ಬ್ರೇಕಿಂಗ್ ನ್ಯೂಸ್
23-08-24 03:24 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.23: ಬಾಂಗ್ಲಾ ಪರ ಹೇಳಿಕೆ ನೀಡಿದ್ದಕ್ಕಾಗಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಬಿಜೆಪಿಗರು ಪಟ್ಟು ಹಿಡಿದಿದ್ದರೆ, ಇತ್ತ ಮಂಗಳೂರಿನ ಕಾಂಗ್ರೆಸಿಗರು ಐವಾನ್ ಡಿಸೋಜ ಪರವಾಗಿ ಧ್ವನಿ ಎತ್ತಿದ್ದಾರೆ. ಇಂದು ಬೆಳಗ್ಗೆ ವೆಲೆನ್ಸಿಯಾದ ಐವಾನ್ ಡಿಸೋಜ ಮನೆಯಿಂದ ಕಂಕನಾಡಿ ವರೆಗೆ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಬಂದು ಪ್ರತಿಭಟನಾ ಸಭೆ ನಡೆಸಿದ್ದಾರೆ. ಇದೇ ವೇಳೆ, ಬಿಜೆಪಿಗರು ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಬಿಜೆಪಿ ಕಚೇರಿಯ ಮೆಟ್ಟಿಲಲ್ಲಿ ಕುಳಿತು ನಿಮಗೆ ಕಲ್ಲು ಹೊಡೆಯುವುದಲ್ಲ, ಇಲ್ಲಿಗೆ ಬಂದರೆ ಚಪ್ಪಲಲ್ಲಿ ಹೊಡೀತೇವೆ ಎಂದು ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕರು, ಬಿಜೆಪಿ ಶಾಸಕರ ಹೊಡಿ ಬಡಿ ಹೇಳಿಕೆಯನ್ನು ಖಂಡಿಸಿದರಲ್ಲದೆ, ನಿಮ್ಮ ಉಗ್ರವಾದವನ್ನು ಬದಿಗೊತ್ತಿ ಕರಾವಳಿಯಲ್ಲಿ ಶಾಂತಿಯ ಅಂಗಡಿ ತೆರೆಯುತ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ವಕ್ತಾರ ಎಂಜಿ ಹೆಗ್ಡೆ ಮಾತನಾಡಿ, ನಮ್ಮದು ಗಾಂಧೀಜಿಯ ನಿಲುವು. ಕರಾವಳಿಯಲ್ಲಿ ಗಾಂಧಿವಾದವೇ ಗೆಲ್ಲುವಂತೆ ಮಾಡುತ್ತೇವೆ. ಬಿಜೆಪಿಯ ಗೋಡ್ಸೆ ವಾದವನ್ನು ಹಿಮ್ಮೆಟ್ಟಿಸುತ್ತೇವೆ. ಭರತ್ ಶೆಟ್ಟಿ ರೌಡಿಯಂತೆ ಮಾತನಾಡುತ್ತಾರೆ, ಅವರಿಗೆ ರೌಡಿಯೇ ಆಗಬೇಕೆಂದಿದ್ದರೆ, ಶಾಸಕ ಸ್ಥಾನ ಬಿಟ್ಟು ಒಂದೆರಡು ಕೊಲೆಗಳನ್ನು ಮಾಡಲಿ. ರೌಡಿ ಪಟ್ಟ ತಾನಾಗಿಯೇ ಬರುತ್ತದೆ ಎಂದು ವ್ಯಂಗ್ಯವಾಡಿದರು.
ಐವಾನ್ ಡಿಸೋಜ ಮಾತನಾಡಿ, ತನ್ನ ವಿವಾದಿತ ಮಾತುಗಳನ್ನು ಉಲ್ಲೇಖಿಸುತ್ತಾ ನಾನೇನು ಬಾಂಗ್ಲಾ ರೀತಿ ಮಾಡುತ್ತೇವೆ ಎಂದು ಹೇಳಿಲ್ಲ. ಈ ರೀತಿ ವರ್ತಿಸಿದರೆ, ಅಂತಹ ಸ್ಥಿತಿ ಬರಬಹುದು ಎಂದಿದ್ದಷ್ಟೇ. ಇವರಿಗೆ ಬಾಂಗ್ಲಾ ಮುಸ್ಲಿಂ ರಾಷ್ಟ್ರ ಅಂತ ಸಹಿಸಲು ಆಗಲಿಲ್ಲ. ನನಗೆ ಬಾಂಗ್ಲಾನೂ ಒಂದೇ, ಲಂಕಾ, ಅಮೆರಿಕ, ಇಂಡೋನೇಷ್ಯಾ ಎಲ್ಲ ಒಂದೇ ರೀತಿಯದು. ಗಾಂಧಿಯನ್ನು ಕೊಂದವರನ್ನು ಪೂಜಿಸುವವರು ನೀವು. ಈಗ ಕಲ್ಲು ಹೊಡೆದಿರೋದು ಐವಾನ್ ಮನೆಗಲ್ಲ, ಕಾಂಗ್ರೆಸ್ ಮನೆಗೆ ಕಲ್ಲು ಹೊಡಿದಿದ್ದೀರಿ. ಇದರಿಂದ ಕೊಲೆ, ಗಲಭೆಗಳಾದರೆ ಲಾಭ ಆಗತ್ತೆ ಅಂತ ಅನ್ಕೊಂಡಿದ್ದಾರೆ. ನಾವೆಂದು ಇದಕ್ಕೆ ಬಗ್ಗಲ್ಲ. ನೀವು ಕಲ್ಲು ಹೊಡೆಯುತ್ತೀರಿ ಅಂತ ಯಾವ ಕಾಂಗ್ರೆಸ್ ಕಾರ್ಯಕರ್ತನೂ ಜಗ್ಗೋದೂ ಇಲ್ಲ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಜೆ.ಆರ್ ಲೋಬೊ, ಪಿವಿ ಮೋಹನ್, ದೇವಿಪ್ರಸಾದ್ ಶೆಟ್ಟಿ ಮತ್ತಿತರರಿದ್ದರು.
ಇತ್ತ ಕಾಂಗ್ರೆಸಿಗರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕೋದನ್ನು ಕೈಬಿಟ್ಟಿದ್ದಾರೆ ಎಂದು ತಿಳಿಯುತ್ತಲೇ ಪಿವಿಎಸ್ ವೃತ್ತದ ಬಳಿಯ ಬಿಜೆಪಿ ಕಚೇರಿಯಲ್ಲಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಕಾರ್ಯಕರ್ತರು ಸೇರಿದ್ದು ಕಾಂಗ್ರೆಸ್ ಮತ್ತು ಐವಾನ್ ಡಿಸೋಜ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ್ದಾರೆ. ಅಲ್ಲದೆ, ಹಳೆ ಚಪ್ಪಲಿ ರಾಶಿ ಹಾಕಿ ಮೆಟ್ಟಿಲಲ್ಲಿ ಕುಳಿತಿದ್ದಾರೆ. ಐವಾನ್ ಡಿಸೋಜ ಮತ್ತು ಅವರ ಬೆಂಬಲಿಗರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಬೇಕಿದ್ದರೆ ಇನ್ನೊಂದು ಜನ್ಮ ಎತ್ತಿ ಬರಬೇಕು ಎಂದು ಸವಾಲು ಹಾಕಿದ ಕಾಮತ್, ಧೈರ್ಯ ಇದ್ದರೆ ಇಲ್ಲಿಗೆ ಬರಲಿ. ನಾವು ಕಲ್ಲು ಎಸೆಯುವುದಿಲ್ಲ. ಕಲ್ಲನ್ನು ಆರಾಧಿಸುವವರು. ನೀವು ಮುತ್ತಿಗೆ ಹಾಕಲು ಬಂದರೆ ಚಪ್ಪಲಿಯಲ್ಲಿ ಹೊಡೆಯುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಐವಾನ್ ಡಿಸೋಜ ಮನೆಯಿಂದ ಬಿಜೆಪಿ ಕಚೇರಿ ವರೆಗೆ ಪಾದಯಾತ್ರೆ ನಡೆಸಿ, ಮುತ್ತಿಗೆ ಹಾಕುತ್ತೇವೆ ಎಂದು ಕಾಂಗ್ರೆಸ್ ವಕ್ತಾರ ಎಂ.ಜಿ. ಹೆಗ್ಡೆ ಹೇಳಿದ್ದರು. ಆದರೆ, ಇದರಿಂದ ಗಲಾಟೆಗೆ ಕಾರಣವಾಗುತ್ತದೆ ಎಂದು ಹೇಳಿ ಮುತ್ತಿಗೆಯಿಂದ ಕಾಂಗ್ರೆಸ್ ಹಿಂದೆ ಸರಿದಿತ್ತು.
Mangalore Congress protests stone pelting on MLC Ivan DSouza, BJP members gather at office. Congress supporters organized a procession from the residence of MLC Ivan D’Souza in Valencia to Kankanady, condemning the stone pelting incident on his house by unidentified miscreants.
20-03-25 01:07 pm
Bangalore Correspondent
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
20-03-25 07:19 pm
HK News Desk
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm