ಬ್ರೇಕಿಂಗ್ ನ್ಯೂಸ್
12-08-24 09:31 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.12: ಈ ಬಾರಿಯೂ ಬೆಂಗಳೂರಿನಲ್ಲಿ ಕರಾವಳಿಯ ಕಂಬಳ ನಡೆಸುವುದಕ್ಕೆ ಏರ್ಪಾಡು ಮಾಡಿಕೊಳ್ಳಲಾಗಿದೆ. ಈ ಸಲದ ಕಂಬಳ ವೇಳಾಪಟ್ಟಿಯಲ್ಲಿ ಬೆಂಗಳೂರು ಕಂಬಳವನ್ನು ಮೊದಲ ಸ್ಥಾನದಲ್ಲಿ ಇರಿಸಲಾಗಿದ್ದು, ಅಕ್ಬೋಬರ್ 26ರಂದು ಮೊದಲ ಕಂಬಳವೇ ಬೆಂಗಳೂರಿನಲ್ಲಿ ನಡೆಸಲು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ನಿರ್ಧರಿಸಿದೆ.
ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆದ ಕಂಬಳ ಸಮಿತಿ ಸಭೆಯಲ್ಲಿ 2024-25ನೇ ಸಾಲಿನ ಕಂಬಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ವಿಶೇಷ ಅಂದ್ರೆ, ಬೆಂಗಳೂರಿನಲ್ಲಿ ಮೊದಲ ಕಂಬಳವಾದ್ರೆ, ಕೊನೆಯ ಕಂಬಳವನ್ನು ಇದೇ ಮೊದಲ ಬಾರಿಗೆ ಎನ್ನುವಂತೆ ಶಿವಮೊಗ್ಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಅಕ್ಟೋಬರ್ 26ರಂದು ಮೊದಲ್ಗೊಂಡು ಪ್ರತಿ ಶನಿವಾರ, ಆದಿತ್ಯವಾರ ಕಂಬಳ ನಡೆಯಲಿದ್ದು, ಕೊನೆಯ ಕಂಬಳ ಎಪ್ರಿಲ್ 19ರಂದು ಶಿವಮೊಗ್ಗದಲ್ಲಿ ನಡೆಸಲು ವೇಳಾಪಟ್ಟಿ ಇದೆ.
ಅ.26ರಂದು ಬೆಂಗಳೂರು ಕಂಬಳ, ನ.9ರಂದು ಪಿಲಿಕುಳ, ನ.16ರಂದು ಪಣಪಿಲ, 23ರಂದು ಕೊಡಂಗೆ, 30ರಂದು ಕಕ್ಕೆಪದವು, ಡಿ.7ರಂದು ಹೊಕ್ಕಾಡಿಗೋಳಿ, 14ರಂದು ಬಾರಾಡಿ, 21ರಂದು ಮೂಲ್ಕಿ, ಡಿ.28ರಂದು ಮಂಗಳೂರು, ಜ.4ರಂದು ಮಿಯ್ಯಾರು, 11ರಂದು ನರಿಂಗಾನ, 18ರಂದು ಅಡ್ವೆ ನಂದಿಕೂರು, 25ರಂದು ಮೂಡುಬಿದಿರೆ, ಫೆ.1ರಂದು ಐಕಳ, 8ರಂದು ಜಪ್ಪಿನಮೊಗರು, 15ರಂದು ತಿರುವೈಲುಗುತ್ತು, 22ರಂದು ಕಟಪಾಡಿ, ಮಾರ್ಚ್ 1ರಂದು ಪುತ್ತೂರು, 8ರಂದು ಬಂಗಾಡಿ, 15ರಂದು ಬಂಟ್ವಾಳ, 22ರಂದು ಉಪ್ಪಿನಂಗಡಿ, 29ರಂದು ವೇಣೂರು, ಎಪ್ರಿಲ್ 5ರಂದು ಬಳ್ಕುಂಜೆ, 12ರಂದು ಗುರುಪುರ, ಎಪ್ರಿಲ್ 19ರಂದು ಶಿವಮೊಗ್ಗದಲ್ಲಿ ಈ ಸಾಲಿನ ಕೊನೆಯ ಕಂಬಳ ನಡೆಯಲಿದೆ.
ಕಳೆದ ಬಾರಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಕಂಬಳ ನಡೆದಿರುವುದು ಇಡೀ ರಾಜ್ಯದ ಗಮನ ಸೆಳೆದಿತ್ತು. ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಕಂಬಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಬಿಜೆಪಿ, ಕಾಂಗ್ರೆಸ್ ನಾಯಕರೆಲ್ಲ ಭಾಗವಹಿಸಿದ್ದರು. ಅಲ್ಲದೆ, ಲಕ್ಷಾಂತರ ಜನರು ಕಂಬಳದಲ್ಲಿ ಪಾಲ್ಗೊಂಡು ಕರಾವಳಿಯ ಜನಪದ ಕ್ರೀಡೆಯ ಝಲಕ್ ಅನುಭವಿಸಿದ್ದರು. ಈ ಸಲ ವಿಶೇಷ ಅಂದ್ರೆ, ಮಲೆನಾಡು ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಕಂಬಳ ಏರ್ಪಡಿಸಲಾಗಿದೆ. ಮಾಹಿತಿ ಪ್ರಕಾರ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಕಂಬಳ ನಡೆಸುವುದಕ್ಕೆ ಸಿದ್ಧತೆ ನಡೆದಿದೆ. ಈ ಸಾಲಿನ ಕೊನೆಯ ಕಂಬಳಕ್ಕೆ ಶಿವಮೊಗ್ಗಕ್ಕೆ ದಿನಾಂಕ ನಿಗದಿಪಡಿಸಿದ್ದು, ಬಿಜೆಪಿ ಪಕ್ಷದಿಂದ ಹೊರಬಂದ ಬಳಿಕ ಕಂಬಳದ ಮೂಲಕ ಕಹಳೆ ಊದಲು ತಯಾರಾಗಿದ್ದಾರೆ.
October 26th to have first kambala in Bangalore before Mangalore. This was discussed during the meeting held at Moodbidri Samaja Mandir.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm