ಬ್ರೇಕಿಂಗ್ ನ್ಯೂಸ್
20-08-24 10:23 pm Mangaluru Correspondent ಕರಾವಳಿ
ಪುತ್ತೂರು, ಆಗಸ್ಟ್ 20: ಅಪ್ರಾಪ್ತ ಮುಸ್ಲಿಂ ಬಾಲಕಿಯ ಕೈಗೆ ಗೀರಿದ ಘಟನೆ ಬಗ್ಗೆ ಪುತ್ತೂರು ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿತ ಬಾಲಕನ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬಾಲಕನು ಪ್ರೀತಿಸುತ್ತಿರುವ ವಿಚಾರದಲ್ಲಿ ಮಾತನಾಡಿದ್ದಾನೆ. ಈ ವೇಳೆ, ಬಾಲಕಿ ವಿರೋಧಿಸಿದ್ದಕ್ಕೆ ತನ್ನ ಕೈಯಲ್ಲಿದ್ದ ಯಾವುದೋ ಹರಿತ ವಸ್ತುವಿನಲ್ಲಿ ತಿವಿದು ಪರಾರಿಯಾಗಿದ್ದಾನೆ. ಗಾಯಗೊಂಡ ಬಾಲಕಿಯು ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾಳೆ.
ಆದರೆ, ಮಧ್ಯಾಹ್ನ ವಿಷಯ ತಿಳಿಯುತ್ತಲೇ ಬಾಲಕಿಯ ಮೇಲೆ ಚೂರಿ ಇರಿತವೆಂದು ಸುದ್ದಿ ಹಬ್ಬಿತ್ತು. ಮುಸ್ಲಿಂ ಸಂಘಟನೆ ಯುವಕರು, ಕಾಂಗ್ರೆಸ್ ಮುಖಂಡರು ಸೇರಿದಂತೆ ನೂರಾರು ಮಂದಿ ಸರ್ಕಾರಿ ಆಸ್ಪತ್ರೆಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಪುತ್ತೂರು ಪೊಲೀಸರು ಬಾಲಕಿಯ ಹೇಳಿಕೆ ಪಡೆದು ತನಿಖೆ ಆರಂಭಿಸಿದ್ದರು. ಮುಸ್ಲಿಂ ಮುಖಂಡರು ಆರೋಪಿತ ಬಾಲಕನ ವಿರುದ್ಧ ಕೊಲೆಯತ್ನ, ಪೋಕ್ಸೋ ಕೇಸು ದಾಖಲಿಸಬೇಕೆಂದು ಹೇಳಿಕೆಯನ್ನು ನೀಡಿ ಪೊಲೀಸರ ಮೇಲೆ ಒತ್ತಡವನ್ನೂ ಹಾಕಿದ್ದರು.
ಬಾಲಕಿ ನೀಡಿದ ಹೇಳಿಕೆಯಂತೆ, ಬೊಳುವಾರಿನಿಂದ ಕಾಲೇಜಿಗೆ ತೆರಳುವ ಹಾದಿಯ ಸಿಸಿಟಿವಿಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ, ಆರೋಪಿತ ಬಾಲಕನನ್ನು ಕರೆದು ವಿಚಾರಣೆ ನಡೆಸಿದ್ದು, ಆತ ತನಗೇನೂ ಗೊತ್ತಿಲ್ಲ ಎಂದಿದ್ದಾನೆಂದು ತಿಳಿದುಬಂದಿದೆ. ಬಾಲಕಿ ಜೊತೆಗಿದ್ದವರ ಹುಡುಗಿಯರನ್ನೂ ವಿಚಾರಣೆ ನಡೆಸಿದ್ದಾರೆ. ಸಂಜೆಯ ವೇಳೆಗೆ ಬಿಜೆಪಿ ಮುಖಂಡ ಅರುಣ್ ಪುತ್ತಿಲ ಮತ್ತು ಇತರರು ಪೊಲೀಸ್ ಠಾಣೆಗೆ ತೆರಳಿ, ಸೂಕ್ತ ತನಿಖೆಗೆ ಆಗ್ರಹ ಮಾಡಿದ್ದಾರೆ. ಆನಂತರ, ಮಾಧ್ಯಮಕ್ಕೆ ಹೇಳಿಕೆ ನೀಡಿದ ಪುತ್ತಿಲ, ಘಟನೆಯ ಬಗ್ಗೆ ಸಂಶಯದ ಮಾತುಗಳನ್ನಾಡಿದ್ದಾರೆ. ಒಟ್ಟು ಘಟನೆ ಕಟ್ಟುಕತೆಯೆಂದು ಆರೋಪಿಸಿದ್ದು, ಪೊಲೀಸರು ಸತ್ಯಾಸತ್ಯತೆ ಅರಿಯಲು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಪೊಲೀಸರು ಆರೋಪಿತ ಬಾಲಕ ಮೈನರ್ ಆಗಿರುವುದರಿಂದ ವಿಚಾರಣೆ ನಡೆಸಿ ಕಳುಹಿಸಿಕೊಟ್ಟಿದ್ದಾರೆ. ಕಾಲೇಜಿನ ಶಿಕ್ಷಕರ ಬಳಿಯೂ ಮಾಹಿತಿ ಕೇಳಿದ್ದಾರೆ. ಬಾಲಕ ಮತ್ತು ಬಾಲಕಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾಗಿದ್ದು, ಇಬ್ಬರೂ ಅಪ್ರಾಪ್ತರು ಆಗಿದ್ದಾರೆ. ಹೀಗಾಗಿ ಪೊಲೀಸರು ತನಿಖೆ ನಡೆಸುವಾಗಲೂ ಜಾಗ್ರತೆ ವಹಿಸಿದ್ದಾರೆ. ಆದರೆ ಬಾಲಕ, ಬಾಲಕಿಯ ಹೇಳಿಕೆ, ಸಹಪಾಠಿಗಳ ಹೇಳಿಕೆಗಳು ಪೊಲೀಸರಿಗೂ ಗೊಂದಲ ಸೃಷ್ಟಿಸಿದೆ.
Mangalore Puttur attack on girl student, Arun Puthila says its a fake story. A college student in Puttur town allegedly stabbed his college mate and injured her in the hand on Tuesday. The girl was rushed to the government hospital.
20-03-25 01:07 pm
Bangalore Correspondent
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
20-03-25 07:19 pm
HK News Desk
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm