ಬ್ರೇಕಿಂಗ್ ನ್ಯೂಸ್
22-08-24 09:12 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್. 22: ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ನಿವಾಸಕ್ಕೆ ಕಲ್ಲು ತೂರಿದ ಘಟನೆಯನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸಿದ್ದು ವೆಲೆನ್ಸಿಯಾದ ಐವಾನ್ ಡಿಸೋಜ ನಿವಾಸದಿಂದ ಪಿವಿಎಸ್ ವೃತ್ತದ ಬಳಿಯ ಜಿಲ್ಲಾ ಬಿಜೆಪಿ ಕಚೇರಿ ವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಜಿ ಹೆಗಡೆ ಹೇಳಿದ್ದಾರೆ.
ಮಂಗಳೂರು ನಗರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ನಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಕಲ್ಲು ತೂರಾಟ ಘಟನೆಯನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇವರು ದೂರು ಕೊಟ್ಟಿದ್ದಾರೆ, ಪೊಲೀಸರು ಸರಿಯೆಂದು ಕಂಡರೆ ತನಿಖೆ ನಡೆಸುತ್ತಾರೆ ಎಂದವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಪ್ರಕರಣದ ರೀತಿಯಲ್ಲೇ ರಾಜ್ಯಪಾಲರು ಉಳಿದ ಪ್ರಕರಣಕ್ಕೂ ಪ್ಯಾಸಿಕ್ಯೂಷನ್ ಅನುಮತಿ ಕೊಡಬೇಕು. ಯಾಕೆ ಕೊಡುತ್ತಾ ಇಲ್ಲ. ಮೋದಿ ಸರ್ಕಾರದ ಸರ್ವಾಧಿಕಾರಿ ಲಕ್ಷಣದ ನಡವಳಿಕೆ ಇದು. ರಾಜ್ಯಪಾಲರು ಮೋದಿ, ಶಾ ಆದೇಶವನ್ನಷ್ಟೆ ಪಾಲನೆ ಮಾಡ್ತಾರೆ. ಇವರು ಸಂವಿಧಾನ ವಿರೋಧಿ ಕೆಲಸ ಮಾಡಿದರೆ ವಿರೋಧ ಮಾಡ್ತೇವೆ. ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದನ್ನು ಪ್ರಶ್ನೆ ಮಾಡಿದ್ದೇವೆ. ಬಿಜೆಪಿಯವರು ದಕ್ಷಿಣ ಭಾರತದಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಕರ್ನಾಟಕದಲ್ಲಿ ಸರ್ಕಾರ ಅಸ್ಥಿರಗೊಳಿಸಲು ಮುಂದಾಗಿದ್ದಾರೆ. ಆಮೂಲಕ ಇಲ್ಲಿನ ಗ್ಯಾರಂಟಿಯನ್ನು ಕಿತ್ತೊಗೆಯುವ ಉದ್ದೇಶ ಹೊಂದಿದ್ದಾರೆ.
ಬಿಜೆಪಿ ಶಾಸಕರು ಹಿಂದುತ್ವ ಆಧಾರದಲ್ಲಿ ಮಾತನಾಡಿದರೆ ಓಟು ಸಿಗುತ್ತೆ ಅಂದುಕೊಂಡಿದ್ದರು. ಆದರೆ ಇವರ ಮಾತು ಮೇಲಿನವರಿಗೆ ಹಿಡಿಸುತ್ತಿಲ್ಲ. ಡಿಸಿಸಿ ಕಚೇರಿಗೆ ಬಿಜೆಪಿಗರು ಮೂರು ಸಲ ಮುತ್ತಿಗೆ ಹಾಕಿದ್ದರು. ನಾವು ಈಗ ನಿಮ್ಮ ಕಚೇರಿಗೆ ನೋಟಿಸ್ ಕೊಟ್ಟೇ ಹೋಗ್ತೇವೆ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಹರೀಶ್ ಪೂಂಜಾ ಬಹಳ ಚಂದ ಮಾತಾಡ್ತಾರಲ್ಲಾ.. ನಿಮಗೆ ರಾಜಕಾರಣ ಮಾಡಲೇಬೇಕೆಂದಿದ್ದರೆ ಅಭಿವೃದ್ಧಿ ವಿಚಾರವಾಗಿ ಮಾತನಾಡಿ. ಅಭಿವೃದ್ಧಿ ರಾಜಕಾರಣ ಮಾಡಿ, ಪ್ರವಾಹ, ಡೆಂಗಿ ಸಮಸ್ಯೆ ಪರಿಹರಿಸಿ ಎಂದು ಕುಟುಕಿದರು.
ರಾಜ್ಯಪಾಲರು ಎಲ್ಲರಿಗೂ ನೋಟಿಸ್ ನೀಡಿದರೆ ಎಲ್ಲ ಪ್ರತಿಭಟನೆಯನ್ನು ಹಿಂಪಡೀತೇವೆ. ಅವರು ಸಾಂವಿಧಾನಿಕ ಸ್ಥಾನದಲ್ಲಿದ್ದು ತಾರತಮ್ಯ ಬಿಟ್ಟು ಕೆಲಸ ಮಾಡಲಿ. ಎಚ್ ಡಿಕೆ ಏನೇನೋ ಮಾತಾಡ್ತಾರೆ, ಅವರ ಮೇಲೆಯೇ ರಾಜ್ಯಪಾಲರ ಬಳಿ ಪ್ರಕರಣ ಇದೆ. ಈಗ ಬಿಜೆಪಿ ಕಾಲದಲ್ಲೇ ಮಾಡಿರೋದನ್ನು ಈಗ ನೀವೇ ಪ್ರಶ್ನೆ ಮಾಡ್ತೀರಿ. ಸಿದ್ದರಾಮಯ್ಯ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದರೆ ಅದು ಬಿಜೆಪಿ ಪಾಲಿನ ಕೊನೆಯ ಮೊಳೆಯಾಗಲಿದೆ ಎಂದು ಹೇಳಿದರು.
10-15 ವರ್ಷದಲ್ಲಿ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಕಲ್ಲು ಹೊಡೆದ ಪ್ರಕರಣ ಇದೇ ಮೊದಲು. ಹಾಗೆಂದು, ಉದ್ದೇಶಪೂರ್ವಕ ಕಲ್ಲು ಬಿಸಾಡಿದ್ದಲ್ಲ. ಇನ್ಸಿಡೆಂಟಲಿ ಆಗಿದೆ, ಅದನ್ನು ನಾವು ಸಪೋರ್ಟ್ ಮಾಡಲ್ಲ. ಹಾಗೆ ಮಾಡಬಾರದಿತ್ತು, ಹಿಂಸೆಯನ್ನು ಕಾಂಗ್ರೆಸ್ ಒಪ್ಪಲ್ಲ. ಹುಡುಗರಿಗೆ ಕರೆಸಿ ಬುದ್ಧಿ ಹೇಳಿದ್ದೇವೆ ಎಂದು ಹೇಳಿದರು.
Padayatra behalf of MLC Ivan dsouza says MG Hedge in Mangalore.
20-03-25 01:07 pm
Bangalore Correspondent
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
20-03-25 07:19 pm
HK News Desk
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm