ಬ್ರೇಕಿಂಗ್ ನ್ಯೂಸ್
12-08-24 08:10 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 12: ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು ಹಲವು ಪ್ರಕರಣಗಳು ವರದಿಯಾಗುತ್ತಿವೆ. ಇದೀಗ ಆರೋಗ್ಯ ಸಮಸ್ಯೆಯಿಂದ ಬಡವರ್ಗದ ಜನಸಾಮಾನ್ಯರು ಲಾಲ್ ಬಾಗ್ ನ ಹ್ಯಾಟ್ ಹಿಲ್ ಬಳಿಯ ಆಯುಷ್ ಇಲಾಖೆಯ ಸರಕಾರಿ ಆಯುರ್ವೇದ ಮತ್ತು ಹೋಮಿಯೋಪತಿ ಸಂಯುಕ್ತ ಆಸ್ಪತ್ರೆಗೆ ಭೇಟಿ ನೀಡಿದರೆ ಅಲ್ಲಿನ ಅವ್ಯವಸ್ಥೆಯಿಂದಾಗಿ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಒಂದು ವರ್ಷದಿಂದಲೂ ಈ ಸಮಸ್ಯೆ ಹೆಚ್ಚಾಗಿದ್ದು ಆರೋಗ್ಯ ಇಲಾಖೆ ಗಮನವೇ ಹರಿಸಿಲ್ಲ. ಸ್ವತಃ ಅಲ್ಲಿನ ವೈದ್ಯರೇ ಬರೆದುಕೊಡುವ ಕೆಲವು ಮಾತ್ರೆಗಳು ಅಲ್ಲಿಯೇ ಲಭ್ಯವಿಲ್ಲ. ಕೊನೆಪಕ್ಷ ವೆನ್ಲಾಕ್ ಆಯುಷ್ ಸಂಯುಕ್ತ ಆಸ್ಪತ್ರೆಯಲ್ಲಾದರೂ ಸಿಗಬಹುದು ಎಂಬ ನಂಬಿಕೆಯಿಂದ ಅಲ್ಲಿಗೆ ಹೋದರೆ ಅಲ್ಲಿಯೂ ಕೆಲವೇ ಮಾತ್ರೆಗಳು ಲಭ್ಯ. ಒಂದಷ್ಟು ಮಾತ್ರೆಗಳು ಎರಡೂ ಕಡೆ ಲಭ್ಯವಿಲ್ಲ. ಮಾತ್ರೆಗಳಿಗಾಗಿ ರೋಗಿಗಳು ದಿನವಿಡೀ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಸುತ್ತಬೇಕಾಗಿ ಬಂದಿರುವುದು ಜಿಲ್ಲೆಯ ದೌರ್ಭಾಗ್ಯ. ಕೆಲವೊಮ್ಮೆ ತಿಂಗಳಾನುಗಟ್ಟಲೆ ಕಾದು ಮತ್ತೆ ಹೋಗಿ ಕೇಳಿದರೆ ಮಾತ್ರೆ ಸ್ಟಾಕ್ ಇಲ್ಲ ಎಂಬ ಉತ್ತರವೇ ಬರುತ್ತಿದೆ. ಹೀಗಾದರೆ ಜನರು ಎಲ್ಲಿಗೆ ಹೋಗಬೇಕು?
ಉದಾಹರಣೆಗೆ, 1.LAGHUSUTSHEKHAR RASA, 2. AROGYAVARDHINI RASA, 3.HARIDRAGHANDAN POWDER, 4. MARICHADYA TAILA, 5. PANCHANIMBA, 6.NIMBAPATRADI CHURNAM ಹೀಗೆ ಕೊರತೆಯಾಗಿರುವ ಔಷಧಿಗಳ ಪಟ್ಟಿ ದೊಡ್ಡದಿದೆ. ಅಲ್ಲದೇ ಆಯುಷ್ ಇಲಾಖೆಯ ವೈದ್ಯರ ಸಲಹೆಯಂತೆ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾದ ರಕ್ತ ಪರೀಕ್ಷೆಯ ವರದಿ ಸೇರಿದಂತೆ ಯಾವುದೇ ವರದಿಯನ್ನು ಆಯುಷ್ ಇಲಾಖೆ ರೋಗಿಗಳಿಗೆ ನೀಡುತ್ತಿಲ್ಲ. ಪ್ರಶ್ನಿಸಿದರೆ, ಮೊಬೈಲ್ನಲ್ಲಿ ಫೋಟೋ ತೆಗೆದುಕೊಳ್ಳಿ, ಪ್ರಿಂಟ್ ಮಾಡಿ ಕೊಡಲು ನಮ್ಮಲ್ಲಿ ಪೇಪರ್ ಇಲ್ಲ ಎಂದು ನೇರವಾಗಿ ಹೇಳಿ ಬಿಡುತ್ತಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಈ ಆಸ್ಪತ್ರೆಗಳಿಗೆ ಜಿಲ್ಲೆಯ ದೂರ ದೂರದ ಊರುಗಳಿಂದ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ಅನೇಕ ರೋಗಿಗಳು ಬರುತ್ತಾರೆ. ಇಂತಹ ಅವ್ಯವಸ್ಥೆಯಿಂದಾಗಿ ಅವರೆಲ್ಲರಿಗೂ ಸೇರಿದಂತೆ ವಿಶೇಷವಾಗಿ ಮಹಿಳೆಯರು, ಹಿರಿಯ ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರ ಕ್ಷೇತ್ರದಲ್ಲಿಯೇ ಹೀಗಾದರೆ ಇನ್ನು ರಾಜ್ಯದ ಬೇರೆ ಜಿಲ್ಲೆಗಳ ಪರಿಸ್ಥಿತಿ ಹೇಗಿರಬಹುದು? ಕೂಡಲೇ ಈ ಅವ್ಯವಸ್ಥೆಗೆ ಅಂತ್ಯ ಹಾಕಬೇಕು ಎಂಬುದು ಜನಸಾಮಾನ್ಯರ ಆಗ್ರಹವಾಗಿದೆ.
ಆರೋಗ್ಯ ಕ್ಷೇತ್ರದ ಸಮಸ್ಯೆ ಹೀಗಾದರೆ ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರದ್ದು ಮತ್ತೊಂದು ಸಮಸ್ಯೆ. ಎಲ್ಲಾ ಕೆಲಸ ಮಾಡಬೇಕು. ಆದರೆ ವೇತನ ಮಾತ್ರ ಇಲ್ಲ ಎಂಬಂತಹ ನೋವಿನ ಪರಿಸ್ಥಿತಿ. ಅದರ ನಡುವೆ ಪೌಷ್ಚಿಕಾಂಶದ ಕೊರತೆ ನೀಗಿಸುವ ಸಲುವಾಗಿ ಅಂಗನವಾಡಿ ಮಕ್ಕಳಿಗೆ ಜಾರಿಗೆ ತಂದಿರುವ ಪೋಷಣ್ ಅಭಿಯಾನದ ಮೊಟ್ಟೆಯಲ್ಲೂ ಗೋಲ್ ಮಾಲ್. ರಾಜ್ಯವನ್ನು ಇಂತಹ ಗೊಂದಲದ ಸ್ಥಿತಿಗೆ ತಂದ ಕಾಂಗ್ರೆಸ್ ಸರಕಾರಕ್ಕೆ ಆಡಳಿತ ನಡೆಸಲು ಯಾವುದೇ ನೈತಿಕ ಹಕ್ಕಿಲ್ಲ. ಕೂಡಲೇ ಅಧಿಕಾರ ಬಿಟ್ಟು ತೊಲಗಲಿ ಎಂದು ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.
MLA vedavyas kamath slams health department over Ayush medicine in Mangalore.
09-07-25 04:12 pm
HK News Desk
ಬೆಂಗಳೂರಿನಲ್ಲಿ ಐದು ಕಡೆ ಎನ್ಐಎ ದಾಳಿ ; ಭಯೋತ್ಪಾದಕ...
09-07-25 01:53 pm
Heart attack, Dharwad, Davanagere: ಉದ್ಯಮಿ ಮಗನ...
09-07-25 11:50 am
ಸಿಎಂ ಸೀಟು ಗೊಂದಲ ಕೇವಲ ಮಾಧ್ಯಮಗಳ ಸೃಷ್ಟಿ ; ಮೊದಲು...
08-07-25 08:35 pm
Karnataka Ban Online Betting and Gambling: ಆನ...
08-07-25 05:01 pm
07-07-25 08:45 pm
HK News Desk
ಅಮೆರಿಕದ ಟೆಕ್ಸಾಸ್ನಲ್ಲಿ ಭೀಕರ ಪ್ರವಾಹ ; 28 ಮಕ್ಕಳ...
07-07-25 04:11 pm
ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ ; 27 ಮಂದಿ ಸಾವು,...
06-07-25 03:53 pm
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
08-07-25 09:33 pm
Mangalore Correspondent
“Mission Possible: KMC Attavar Performs Life-...
08-07-25 03:37 pm
KMC Hospital Mangalore, Attavar, Surgery: ಅಪಘ...
08-07-25 03:27 pm
Mangalore suicide, Thumbe: ಮೊಬೈಲ್ ಗೀಳು ; ತುಂಬ...
08-07-25 10:15 am
ಎಂಟು ವರ್ಷದ ಪ್ರೀತಿ ಸಾವಿನಲ್ಲಿ ಅಂತ್ಯ ; ಪ್ರೀತಿಸುತ...
07-07-25 05:02 pm
08-07-25 10:01 pm
Bengaluru Staffer
Mangalore, Job Fraud, Crime: ಪಾರ್ಟ್ ಟೈಮ್ ಕೆಲಸ...
07-07-25 10:31 pm
Job Fraud, Mangalore, Doctor: ದುಬೈನ ಎನ್ಎಂಸಿ ಹ...
07-07-25 10:18 pm
ಹದಿನಾರರ ವಯಸ್ಸು ಹುಚ್ಚುಕೋಡಿ ಮನಸ್ಸು ; 16ರ ಹುಡುಗಿ...
07-07-25 07:13 pm
Digital Arrest, Cyber Fraud, Mangalore: ಡಿಜಿಟ...
07-07-25 03:30 pm