ಬ್ರೇಕಿಂಗ್ ನ್ಯೂಸ್
07-08-24 11:32 am Mangalore Correspondent ಕರಾವಳಿ
ಉಳ್ಳಾಲ, ಆ.7: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನಗರಸಭೆ, ಪಟ್ಟಣ ಪಂಚಾಯತ್, ಪುರಸಭೆ ಆಡಳಿತದ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿದ್ದು, ಉಳ್ಳಾಲ ತಾಲೂಕಿನ ಸೋಮೇಶ್ವರ ಪುರಸಭೆ,ಉಳ್ಳಾಲ ನಗರಸಭೆ ಮತ್ತು ಕೋಟೆಕಾರು ಪಟ್ಟಣ ಪಂಚಾಯತ್ ಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಕಮಲ ಪಕ್ಷದ ಕಮಲಕ್ಕನಿಗೆ ಮತ್ತೆ ಅಧ್ಯಕ್ಷ ಪಟ್ಟ..!
ಸೋಮೇಶ್ವರ ಪುರಸಭೆಯ ಅಧ್ಯಕ್ಷ ಗಾದಿಗೆ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಗಾದಿಗೆ ಹಿಂದುಳಿದ ವರ್ಗ(ಎ)ಕ್ಕೆ ಮೀಸಲಾಗಿದೆ. ಸೋಮೇಶ್ವರ ಗ್ರಾಮ ಪಂಚಾಯತ್ ಪುರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ಕಳೆದ ವರ್ಷ ಚುನಾವಣೆ ನಡೆದಿತ್ತು. ಬಿಜೆಪಿ ಭರ್ಜರಿ 16 ಸ್ಥಾನಗಳನ್ನ ಗೆದ್ದು ಮೇಲುಗೈ ಸಾಧಿಸಿದರೆ, ಕಾಂಗ್ರೆಸ್ ಕೇವಲ 7 ಸ್ಥಾನಗಳನ್ನ ಗಳಿಸಿತ್ತು. ಸೋಮೇಶ್ವರ ಗ್ರಾಮ ಪಂಚಾಯತ್ ನಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಕಮಲ ಅವರು ಪುರಸಭೆಯ ಚುನಾವಣೆಯಲ್ಲೂ ಸ್ಫರ್ದಿಸಿ ಜಯ ಗಳಿಸಿದ್ದರು. ಪುರಸಭೆ ಸದಸ್ಯರಲ್ಲಿ ಏಕೈಕ ಪರಿಶಿಷ್ಟ ಜಾತಿಯವರಾಗಿರುವ ಕಮಲ ಅವರಿಗೆ ಮತ್ತೆ ನೂತನ ಸೋಮೇಶ್ವರ ಪುರಸಭೆಯಲ್ಲಿ ಅವಿರೋಧವಾಗಿ ಅಧ್ಯಕ್ಷರಾಗುವ ಅದೃಷ್ಟ ಅರಸಿ ಬಂದಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಹಲವು ಪುರಸಭಾ ಸದಸ್ಯರು ಆಕಾಂಕ್ಷಿಗಳಾಗಿದ್ದು ಚುನಾವಣೆ ನಡೆಯುವ ಸಾಧ್ಯತೆಗಳಿವೆ.
ಕೋಟೆಕಾರು ಪಟ್ಟಣದಲ್ಲಿ ಎರಡನೇ ಬಾರಿ ಬಿಜೆಪಿ ದರ್ಬಾರ್
ಕೋಟೆಕಾರು ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ಮೇಲೆ ಎರಡನೇ ಬಾರಿ ನಡೆದ ಚುನಾವಣೆಯಲ್ಲೂ ಬಿಜೆಪಿ 11 ಸ್ಥಾನ ಗೆದ್ದು ಮೇಲುಗೈ ಸಾಧಿಸಿದರೆ, ಕಾಂಗ್ರೆಸ್ 4, ಎಸ್ಡಿಪಿಐ ಮತ್ತು ಪಕ್ಷೇತರ ಅಭ್ಯರ್ಥಿಗಳು ತಲಾ ಒಂದು ಸ್ಥಾನಗಳನ್ನ ಗೆದ್ದಿದ್ದರು. ಅಧ್ಯಕ್ಷ, ಉಪಾಧ್ಯಕ್ಷ ಗಾದಿಯ ಮೀಸಲಾತಿ ಕಾನೂನು ತಕರಾರಿನಿಂದ ಬಿಜೆಪಿ ಬಹುಮತ ಗಳಿಸಿದರೂ ಆಡಳಿತ ನಡೆಸಲಾಗಿರಲಿಲ್ಲ. ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷ ಗಾದಿಗೆ ಸಾಮಾನ್ಯ, ಉಪಾಧ್ಯಕ್ಷ ಗಾದಿಗೆ ಹಿಂದುಳಿದ ವರ್ಗ(ಎ) ಕ್ಕೆ ಮೀಸಲು ಬಂದಿದ್ದು ಎರಡು ಸ್ಥಾನಗಳಿಗೂ ಬಿಜೆಪಿಯ ಪಟ್ಟಣ ಪಂಚಾಯತ್ನ ಸದಸ್ಯರು ಆಕಾಂಕ್ಷಿಗಳಾಗಿದ್ದು ಚುನಾವಣೆ ನಡೆಯುವ ಸಾಧ್ಯತೆಗಳಿವೆ.
ಉಳ್ಳಾಲ ನಗರಸಭೆ ಅಧ್ಯಕ್ಷರಾಗಿ ಶಶಿಕಲಾ ಅವಿರೋಧ ಆಯ್ಕೆ ಸಾಧ್ಯತೆ ?
ಉಳ್ಳಾಲ ನಗರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಎ)ದ ಮಹಿಳೆಗೆ ಮೀಸಲಾಗಿದೆ. ವಿಪಕ್ಷ ಬಿಜೆಪಿಯ ಪರಿಶಿಷ್ಟ ಜಾತಿಯ ನಗರ ಸದಸ್ಯೆ ಭವಾನಿಯವರನ್ನು ಕಣಕ್ಕಿಳಿಸದಿದ್ದರೆ ಅಧ್ಯಕ್ಷರಾಗಿ ಕಾಂಗ್ರೆಸ್ ನ ಪರಿಶಿಷ್ಟ ಜಾತಿಯ ನಗರಸಭೆ ಸದಸ್ಯೆ ಶಶಿಕಲಾ ಅವಿರೋಧ ಆಯ್ಕೆಯಾಗಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಮೂವರು ಮಹಿಳಾ ಆಕಾಂಕ್ಷಿಗಳು ಇರುವುದರಿಂದ ಚುನಾವಣೆ ನಡೆಯುವ ಸಾಧ್ಯತೆಗಳಿವೆ. 2018ರ ಆಗಸ್ಟ್ ನಲ್ಲಿ ಉಳ್ಳಾಲ ನಗರಸಭೆಗೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ 13, ಬಿಜೆಪಿ 6, ಎಸ್ಡಿಪಿಐ 6, ಜೆಡಿಎಸ್ 4, ಪಕ್ಷೇತರರಿಗೆ 2 ಸ್ಥಾನ ಲಭಿಸಿತ್ತು. ಈ ವೇಳೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಟಗೊಂಡ ಮೀಸಲಾತಿ ತಕರಾರು ಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಕೆಲಕಾಲ ಆಡಳಿತಾಧಿಕಾರಿಗಳ ನೇಮಕ ಆಗಿತ್ತು. ಚುನಾವಣೆ ನಡೆದು ಎರಡು ವರ್ಷಗಳ ಬಳಿಕ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಮೊದಲ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಚಿತ್ರಕಲಾ, ಉಪಾಧ್ಯಕ್ಷರಾಗಿ ಆಯೂಬ್ ಮಂಚಿಲ ಆಯ್ಕೆ ಆಗಿದ್ದರು. ಅವರ ಅಧಿಕಾರಾವಧಿ 2023 ಮೇ 2 ಕ್ಕೆ ಮುಗಿದಿತ್ತು. ಮತ್ತೆ ಮೀಸಲಾತಿ ಸಮಸ್ಯೆಯಿಂದ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ನಡೆದಿರಲಿಲ್ಲ.
ವರುಷ ಉರುಳಿದ ಬಳಿಕ ಮತ್ತೆ ಉಳ್ಳಾಲ ನಗರಸಭೆಯ ಎರಡನೇ ಅವಧಿಯ ಆಡಳಿತಕ್ಕೆ ಕಾಂಗ್ರೆಸ್ ಪಕ್ಷವು ತಯಾರಿ ನಡೆಸಿದ್ದು, ಈ ಬಾರಿ ಜೆಡಿಎಸ್ ಪಕ್ಷ ತೊರೆದ ಇಬ್ಬರು ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಮತ್ತೋರ್ವ ಪಕ್ಷೇತರ ನಗರಸಭಾ ಸದಸ್ಯನ ಬೆಂಬಲವು ಕಾಂಗ್ರೆಸ್ಗೆ ಲಭಿಸಲಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯಲಿದೆ.
Mangalore BJP bags victory in new Someshwara town municipal corporation.
27-03-25 06:41 pm
HK News Desk
Nandini Milk Rate: ಬೆಲೆ ಏರಿಕೆ ಬಿಸಿಯಿಂದ ತತ್ತರಿ...
27-03-25 04:49 pm
Yatnal, BJP, Karnataka Congress Twitter: ಈಗ '...
27-03-25 02:03 pm
BJP MLA Yatnal, Tweet: 'ಸತ್ಯವಂತರಿಗಿದು ಕಾಲವಲ್ಲ...
27-03-25 01:00 pm
BJP Yatnal Out, Vijayapura, BY Vijayendra: ಬಿ...
26-03-25 09:42 pm
27-03-25 04:07 pm
HK News Desk
ರಾಹುಲ್ ಗಾಂಧಿ ಭಾರತೀಯ ಪೌರತ್ವ ಹೊಂದಿದ್ದಾರೋ, ಇಲ್ಲ...
25-03-25 04:06 pm
Justice Yashwant Varma: ಭಾರೀ ಪ್ರಮಾಣದ ನೋಟು ಸುಟ...
24-03-25 03:54 pm
Delhi High Court judge Varma: ಹೈಕೋರ್ಟ್ ಜಡ್ಜ್...
23-03-25 02:40 pm
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
27-03-25 08:45 pm
Mangalore Correspondent
Mangalore Kukke Subrahmanya Temple: ರಾಜ್ಯದ ಶ್...
27-03-25 07:53 pm
Bedra Bus Saudi, Mangalore, Moodbidri: ಸೌದಿಯಲ...
27-03-25 04:39 pm
U T Khader, Ullal, Cashew: ದೇಶದಲ್ಲಿ 90 ಶೇ. ಗೇ...
27-03-25 01:42 pm
Mangalore Anirvedha Organization: ಅನಿರ್ವೇದ ಸಂ...
26-03-25 10:02 pm
27-03-25 01:37 pm
HK News Desk
Bangalore Fake Marksheet, Arrest: ನಕಲಿ ಅಂಕಪಟ್...
26-03-25 11:19 pm
ಮನೆ ಮಾಲೀಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ; ಯೋ...
26-03-25 11:08 pm
Mangalore Dharmasthala PSI P Kishor, Wife Att...
26-03-25 08:38 pm
ಸೈಬರ್ ಕೇಸಿನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲು ಲಂಚ...
26-03-25 08:00 pm