ಬ್ರೇಕಿಂಗ್ ನ್ಯೂಸ್
08-08-24 11:22 am Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.8: ನಗರದ ಡೊಂಗರಕೇರಿಯಲ್ಲಿ ಬಾಲಕೃಷ್ಣ ನಾಯಕ್ ಎಂಬವರ ಮನೆಯ ಹಿತ್ತಿಲಿಗೆ ಬೃಹತ್ ಹೆಬ್ಬಾವೊಂದು ಬಂದಿದ್ದು, ಅದನ್ನು ಮಹಿಳೆಯೊಬ್ಬರು ಹಿಡಿದು ಗೋಣಿಗೆ ತುಂಬಿಸುವ ಧೈರ್ಯ ಮಾಡಿದ್ದಾರೆ.
ಬಾಲಕೃಷ್ಣ ನಾಯಕ್ ಅವರಲ್ಲಿ ಈ ಬಗ್ಗೆ ಕೇಳಿದಾಗ, ಮೂರು ವರ್ಷದಲ್ಲಿ ಈ ಬಾರಿ ಮೂರನೇ ಬಾರಿ ಹೆಬ್ಬಾವು ಬಂದಿದೆ. ನಿನ್ನೆ ರಾತ್ರಿ ವೇಳೆ ಮನೆಯ ಹಟ್ಟಿಯ ಕಟ್ಟಿಗೆ ರಾಶಿ ಹಾಕಿರುವಲ್ಲಿ ಹೆಬ್ಬಾವು ಕಾಣಸಿಕ್ಕಿತ್ತು. ಆನಂತರ, ಲಕ್ಷ್ಮೀ ಕಾಮತ್ ಅದರ ಬಾಲ ಹಿಡಿದೆಳೆದು ಅಂಗಳಕ್ಕೆ ತಂದಿದ್ದಾರೆ. ಇಲ್ಲಾಂದ್ರೆ, ಕಟ್ಟಿಗೆ ರಾಶಿಯ ಒಳಗೆ ಹೋಗುತ್ತೆ ಎಂದು ಎಳಕೊಂಡು ಬಂದಿದ್ದರು. ಆನಂತರ, ಹಾವು ಹಿಡಿಯುವ ಆದಿತ್ಯ ಎಂಬವರನ್ನು ಕರೆದಿದ್ದು, ಅವರು ಹಿಡಿದು ಪಚ್ಚನಾಡಿಗೆ ಒಯ್ದು ಬಿಡುತ್ತೇನೆಂದು ಕೊಂಡೊಯ್ದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಲಕ್ಷ್ಮೀ ಕಾಮತ್ ಅವರ ಗಂಡ ಹಿಂದೆ ಹೆಬ್ಬಾವು ರೀತಿಯ ಹಾವುಗಳನ್ನು ಹಿಡಿಯುತ್ತಿದ್ದರು. ಹಾಗಾಗಿ, ಅವರ ಪತ್ನಿಗೂ ಧೈರ್ಯ ಬಂದಿದ್ದು, ನಿನ್ನೆ ನಮ್ಮ ಮನೆಗೆ ಹೆಬ್ಬಾವು ಬಂದಾಗ ಆಕೆಯೇ ಬಾಲವನ್ನು ಹಿಡಿದಿದ್ದಾರೆ. ಹೆಬ್ಬಾವು ವಿಷಕಾರಿಯಲ್ಲ. ಹಾಗಾಗಿ, ಹೆದರಬೇಕಿಲ್ಲ. ಗಲೀಜು ಮಾಡುತ್ತದೆ ಅಂತಷ್ಟೇ ಹಿಡಿಯಲು ಹಿಂಜರಿಕೆ. ಪ್ರತಿ ಬಾರಿ ಹೆಬ್ಬಾವು ಬರುತ್ತಿರುವುದರಿಂದ ಹಾವು ಹಿಡಿಯುವವರಿಗೆ ಒಂದು ಸಾವಿರ ಕೊಡಬೇಕಾಗುತ್ತದೆ ಎಂದು ಹೇಳುತ್ತಾರೆ, ಬಾಲಕೃಷ್ಣ ನಾಯಕ್. ಹೆಬ್ಬಾವು ಹಾರಾಡುತ್ತಿದ್ದರೂ ಮಹಿಳೆಯೊಬ್ಬರು ಬಾಲ ಹಿಡಿದು ಅದನ್ನು ನಿಯಂತ್ರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
Women catches huge snake at donagarakere in Mangalore, videos goes viral.
25-08-25 10:55 pm
Bangalore Correspondent
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
25-08-25 10:59 pm
Mangalore Correspondent
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
Dharmasthala, Mask Man, Fake Skull, SIT: ಎಸ್ಐ...
25-08-25 12:24 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am