ಬ್ರೇಕಿಂಗ್ ನ್ಯೂಸ್
17-08-24 04:48 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.17: ಕೊಲ್ಕೊತ್ತಾದಲ್ಲಿ ವೈದ್ಯ ಯುವತಿಯನ್ನು ಅತ್ಯಾಚಾರಗೈದು ಅಮಾನುಷವಾಗಿ ಹತ್ಯೆಗೈದ ಘಟನೆಯನ್ನು ಖಂಡಿಸಿ ಮಂಗಳೂರಿನಲ್ಲಿ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ವೆನ್ಲಾಕ್ ಹಿಂಭಾಗದಲ್ಲಿರುವ ಭಾರತೀಯ ವೈದ್ಯರ ಸಂಘದ ಜಿಲ್ಲಾ ಘಟಕದ ಕಚೇರಿಯ ಬಳಿ ಸೇರಿದ ವೈದ್ಯರು ಬಳಿಕ ಹಂಪನಕಟ್ಟೆ, ಕ್ಲಾಕ್ ಟವರ್ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿಗೆ ಶಾಂತಿಯುತ ನಡಿಗೆಯಲ್ಲಿ ಸಾಗಿದರು. ವೈದ್ಯರು, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ಇತರ ಸಿಬಂದಿ ಸೇರಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಸಾಥ್ ಕೊಟ್ಟರು.
ಪ್ರತಿಭಟನಾ ಜಾಥಾದ ನಡುವೆ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಕೂಡ ಸಾಥ್ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಆವರಣದ ಗೇಟ್ ಬಳಿ ಪೊಲೀಸರು ತಡೆ ಹಾಕಿ, ಹತ್ತು ಮಂದಿಗಷ್ಟೇ ಜಿಲ್ಲಾಧಿಕಾರಿ ಬಳಿಗೆ ಹೋಗಲು ಅವಕಾಶ ನೀಡುತ್ತೇವೆಂದು ಹೇಳಿದರು. ಈ ವೇಳೆ, ಶಾಸಕರು ಮತ್ತು ವೈದ್ಯಕೀಯ ಸಂಘದ ಪ್ರತಿನಿಧಿಗಳು ಹಾಗೂ ಪೊಲೀಸರ ನಡುವೆ ಕೆಲಹೊತ್ತು ಮಾತುಕತೆ ನಡೆಯಿತು. ಶಾಸಕರು ನಾವೆಲ್ಲ ಒಳಗಡೆ ಬರುತ್ತೇವೆ ಎಂದಾಗ, ಡಿಸಿಪಿ ಸಿದ್ಧಾರ್ಥ ಗೋಯಲ್ ಅವಕಾಶ ನೀಡಲಿಲ್ಲ. ಬಳಿಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಥಳಕ್ಕೆ ಬಂದು ವೈದ್ಯರ ಸಂಘದ ಮನವಿಯನ್ನು ಸ್ವೀಕರಿಸಿದರು.
ಇದೇ ವೇಳೆ, ಮಾಧ್ಯಮಕ್ಕೆ ಮಾತನಾಡಿದ ವೈದ್ಯರ ಸಂಘದ ನಿಯೋಜಿತ ಅಧ್ಯಕ್ಷೆ ಡಾ.ಜೆಸ್ಸಿ ಮರಿಯಾ ಡಿಸೋಜ, ಭಾರತವನ್ನು ಭಾರತ ಮಾತೆಯೆಂದು ಪೂಜಿಸುತ್ತೇವೆ. ತಾಯಿಗೆ ಪವಿತ್ರ ಸ್ಥಾನ ಕೊಟ್ಟ ದೇಶದಲ್ಲಿ ಮಹಿಳೆಗೆ ರಕ್ಷಣೆ ಇಲ್ಲದಾಗಿರುವುದು ದೌರ್ಭಾಗ್ಯ. ಯಾರು ಈ ಅಮಾನುಷ ಕೃತ್ಯ ಮಾಡಿದ್ದಾರೋ ಅವರಿಗೆ ತ್ವರಿತ ಗತಿಯಲ್ಲಿ ಶಿಕ್ಷೆ ನೀಡುವಂತಾಗಬೇಕು ಎಂದು ಆಗ್ರಹಿಸಿದರು. ವೈದ್ಯರ ಸಂಘದ ಡಾ.ರಂಜನ್ ಕಾಮತ್, ಡಾ.ಅವಿನ್ ಆಳ್ವ. ಡಾ.ಮಹಾಬಲ ಶೆಟ್ಟಿ ಮತ್ತಿತರರಿದ್ದರು.
The Indian Medical Association (IMA) Mangaluru Chapter, in collaboration with various voluntary organizations, organized a 'Silent March' on Saturday, August 17, to demand justice and protest against the recent murder of a doctor on duty in Kolkata.
20-03-25 10:48 pm
Bangalore Correspondent
Honey Trapped, Minister, Probe: ಅಧಿವೇಶನದಲ್ಲಿ...
20-03-25 09:52 pm
Bangalore Marriage case, Srikanth Bindushree:...
20-03-25 01:07 pm
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
20-03-25 10:40 pm
HK News Desk
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm