ಬ್ರೇಕಿಂಗ್ ನ್ಯೂಸ್
15-08-24 09:17 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.15: ಕೆತ್ತಿಕಲ್ ಭೂಕುಸಿತ ಘಟನೆ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ತನಿಖೆಗೆ ಸಮಿತಿ ರಚಿಸಲಾಗಿದೆ. ಒಂದು ತಿಂಗಳೊಳಗೆ ಸಮಿತಿ ವರದಿ ನೀಡಲಿದ್ದು ಯಾವ ರೀತಿಯ ತಪ್ಪಾಗಿದೆ ಎನ್ನುವ ಬಗ್ಗೆ ವರದಿ ಆಧರಿಸಿ ಕ್ರಮ ಜರುಗಿಸಲಾಗುವುದು. ಆ ಜಾಗದಲ್ಲಿ 2019ರಿಂದಲೇ ಮಣ್ಣು ಎತ್ತಲಾಗಿದ್ದು, ಆವಾಗಿನಿಂದ ಅಧಿಕಾರಿಗಳು ಯಾರೆಲ್ಲ ಇದ್ದರು ಎನ್ನೋದನ್ನು ನೋಡಬೇಕಾಗುತ್ತದೆ. ಈಗಾಗಲೇ ಜಿಲ್ಲಾಧಿಕಾರಿ ಸೂಚನೆಯಂತೆ ಎರಡು ಎಫ್ಐಆರ್ ರಿಜಿಸ್ಟರ್ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುದ್ದಿಗೋಷ್ಟಿ ಕರೆದ ಸಂದರ್ಭದಲ್ಲಿ ಈ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ. ಈಗಾಗಲೇ ಎನ್ಐಟಿಕೆ ಮತ್ತು ಜಿಎಸ್ಐ ವತಿಯಿಂದ ಪ್ರತ್ಯೇಕವಾಗಿ ರಿಪೋರ್ಟ್ ಪಡೆದಿದ್ದೇವೆ. ಕುಸಿತ ತಡೆಯುವುದಕ್ಕೆ ಯಾವ ರೀತಿಯ ಕ್ರಮ ಆಗಬೇಕು ಎನ್ನುವ ವರದಿ ಕೇಳಿದ್ದೇವೆ ಎಂದು ಹೇಳಿದರು. ಇದೇ ವೇಳೆ, ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಡಿಬಿಎಲ್ ಕಂಪನಿ ಮತ್ತು ಖಾಸಗಿ ಭೂಮಾಲಕರ ಮೇಲೆ ಮೈನ್ಸ್ ಮತ್ತು ಜೀಯೋಲಜಿಯಿಂದ ಒಂದು ಎಫ್ಐಆರ್ ದಾಖಲು ಮಾಡಲಾಗಿದೆ. ನೀರು ಶೇಖರಣೆಯ ವೆಟ್ ವೆಲ್ ಗೆ ಅಪಾಯ ಆಗುವಂತೆ ನಡೆದುಕೊಂಡ ಬಗ್ಗೆ ಮಹಾನಗರ ಪಾಲಿಕೆಯಿಂದ ಇನ್ನೊಂದು ಎಫ್ಐಆರ್ ಮಾಡಲಾಗಿದೆ ಎಂದರು.
ಗ್ಯಾರಂಟಿ ಯೋಜನೆ ಪರಿಷ್ಕರಿಸುವ ಬಗ್ಗೆ ಕೇಳಿದ ಪ್ರಶ್ನೆಗೆ, ಗ್ಯಾರಂಟಿ ಯೋಜನೆ ಕಾಂಗ್ರೆಸ್ ಪಕ್ಷದ ಯೋಜನೆಯಾಗಿದ್ದು ಬಡವರನ್ನು ಮೇಲೆತ್ತುವ ದೃಷ್ಟಿಯಿಂದ ಮಾಡಿರುವಂಥದ್ದು. ಅದರಲ್ಲಿ ಲೋಪ ಆಗಿದ್ದರೆ, ಶ್ರೀಮಂತರಿಗೂ ಯೋಜನೆಯ ಲಾಭ ಹೋಗುತ್ತಿದ್ದರೆ ಪರಿಶೀಲನೆ ನಡೆಸಿ ಪರಿಷ್ಕರಣೆ ಮಾಡಬಹುದು. ಆದರೆ ಆ ರೀತಿ ಆಗುತ್ತಿರುವುದರ ಬಗ್ಗೆ ಸರ್ವೆಯಿಂದಷ್ಟೆ ತಿಳಿಯಬಹುದು ಎಂದು ಹೇಳಿದರು.
Mangalore Kethikal landslide, FIR against DBL company and private persons over negligence says Minister Dinesh Gundu Rao.
20-03-25 10:48 pm
Bangalore Correspondent
Honey Trapped, Minister, Probe: ಅಧಿವೇಶನದಲ್ಲಿ...
20-03-25 09:52 pm
Bangalore Marriage case, Srikanth Bindushree:...
20-03-25 01:07 pm
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
20-03-25 10:40 pm
HK News Desk
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm