷನ್ ನಿಂದ ಮಂಗಳೂರು ನಡುವೆ ಸಂಚರಿಸುವ ಅಸರ್ ಟ್ರಾವೆಲ್ಸ್ ಖಾಸಗಿ ಸರ್ವಿಸ್ ಬಸ್ ನಿರ್ವಾಹಕರ ನಡುವೆ ತೊಕ್ಕೊಟ್ಟಿನಲ್ಲಿ ಹೊಯ್ ಕೈ ನಡೆದಿದ್ದು, ಬೀದಿ ಕಾಳಗದ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬುಧವಾರ ಸಾಯಂಕಾಲ 3.40ರ ವೇಳೆ ತೊಕ್ಕೊಟ್ಟು ಸಮೀಪದ ಓವರ್ ಬ್ರಿಡ್ಜ್ ರೈಲ್ವೇ ಮೇಲ್ಸೇತುವೆ ಬಳಿಯ ಬಸ್ಸು ತಂಗುದಾಣದಲ್ಲಿ ಈ ಘಟನೆ ನಡೆದಿದೆ. ತಲಪಾಡಿಯಿಂದ ಮಂಗಳೂರಿಗೆ ಧಾವಿಸುತ್ತಿದ್ದ ಅಸರ್ ಟ್ರಾವೆಲ್ಸ್ ಬಸ್ಸನ್ನು ಬೆನ್ನಟ್ಟಿದ ಪದ್ಮ ಟ್ರಾವೆಲ್ಸ್ ಬಸ್ ಚಾಲಕ ಓವರ್ ಬ್ರಿಡ್ಜ್ ಬಸ್ಸು ನಿಲ್ದಾಣದಲ್ಲಿ ಅಡ್ಡಲಾಗಿ ಇಟ್ಟಿದ್ದಾನೆ. ಈ ವೇಳೆ ಎರಡು ಬಸ್ಸು ನಿರ್ವಾಹಕರ ನಡುವೆ ಮಾತಿನ ಚಕಮಕಿ ನಡೆದು ಹೊಯ್ ಕೈಯಾಗಿ ಬೀದಿ ಕಾಳಗ ಆಗಿದೆ.



ಈ ವೇಳೆ ಓವರ್ ಬ್ರಿಡ್ಜ್ ಆಟೋ ರಿಕ್ಷಾ ಪಾರ್ಕಿನ ರಿಕ್ಷಾ ಚಾಲಕರಾದ ಆನಂದ್ ಮತ್ತು ದೀಪಕ್ ಅವರು ಮಧ್ಯ ಪ್ರವೇಶಿಸಿ ಗಲಾಟೆ ನಿಲ್ಲಿಸಿದ್ದು ಬಸ್ಸು ನಿರ್ವಾಹಕರನ್ನ ಸಮಾಧಾನಗೊಳಿಸಿ ಕಳಿಸಿದ್ದಾರೆ. ಕಂಡಕ್ಟರ್ ಗಳು ಬೀದಿಯಲ್ಲಿ ಕಾದಾಡುತ್ತಿರುವ ದೃಶ್ಯವನ್ನು ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನ ಸಹ ಪ್ರಯಾಣಿಕರೊಬ್ಬರು ಮೊಬೈಲಿನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ.
ಖಾಸಗಿ ಬಸ್ ಚಾಲಕರ ಟೈಮಿಂಗ್ಸ್ ನಿಂದಾಗಿ ಗಲಾಟೆ, ಅಪಘಾತಗಳಾಗುತ್ತಿದ್ದು ಬಸ್ಸು ಪ್ರಯಾಣಿಕರು ಮತ್ತು ಸಾರ್ವಜನಿಕರು ಇದರಿಂದ ನಿತ್ಯ ಕಿರಿ ಕಿರಿ, ಸಮಸ್ಯೆ ಅನುಭವಿಸುವಂತಾಗಿದೆ. ಇಂದು ಬೀದಿಯಲ್ಲಿ ಗಲಾಟೆ ನಡೆಸಿದ ಕಂಡಕ್ಟರ್ ಗಳು ಅದೇ ವೈಷಮ್ಯದಲ್ಲಿ ನಾಳೆ ತಲ್ವಾರು ಮಚ್ಚು ಹಿಡಿದು ಕಾಳಗ ನಡೆಸಲೂ ಹೇಸಲಾರರು. ಮಂಗಳೂರು ಪೊಲೀಸ್ ಆಯುಕ್ತರು ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
#Mangalore #Bus drivers #fight assult over bus timings at #Thokottu, video goes viral. Bus drivers of both Padma and Asar buses fight and assult each other over bus timings in the middle of the road #mangalorenews @compolmlr @alokkumar6994 pic.twitter.com/a4h04GxFHu
— Headline Karnataka (@hknewsonline) September 5, 2024
Mangalore Bus drivers fight assult over bus timings at Thokottu, video goes viral. Bus drivers of both Padma and Asar fight and assult each other fighting on the road over timing.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 11:30 am
HK News Staffer
SDPI Protest, CM DK Shivakumar, Mangalore: ರಹ...
18-09-26 10:35 am
Mangalore, Karnataka Cabinet Meeting, DK Shiv...
18-09-26 09:49 am
ಕಸ್ತೂರಿ ರಂಗನ್ ವರದಿ ; 43 ಗ್ರಾಮಗಳ ಆತಂಕ ನಿವಾರಣೆಗ...
17-09-26 08:48 pm
Mangalore, DK Shivakumar, Coastal Karnataka,...
17-09-26 08:02 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am