ಬ್ರೇಕಿಂಗ್ ನ್ಯೂಸ್
05-09-24 05:22 pm Mangalore Correspondent ಕರಾವಳಿ
ಮಂಗಳೂರು, ಸೆ.5: ಮಂಗಳೂರು - ಉಡುಪಿ ರಾಷ್ಟ್ರಿಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬಿಎಂಡಬ್ಲ್ಯು ಐಷಾರಾಮಿ ಕಾರು ಹಠಾತ್ತನೇ ಬೆಂಕಿ ಹತ್ತಿಕೊಂಡು ಸುಟ್ಟು ಬೂದಿಯಾದ ಘಟನೆ ಸುರತ್ಕಲ್ ಎನ್ ಐಟಿಕೆ ಹಳೆ ಟೋಲ್ ಗೇಟ್ ಬಳಿ ಗುರುವಾರ ಬೆಳಗ್ಗೆ ನಡೆದಿದೆ.
ಕುಂದಾಪುರದ ದಯಾನಂದ ಶೆಟ್ಟಿ ಎಂಬವರ ಕಾರು ಇದಾಗಿದ್ದು ಅವರೇ ಉಡುಪಿಯಿಂದ ಮಂಗಳೂರಿಗೆ ಚಲಾಯಿಸುತ್ತ ಬರುತ್ತಿದ್ದಾಗ ಇಂಜಿನ್ ಭಾಗದಲ್ಲಿ ಬೆಂಕಿ ಕಂಡುಬಂದಿದೆ. ಹೀಗಾಗಿ ಕಾರನ್ನು ಎನ್ಐಟಿಕೆ ಎದುರಿನ ರಸ್ತೆಯಲ್ಲೇ ನಿಲ್ಲಿಸಿ ಹೊರಕ್ಕೆ ಇಳಿದಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಉಡುಪಿಯಿಂದ ವೇಗವಾಗಿ ಮಂಗಳೂರು ಕಡೆಗೆ ಬರುತ್ತಿದ್ದಾಗ ಘಟನೆ ನಡೆದಿದೆ. ನೋಡ ನೋಡುತ್ತಲೇ ಬೆಂಕಿಯ ಜ್ವಾಲೆ ಮೇಲೇರಿದ್ದು ಪ್ಲಾಸ್ಟಿಕ್ ಆಟಿಕೆಯಂತೆ ಕಾರು ಉರಿದಿದ್ದು ಸಂಪೂರ್ಣ ಸುಟ್ಟು ಹೋಗಿದೆ. ಸ್ಥಳದಲ್ಲಿ ವಾಹನ ಸಂಚಾರ ಬಂದ್ ಮಾಡಿ, ಜನರನ್ನು ಕೂಡ ದೂರ ನಿಲ್ಲಿಸಲಾಯಿತು. ಕಾರು ಸ್ಫೋಟಗೊಂಡ ರೀತಿ ಬೆಂಕಿ ಹತ್ತಿಕೊಂಡಿದ್ದು ಜನರು ನೋಡುತ್ತಲೇ ಮರುಗಿದ್ದಾರೆ. ಐಷಾರಾಮಿ ಕಾರು ಬೆಂಕಿಯಲ್ಲಿ ಲೀನವಾಗಿದ್ದನ್ನು ದಿಗ್ಭ್ರಾಂತಿಯಿಂದ ಕಾರಿನ ಮಾಲೀಕ ರಸ್ತೆಯಲ್ಲಿ ನಿಂತು ನೋಡುವಂತಾಗಿತ್ತು.
ಮಂಗಳೂರು ಉತ್ತರ ಸಂಚಾರ ಪೊಲೀಸರು, ಸುರತ್ಕಲ್ ಠಾಣೆ ಪೊಲಿಸರು, ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಡೀಸೆಲ್ ಬಳಸುತ್ತಿದ್ದ ಬಿಎಂಡಬ್ಲ್ಯು ಕಾರು ಇದಾಗಿದ್ದು ನಡುರಸ್ತೆಯಲ್ಲಿ ಈ ರೀತಿ ಉರಿದು ಹೋಗಿದ್ದು ಭಾರೀ ಅಚ್ಚರಿಗೆ ಕಾರಣವಾಗಿದೆ. ಕಾರಿಗೆ ಬೆಂಕಿ ಹತ್ತಿಕೊಳ್ಳಲು ಕಾರಣವಾದ ಅಂಶ ಏನೆಂದು ಬಿಎಂಡಬ್ಲ್ಯು ಕಂಪನಿಯವರೇ ಹೇಳಬೇಕು. ಮೊದಲಿಗೆ, ಇಲೆಕ್ಟ್ರಿಕ್ ಕಾರು ಎಂದು ಹೇಳಲಾಗಿತ್ತು. ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಪೊಲೀಸರು ಡೀಸೆಲ್ ಕಾರು ಎಂದು ಖಚಿತಪಡಿಸಿದ್ದಾರೆ.
#Mangalore #BMW car catches #fire near #surathkal toll, video goes viral. The car was travelling towards #Udupi and belongs to Dayanand Shetty from Kundapura. Suddenly the car caught fire near #NITKtoll gate #bmwcarfire #mangalorenews pic.twitter.com/ArDrx4m92r
— Headline Karnataka (@hknewsonline) September 5, 2024
Mangalore BMW car catches fire near surathkal toll, videos goes viral. The car was travelling towards Udupi and belongs to Dayanand Shetty from Kundapura. Suddenly the car caught fire near NITK toll gate.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm