ಬ್ರೇಕಿಂಗ್ ನ್ಯೂಸ್
17-08-24 05:30 pm Mangalore Correspondent ಕರಾವಳಿ
ಪುತ್ತೂರು, ಆಗಸ್ಟ್.17: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತೆ ಸಾರ್ವಜನಿಕರ ಮಧ್ಯೆ ಮಾತಿಗೆ ಮಾತು ಬೆಳೆಸಿ ಬೆತ್ತಲಾಗಿದ್ದಾರೆ. ಮಳೆ ಹಾನಿ ಪೀಡಿತ ಪ್ರದೇಶಕ್ಕೆ ತಿಂಗಳ ನಂತರ ಬಂದಿದ್ದಾರೆಂದು ಸವಣಾಲು ಗ್ರಾಮದ ಸಾರ್ವಜನಿಕರು ಶಾಸಕರನ್ನು ತರಾಟೆಗೆತ್ತಿಕೊಂಡಿದ್ದು, ಈ ವೇಳೆ ಅನಗತ್ಯ ಮಾತುಗಳನ್ನಾಡಿ ತೀವ್ರ ಮುಜುಗರ ಅನುಭವಿಸಿದ್ದಾರೆ. ಸಾರ್ವಜನಿಕರು ಪ್ರಶ್ನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಮಳೆಯಿಂದಾಗಿ ಸವಣಾಲು ಗ್ರಾಮದಲ್ಲಿ ರಸ್ತೆ ಹಾಳಾಗಿದ್ದು, ವಾಹನಗಳು ಸಂಚರಿಸದ ಸ್ಥಿತಿಯಾಗಿದೆ. ರಸ್ತೆ ದುಸ್ಥಿತಿಗೆ ಒಳಗಾಗಿದ್ದರೂ ಶಾಸಕರು ಸ್ಥಳಕ್ಕೆ ಬಂದಿಲ್ಲ ಎಂಬ ಸಿಟ್ಟಿನಲ್ಲಿ ಸ್ಥಳೀಯರಿದ್ದರು. ಬಿಜೆಪಿ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಶಾಸಕ ಹರೀಶ್ ಪೂಂಜಾ ಸ್ಥಳಕ್ಕೆ ಬಂದಿದ್ದರೆ, ಅಲ್ಲಿ ಸೇರಿದ್ದ ಸಾರ್ವಜನಿಕರು ಶಾಸಕರನ್ನು ಪ್ರಶ್ನೆ ಮಾಡಿದ್ದಾರೆ.
ರಸ್ತೆ ರಿಪೇರಿಗೆ ನನ್ನ ಕ್ಷೇತ್ರಾಭಿವೃದ್ಧಿ ಅನುದಾನದಿಂದ 5 ಲಕ್ಷ ಕೊಡುತ್ತೇನೆ, ಆದರೆ ಇಂಥ ನಾಯಿಗಳನ್ನು ನನ್ನ ಬಳಿಗೆ ಕರೆತರಬೇಡಿ ಅಂತ ತನ್ನ ಕಾರ್ಯಕರ್ತರಲ್ಲಿ ಶಾಸಕ ಹರೀಶ್ ಪೂಂಜಾ ಹೇಳಿದ್ದು, ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿದೆ. ಒಂದಷ್ಟು ಸಾರ್ವಜನಿಕರು ಮತ್ತು ಇನ್ನೊಂದಷ್ಟು ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿ ಸೇರಿದ್ದರು. ಇವರ ನಡುವೆಯೇ ಮಾತಿನ ಚಕಮಕಿ ನಡೆದಿದೆ. ನಿಮ್ಮ ಶಾಸಕ ಇದ್ದಾಗ ಯಾಕೆ ರಸ್ತೆ ಮಾಡಿಲ್ಲ ಎಂದು ಬಿಜೆಪಿಗರು ಕೇಳಿದರೆ, ನಿಮ್ಮ ಶಾಸಕ ಮತ್ತೆ ಯಾಕಿರೋದು ಈಗ ಎಂದು ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ, ಶಾಸಕ ಹರೀಶ್ ಪೂಂಜಾ ಹೋಗೆಲೋ ಎಂದು ಏಕವಚನದಲ್ಲಿ ಹರಿಹಾಯ್ದಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಜೋರು ಧ್ವನಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಹೋಗೆಲೋ ಎನ್ನಲು ಇವನ್ಯಾರು. ನಾವು ಇದೇ ಊರಿನವರು. ನಮ್ಮ ಊರಿಗೆ ಬಂದು ಹೋಗು ಅನ್ನೋದಕ್ಕೆ ಇವ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಕೊನೆಗೆ, ನಾನೊಬ್ಬ ಶಾಸಕ. ನೀವು ನನ್ನನ್ನು ಇಲ್ಲಿಗೆ ಬರಬಾರದು ಅಂತ ಹೇಳುವುದು ಸರಿಯಲ್ಲ. ಅಷ್ಟಕ್ಕೂ ನೀವು ನನ್ನ ಬಗ್ಗೆ ಆರೋಪ ಮಾಡಿದರೆ, ದೇವರಿಗೆ ಇಡುತ್ತೇನೆ. ದೇವರು ನೋಡಿಕೊಳ್ಳುತ್ತಾರೆ ಎಂದು ಹರೀಶ್ ಪೂಂಜಾ ಹೇಳಿದ್ದಾರೆ. ಇದಕ್ಕೆ ಸಾರ್ವಜನಿಕರು ಎಲ್ಲದಕ್ಕೂ ದೇವರನ್ನು ಎಳೆದು ತರುವ ಇವನೂ ಒಬ್ಬ ಶಾಸಕನಾ ಎಂದು ವ್ಯಂಗ್ಯವಾಡಿದ್ದಾರೆ.
#Belthangady Villagers slam MLA #HarishPoonja openly on his face, video goes viral on social media in #Mangalore #BreakingNews pic.twitter.com/JvkqhhsoTk
— Headline Karnataka (@hknewsonline) August 17, 2024
Belthangady Villagers slam MLA Harish Poonja openly on his face, video goes viral on social media. MLA who didn't even visit the villagers during rain was slammed by residents in singular words.
20-03-25 10:48 pm
Bangalore Correspondent
Honey Trapped, Minister, Probe: ಅಧಿವೇಶನದಲ್ಲಿ...
20-03-25 09:52 pm
Bangalore Marriage case, Srikanth Bindushree:...
20-03-25 01:07 pm
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
20-03-25 10:40 pm
HK News Desk
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm