ಬ್ರೇಕಿಂಗ್ ನ್ಯೂಸ್
24-08-24 05:10 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.24: ಗುರುಪುರ ಗ್ರಾಮದ ಅಡ್ಡೂರನ್ನು ಮಿನಿ ಪಾಕಿಸ್ತಾನ ಎಂದು ಹೇಳಿದ ಶಾಸಕ ಭರತ್ ಶೆಟ್ಟಿ ಹೇಳಿಕೆಗೆ ಕೆಪಿಸಿಸಿ ವಕ್ತಾರ ಎಂ.ಜಿ. ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದು ಮಂಗಳೂರು ನಗರದ ಒಳಗೆ ಒಂದು ಮಿನಿ ಪಾಕಿಸ್ತಾನ ಇದೆಯಂತಾದ್ರೆ ಕಾರಣ ಯಾರು.? ಕೇಂದ್ರ ಸರ್ಕಾರ, ರಕ್ಷಣಾ ಇಲಾಖೆ ವೈಫಲ್ಯ ಎಂದಾಯ್ತಲ್ಲ? ದೇಶದ ಒಳಗೆ ಮಿನಿ ಪಾಕಿಸ್ತಾನ ಆಗಿದೆ ಎಂದ್ರೆ ದೇಶದ ಸೈನ್ಯ, ಸರ್ಕಾರಕ್ಕೆ ಮಾಡಿದ ಅವಮಾನ ಎಂದು ಟೀಕಿಸಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಅವರು, ದೇಶದ ಪ್ರಧಾನಿ, ರಕ್ಷಣಾ ಮಂತ್ರಿ, ಭಾರತೀಯರಿಗೆ ಭರತ್ ಶೆಟ್ಟಿ ಅವಮಾನ ಮಾಡಿದ್ದಾರೆ. ಇವ್ರು ನೀಡಿದ್ದು ಬಾಳಿಶ ಹೇಳಿಕೆಯಾಗಿದ್ರೆ ಭರತ್ ಶೆಟ್ಟಿ ಭಾರತೀಯರ ಮುಂದೆ ಕ್ಷಮೆ ಯಾಚಿಸಲಿ. ಮರಳುಗಾರಿಕೆ, ಗಣಿಗಾರಿಕೆ ಬಗ್ಗೆ ನಿಮ್ಮ ಸರ್ಕಾರದ ಅವಧಿಯಲ್ಲಿ 50 ಕೋಟಿ ರೂಪಾಯಿ ಹಸಿರು ಪೀಠ ದಂಡ ಹಾಕಿದೆ, ಅದು ಯಾರಿಗೆ ಹಾಕಿದ್ದು ಶಾಸಕರೇ.? ಅದ್ರ ಗುತ್ತಿಗೆದಾರ ಯಾರು.? ಕಟೀಲಿನಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ದೂರು ನೀಡಲಾಗಿದೆ, ಅದು ಯಾರದ್ದು ಶಾಸಕರೇ...? ಗುರುಪುರ ಸೇತುವೆ ಎರಡು ಭಾಗದಲ್ಲಿ ಅಕ್ರಮ ಮರಳು ಶೇಖರಣೆ ಇದೆ, ಅದು ಯಾರದ್ದು...? ಎಂದು ಪ್ರಶ್ನೆ ಮಾಡಿದರು.
ಇದರ ಬಗ್ಗೆ ಕಾಂಗ್ರೆಸ್ ಹೋರಾಟ ಮಾಡ್ತಾ ಇದೆ. ಶಾಸಕರೇ ಹೀಗೆ ಮಾತನಾಡ್ತಾ ಹೋದ್ರೆ ಕತ್ತಿ ಕಾಳಗಕ್ಕೆ ಹೋಗ್ತದೆ. ಆಗಾ ಯಾರು ಹೋಗ್ತಾರೆ, ನಾನು ಹೋಗಲ್ಲ ಇಲ್ಲಿ ಕೂತೋರು ಹೋಗಲ್ಲ, ನೀವು ಹೋಗಲ್ಲ...! ಯಾರೋ ಅಮಾಯಕ ಯುವಕರು ಕತ್ತಿಕಾಳಗಕ್ಕೆ ಹೋಗ್ತಾರೆ. ಯಾರದ್ದೋ ಜೀವ ಹೋಗುತ್ತೆ, ನೀವು ಬೇಳೆ ಬೇಯಿಸಿಕೊಳ್ತೀರಿ ಎಂದು ಹೇಳಿದರು. ಅಡ್ಡೂರು ಮಿನಿ ಪಾಕಿಸ್ತಾನ ಆಗಿದೆ ಅಂತೀರಾದ್ರೆ, ಈ ಬಗ್ಗೆ ಸರ್ಕಾರ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆಯೇ.? ಅಡ್ಡೂರಿನಲ್ಲಿ ನಾಲ್ಕು ಬೂತ್ ಇದೆ, ಅಲ್ಲಿ ಭರತ್ ಶೆಟ್ಟಿ ಅವರೇ ಒಂದು ಸಾವಿರ ಮತ ಪಡೆದಿದ್ದೀರಿ. ಹಾಗಿದ್ರೆ ನೀವು ಪಡೆದಿದ್ದು ಪಾಕಿಸ್ತಾನದ ಮತನಾ...? ಎಂದು ಕೇಳಿದರು.
ಮಂಗಳೂರು ನಗರ, ಮಂಗಳೂರು ಉತ್ತರ ಎರಡು ಶಾಸಕರು ಮಾತ್ರ ಒಟ್ಟಾರೆ ಮಾತನಾಡ್ತಾ ಇದ್ದಾರೆ...? ಅವರು ಹೀಗೆ ಮಾತನಾಡಿ ತಮ್ಮ ಅಸ್ತಿತ್ವ ತೋರಿಸ್ತ ಇದ್ದಾರೆ. ಇಲ್ಲಿ ಎಂಪಿ ಜೊತೆ ಹೊಸ ಕ್ಯಾಂಡಿಟೇಟ್ ತಿರುಗಾಟ ಆರಂಭಿಸಿದ್ದಾರೆ. ಮಂಗಳೂರು ಉತ್ತರದಲ್ಲಿ ಶೆಟ್ಟಿ ಮಹಿಳೆಯೊಬ್ಬರು ಇದ್ದಾರೆ. ಅದಕ್ಕೆ ನಾವೂ ಇದ್ದೇವೆ ಎಂಬುದನ್ನು ತೋರಿಸಲು ಮುಸ್ಲಿಮರ ಮೇಲೆ ಬೀಳ್ತಿದಾರೆ. ಕರ್ನಾಟಕ ಸರ್ಕಾರದ ಗೃಹ ಇಲಾಖೆ ಶಾಸಕರನ್ನು ವಿಚಾರಣೆ ಮಾಡಬೇಕು. ಮಿನಿ ಪಾಕಿಸ್ತಾನ ಹೇಗೆ ಆಗಿದೆ ಎಂಬುದರ ಬಗ್ಗೆ ವಿಚಾರಣೆ ನಡೆಸಲಿ. ಬಿಜೆಪಿಗೆ ಬ್ಯಾರಿಗಳು ಜೈ ಹಾಕಿದ್ರೆ ಭಾರತೀಯ, ದೇಶಭಕ್ತರು. ಕಾಂಗ್ರೆಸ್ಗೆ ಜೈ ಹೇಳಿದ್ರೆ ಆಯೆ ಬ್ಯಾರಿಯಾ.. ಎಂದು ಹೇಳುತ್ತಾರೆ. ಅಯ್ಯೋಧ್ಯೆ ಜನ ಮತ ನೀಡಿಲ್ಲ ಎಂದು ಅಯೋಧ್ಯೆಯನ್ನೇ ದೂರಿದ್ದರು ಬಿಜೆಪಿ ಮಂದಿ. ಇವರ ಮನಸ್ಸು ಮತ್ತು ದೇಹಕ್ಕೆ ಕಂಟ್ರೋಲ್ ತಪ್ಪಿದೆ ಎಂದರು.
ಬಿಜೆಪಿಯವರು ಯಾರಾದ್ರೂ ಕಾಮತ್ ಮತ್ತು ಭರತ್ ಅವರಿಗೆ ಸಲಹೆ ಕೊಡಲಿ. ಅಭಿವೃದ್ಧಿ ವಿಚಾರದ ಬಗ್ಗೆ ಮಾತನಾಡಲು ಸಲಹೆ ಕೊಡಿ ಎಂದು ಕಾಂಗ್ರೆಸ್ ವಕ್ತಾರ ಎಂಜಿ ಹೆಗ್ಡೆ ಸಲಹೆ ನೀಡಿದ್ದಾರೆ. ಗುರುಪುರ ಬ್ಲಾಕ್ ಕಾಂಗ್ರೆಸಿನ ರವೀಂದ್ರ ಕಂಬಳಿ ಮತ್ತಿತರರು ಇದ್ದರು.
Mg Hedge slams MLA Bharath shetty over remarks on Addur in Mangalore.
20-03-25 01:07 pm
Bangalore Correspondent
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
20-03-25 07:19 pm
HK News Desk
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm