ಬ್ರೇಕಿಂಗ್ ನ್ಯೂಸ್
19-08-24 12:25 pm Udupi Correspondent ಕರಾವಳಿ
Photo credits : Udayavani
ಉಡುಪಿ, ಆಗಸ್ಟ್.18: ಶಿರ್ವ ಶ್ರೀ ಸಿದ್ಧಿವಿನಾಯಕ ದೇಗುಲದ ಸಂಸ್ಥಾಪಕ ಗ್ಯಾಬ್ರಿಯಲ್ ಫೇಬಿಯನ್ ನಜರೆತ್ (80) ಅವರು ಅಲ್ಪಕಾಲದ ಅನಾರೋಗ್ಯದ ಬಳಿಕ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಅವಿವಾಹಿತರಾಗಿದ್ದರು.
ಸಿದ್ಧಿವಿನಾಯಕನ ಪರಮ ಭಕ್ತರಾಗಿದ್ದ ಅವರು ತನ್ನ ಧರ್ಮದ ಜತೆಗೆ ಹಿಂದೂ ಧರ್ಮದ ಬಗ್ಗೆ ಪ್ರೀತಿ, ಕಾಳಜಿ ಹೊಂದಿದ್ದರು. ಮುಂಬೈಯಲ್ಲಿದ್ದ ಉದ್ದಿಮೆಯನ್ನು ಮಾರಾಟ ಮಾಡಿ ಊರಿಗೆ ಬಂದು ನೆಲೆಸಿದ ಬಳಿಕ ಸುಮಾರು 15 ಸೆಂಟ್ಸ್ ಜಾಗದಲ್ಲಿ ಕಟಪಾಡಿ-ಶಿರ್ವ ಮುಖ್ಯರಸ್ತೆಯ ಮಟ್ಟಾರು-ಅಟ್ಟಿಂಜ ಕ್ರಾಸ್ ಬಳಿ 2 ಕೋ.ರೂ ವೆಚ್ಚದಲ್ಲಿ ತನ್ನ ಹೆತ್ತವರ ನೆನಪಿಗಾಗಿ ಶ್ರೀ ಸಿದ್ದಿವಿನಾಯಕನ ದೇಗುಲ ನಿರ್ಮಿಸಿ ಹಿಂದು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದರು.
ಪಲಿಮಾರು ಮಠಾಧೀಶರ ಮಾರ್ಗದರ್ಶನದಲ್ಲಿ 2021ರ ಜು.15ರಂದು ಶ್ರೀ ಸಿದ್ಧಿ ವಿನಾಯಕ ದೇಗುಲ ಲೋಕಾರ್ಪಣೆಗೊಂಡಿತ್ತು. ದೇಗುಲದ ತೃತೀಯ ವರ್ಷದ ಪ್ರತಿಷ್ಠಾ ವರ್ಧಂತಿ ಇದೇ ಜುಲೈ 15 ರಂದು ನಡೆದಿದ್ದು ಅದೇ ಸಂದರ್ಭದಲ್ಲಿ ನಜ್ರತ್ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಹಿಂದೆ ಮುಂಬೈಯ ಪ್ರಭಾದೇವಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬಳಿ ವಾಸ್ತವ್ಯವಿದ್ದ ಅವರು ಶ್ರೀ ಸಿದ್ಧಿವಿನಾಯಕನನ್ನ ನೆನೆದು ಸ್ವಪ್ರಯತ್ನದಿಂದ ದೇವಸ್ಥಾನದ ಬಳಿಯೇ ಪ್ಲಾಸ್ಟಿಕ್ ಮತ್ತು ಮೆಟಲ್ ಡೈ ಮೇಕಿಂಗ್ ವರ್ಕ್ ಶಾಪ್ ಸ್ಥಾಪಿಸಿ ಯಶಸ್ಸು ಗಳಿಸಿದ್ದರು. 40 ವರ್ಷಗಳಲ್ಲಿ ಮೂರು ಕಡೆ ಉದ್ದಿಮೆ ಸ್ಥಾಪಿಸಿದ್ದರು. ಕೊನೆಗೆ, ಮುಂಬೈಯ ಉದ್ದಿಮೆಯನ್ನು ಮಾರಾಟ ಮಾಡಿ ಬಂದ ಹಣವನ್ನು ಅಲ್ಲಿನ ಸಿಬಂದಿ ವರ್ಗಕ್ಕೆ ದಾನವಾಗಿ ನೀಡಿದ್ದರು.
ಊರಿಗೆ ಬಂದು ಜಾತಿ ಮತ ಧರ್ಮದ ಭೇದವಿಲ್ಲದೆ ಸುಮಾರು 60 ಮಂದಿಯ ಮದುವೆಗೆ ಧನಸಹಾಯ ಮಾಡಿದ್ದರು. ಅಲ್ಲದೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದರು. ಸರ್ವ ಧರ್ಮೀಯ ಬಡವರ ಸೇವೆಗಾಗಿ ನಿವೇಶನವನ್ನೂ ಕೊಡುಗೆಯಾಗಿ ನೀಡಿದ್ದರು.
ಮೃತರ ಅಂತ್ಯಕ್ರಿಯೆ ಆ.19 ರಂದು ಮಧ್ಯಾಹ್ನ 3 ಗಂಟೆಗೆ ಶಿರ್ವ ಆರೋಗ್ಯ ಮಾತೆಯ ದೇಗುಲದಲ್ಲಿ ನಡೆಯಲಿದೆ. ಮೃತರ ಅಂತಿಮ ದರ್ಶನಕ್ಕಾಗಿ ಸಾರ್ವಜನಿಕರಿಗೆ ಬೆಳಗ್ಗೆ 11ರಿಂದ ಸಿದ್ಧಿವಿನಾಯಕ ದೇಗುಲದ ಬಳಿಯ ಅವರ ನಿವಾಸದಲ್ಲಿ ಅವಕಾಶ ಕಲ್ಪಿಸಲಾಗಿದೆ.
Gabriel Fabian Nazareth (80), the founder of Shirva Shri Siddhivinayaka temple, passed away on Sunday, August 18 at a private hospital in Udupi. He was unmarried. The funeral rites will be held on August 19 at 3:00 PM at Shirva Health Mother Church. The public can pay their last respects from 11 AM at his residence near the Shri Siddhivinayak Temple.
20-03-25 10:48 pm
Bangalore Correspondent
Honey Trapped, Minister, Probe: ಅಧಿವೇಶನದಲ್ಲಿ...
20-03-25 09:52 pm
Bangalore Marriage case, Srikanth Bindushree:...
20-03-25 01:07 pm
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
20-03-25 10:40 pm
HK News Desk
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm