ಬ್ರೇಕಿಂಗ್ ನ್ಯೂಸ್
15-08-24 10:44 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.15: ಕೆತ್ತಿಕಲ್ಲಿನಲ್ಲಿ ಭೂಕುಸಿತ ತಡೆಯುವ ಬಗ್ಗೆ ಮತ್ತು ಇದಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಇತರೇ ಅಧಿಕಾರಿಗಳ ಜೊತೆಗೆ ಆಗಸ್ಟ್ 14ರಂದು ಸಭೆ ನಡೆಸಿದ್ದು ವರದಿ ಕೊಟ್ಟಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯಿಂದ ಕೆತ್ತಿಕಲ್ಲು ಭೂಕುಸಿತ ಪ್ರದೇಶದ ನಿವಾಸಿಗಳ ಹಿತದೃಷ್ಟಿಯಿಂದ ಅವರನ್ನು ಬೇರೆ ಕಡೆ ಸ್ಥಳಾಂತರ ಮಾಡಲಾಗಿದ್ದು, ಅವರಿಗೆ ರೂ10,000/-ದಿಂದ 20,000/- ವರೆಗೆ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಪ್ರದೇಶದಲ್ಲಿ ಮೇಲಿನಿಂದ ಕೆಳಗೆ ಹರಿಯುವ ನೀರನ್ನು ಭೂಕುಸಿತ ಪ್ರದೇಶದ ವಿರುದ್ಧ ದಿಕ್ಕಿಗೆ ಹರಿದು ಹೋಗುವಂತೆ ಚರಂಡಿ ವ್ಯವಸ್ಥೆ ಕಾರ್ಯಗತಗೊಳಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ವರದಿ ಸಲ್ಲಿಸಿರುತ್ತಾರೆ.
ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಭೂಕುಸಿತ ವಲಯ ತೋರಿಸುವ ಎಚ್ಚರಿಕೆ ಫಲಕಗಳನ್ನು, ವೇಗಮಿತಿ ಫಲಕಗಳನ್ನು ಮತ್ತು ರಾತ್ರಿ ಸಂಚಾರ ಸುಗಮವಾಗಿ ಸಾಗುವಂತೆ ಪ್ಲಡ್ ಲೈಟ್ಗಳನ್ನು ಅಳವಡಿಸಲಾಗಿದೆ. ತಿರುವುಗಳಲ್ಲಿ ಹಾಗೂ ಅಗತ್ಯವಿರುವ ಕಡೆಗಳಲ್ಲಿ ಪ್ರತಿಫಲಿತ ಕಾಂಕ್ರೀಟ್ ಬ್ಯಾರಿಕೇಡ್ ಹಾಕಲಾಗಿದೆ.
ತುರ್ತು ಸಂದರ್ಭಗಳಿಗಾಗಿ ಅಗೆಯುವ ಯಂತ್ರ, ಜೆಸಿಬಿ, ಗ್ರೇಡರ್, ರೋಲರ್ ಮತ್ತು ಡಂಪರ್ ನಂತಹ ಯಂತ್ರೋಪಕರಣಗಳನ್ನು ಅಗತ್ಯ ಮಾನವ ಸಂಪನ್ಮೂಲದೊಂದಿಗೆ ನಿಲ್ಲಿಸಲಾಗಿದೆ. ಮಳೆನೀರು ನಿಲ್ಲದಂತೆ ಸರಾಗವಾಗಿ ಹರಿದು ಹೋಗಲು ಮಣ್ಣಿನ ಚರಂಡಿಗಳನ್ನು ಮಾಡಲಾಗಿದೆ. ಅಲ್ಲದೇ ಸದರಿ ಭೂಕುಸಿತ ಪ್ರದೇಶದಲ್ಲಿ 24 ಗಂಟೆಗಳ ಕಾಲವೂ ನಿಗಾ ವಹಿಸಲಾಗುತ್ತಿದೆ ಎಂದು NHAI ವರದಿ ಸಲ್ಲಿಸಿದೆ.
ಜಿಯೋಲಜಿಕಲ್ ಸರ್ವೆ ಆಫ್ ಇಂಡಿಯಾ (GSI) ಸಲಹೆಯಂತೆ, ಘಟನಾ ಸ್ಥಳದಲ್ಲಿ ನೀರಿನ ಸಂಗ್ರಹ ಆಗದಂತೆ, ಚರಂಡಿ ಮಾಡಿ ಕಾಂಕ್ರೀಟ್ ಬಾಕ್ಸ್ ಬಳಸಿ, ನೀರು ಮಣ್ಣಿನ ಒಳಗೆ ನುಗ್ಗದೆ, ಹರಿದು ಹೋಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಕೆತ್ತಿಕಲ್ಲು ಭೂಕುಸಿತ ಪ್ರದೇಶದಲ್ಲಿ ಅನಧಿಕೃತವಾಗಿ ಮಣ್ಣು ತೆಗೆದಿರುವ ಭೂಮಾಲಿಕರು ಮತ್ತು NHAI ನವರು ಅನುಮತಿಸಿದ DBL ಕಂಪನಿಯವರ ವಿರುದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಭಾರತಿಯ ನಾಗರಿಕ ಸುರಕ್ಷಾ ಸಂಹಿತೆ (BNSS) ಹಾಗೂ MMDR ಕಾಯ್ದೆ-1957 ರಡಿ FIR ದಾಖಲಿಸಲಾಗಿದೆ. ಹಾಗೂ ವೆಟ್ ವೆಲ್ ನ ಸುರಕ್ಷತೆಗೆ ಅಪಾಯವಿರುವುದರಿಂದ ಮಹಾನಗರ ಪಾಲಿಕೆ ಅವರಿಂದಲೂ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.
2018 ರಿಂದ 2022 ರ ಅವಧಿಯಲ್ಲಿ ಗರಿಷ್ಠ ಮಣ್ಣು ಅಗೆಯುವಿಕೆ ನಡೆದಿರುವುದಾಗಿ NHAI, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ GSI ಉಪಗ್ರಹದ ಛಾಯಾಚಿತ್ರಗಳ ಮೂಲಕ ತಿಳಿಯುತ್ತದೆ. ಈ ಬಗ್ಗೆ ಸಾಕ್ಷಿಯಾಗಿ 2022 ಡಿಸೆಂಬರ್ ತಿಂಗಳ ವಿಡೀಯೋವನ್ನು NHAI ಒದಗಿಸಿದೆ. ಮಣ್ಣು ಅಗೆದ ಚಟುವಟಿಕೆಗಳ ಬಗ್ಗೆ ಉನ್ನತ ಮಟ್ಟದ ತನಿಖೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರಾರಂಭವಾಗಿದ್ದು, ಇಲಾಖಾ ಅಧಿಕಾರಿಗಳು, NHAI, DBL ಕಂಪನಿ, ಭೂಮಾಲಿಕರು, ಅಗತ್ಯ ದಾಖಲೆಗಳನ್ನು ಮಂಡಿಸಿರುತ್ತಾರೆ. ಮುಂದಿನ ಕ್ರಮಕ್ಕಾಗಿ ಪೊಲೀಸ್ ತನಿಖೆಯನ್ನು ನಡೆಸಲು ಸಹಾಯಕ ಪೊಲೀಸ್ ಆಯುಕ್ತರು, ಸೆಂಟ್ರಲ್ ವಿಭಾಗ, ಮಂಗಳೂರು ನಗರ ಇವರನ್ನು ತನಿಖಾಧಿಕಾರಿಯನ್ನಾಗಿ ಪೊಲೀಸ್ ಆಯುಕ್ತರು ನೇಮಿಸಿರುತ್ತಾರೆ. ಪೊಲೀಸ್ ವರದಿ ಆಧಾರದ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಶಿಸ್ತು ಕ್ರಮ ಜರುಗಿಸಲಾಗುವುದು.
MCC ಪರವಾಗಿ NITK ತಂಡ , ಜಿಲ್ಲಾಡಳಿತದ ಪರವಾಗಿ GSI ತಂಡ ಹಾಗೂ NHAI ಪರವಾಗಿ IIT ತಂಡದವರು ಸ್ಥಳಕ್ಕೆ ಭೇಟಿ ನೀಡಿ, ಒಟ್ಟು ಮೇಲ್ಮೈ ನೀರು, ನೀರಿನ ಮಟ್ಟ, ನೀರಿನ ಮೂಲ, ಮಣ್ಣಿನ ಗುಣ ಮತ್ತಿತರ ಮಾಹಿತಿಗಳನ್ನು ಈಗಾಗಲೆ ಸಂಗ್ರಹಿಸಿದ್ದಾರೆ. ಈ ಸಮಿತಿಯು ಕೆತ್ತಿಕಲ್ ನಲ್ಲಿ ಯಾವ ರೀತಿಯ ಪರ್ಯಾಯ ವ್ಯವಸ್ಥೆ ಮಾಡಬೇಕು, ಶಾಶ್ವತ ಪರಿಹಾರ ಸಾಧ್ಯವೇ ಎಂಬುದರ ಬಗ್ಗೆ ವರದಿ ನೀಡಲಿದೆ. ಇದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇನ್ನಷ್ಟು ಭೂಕುಸಿತ ತಡೆಗಟ್ಟಲು ಈಗಾಗಲೇ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
24 hours surveillance on Kethikal highway to avoid landslide or disaster says Dc of Mangalore. This was done soon after officials have stated that there would be huge landslide and residents are at risk.
27-08-25 12:33 pm
Bangalore Correspondent
Dk Shivakumar, Chamundi Hill: ಚಾಮುಂಡಿ ಬೆಟ್ಟ ಹ...
27-08-25 11:48 am
R Ashok, Dharmasthala: ಬುರುಡೆ ಕಥೆ ಹೊರಗಡೆ ಬಂದ...
26-08-25 10:47 pm
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm