ಬ್ರೇಕಿಂಗ್ ನ್ಯೂಸ್
03-08-24 10:51 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 3 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾಗುತ್ತಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಜಿಲ್ಲೆಯ ಜನತೆ ಮತ್ತೆ ಬದುಕು ಕಟ್ಟಿಕೊಳ್ಳಲು ಅನುವಾಗುವಂತೆ ರಾಜ್ಯ ಸರಕಾರ 300 ಕೋಟಿ ರೂ. ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಒತ್ತಾಯಿಸಿದರು.
ಸುದ್ದಿಗೋಷ್ಟಿ ನಡೆಸಿದ ಶಾಸಕ ಕಾಮತ್, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವಾರು ಮನೆಗಳು ಕುಸಿದು ಬಿದ್ದಿವೆ. ಜಿಲ್ಲೆಯಲ್ಲಿ ಮನೆಹಾನಿ, ಕೃಷಿ ಹಾನಿ ವ್ಯಾಪಕವಾಗಿದ್ದು ರಾಜ್ಯ ಸರ್ಕಾರ ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಂಡು ಪರಿಹಾರ ಒದಗಿಸಬೇಕು ಎಂದು ಹೇಳಿದರು.
ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪೂರ್ಣ ಮನೆ ಹಾನಿಯಾಗಿದ್ದರೆ 5 ಲಕ್ಷ, ಭಾಗಶಃ ಹಾನಿಯಾಗಿದ್ದರೆ 2.50 ಲಕ್ಷ, ನೀರು ನುಗ್ಗಿದ್ದರೆ 10000 ಪರಿಹಾರ ನೀಡಿದ್ದರು. ಈಗಿನ ಸರಕಾರ ದಿವಾಳಿಯಾಗಿದ್ದು ಪರಿಹಾರ ಕೊಡಲು ಹಣ ಇಲ್ಲದ ಸ್ಥಿತಿಯಾಗಿದೆ. ಕೊನೆಪಕ್ಷ ಎನ್ ಡಿಆರ್ ಎಫ್ ವತಿಯಿಂದ ನೀಡಲಾಗುವ ಪರಿಹಾರ ಆದ್ರೂ ಕೊಡಿ ಎಂದು ಒತ್ತಾಯಿಸಿದರು.
ನಾವು ಶಾಸಕರಾಗಿ 15 ತಿಂಗಳಾಗುತ್ತ ಬಂದಿದ್ದು ಒಂದು ರುಪಾಯಿನೂ ಅನುದಾನ ಸಿಕ್ಕಿಲ್ಲ. ಯಾವುದೇ ಶಾಸಕನಿಗೂ ನಯಾಪೈಸೆ ಅನುದಾನ ಬಿಡುಗಡೆ ಆಗಿಲ್ಲ. ಆಡಳಿತ ಪಕ್ಷದ ಶಾಸಕನಿಗೂ ಭರವಸೆ ಸಿಕ್ಕಿದ್ದು ಬಿಟ್ಟರೆ ಅನುದಾನ ಲಭಿಸಿಲ್ಲ. ಕ್ಷೇತ್ರದ ಅನುದಾನವೆಂದು ವರ್ಷಕ್ಕೆ ಎರಡು ಕೋಟಿ ಕೊಡಬೇಕು. ಆದರೆ ಅದನ್ನೂ ಕೊಡುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ. ನಾವು ಅನುದಾನಕ್ಕಾಗಿ ಎಲ್ಲ ಶಾಸಕರು ಸೇರಿ ಧರಣಿ ನಡೆಸಲಿದ್ದೇವೆ. ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ಮಾಡುವುದಾಗಿ ವೇದವ್ಯಾಸ ಕಾಮತ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ರಮೇಶ್ ಕಂಡೆಟ್ಟು, ನಿತಿನ್ ಕುಮಾರ್, ರವಿಶಂಕರ್ ಮಿಜಾರ್, ಸಂಜಯ್ ಪ್ರಭು, ಪೂರ್ಣಿಮಾ, ರಮೇಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
MLA Vedavyas Kamath demanded that the state government release a Rs 300 crore special package to Dakshina Kannada (DK), as heavy rains have caused severe damage in the district.
27-03-25 06:41 pm
HK News Desk
Nandini Milk Rate: ಬೆಲೆ ಏರಿಕೆ ಬಿಸಿಯಿಂದ ತತ್ತರಿ...
27-03-25 04:49 pm
Yatnal, BJP, Karnataka Congress Twitter: ಈಗ '...
27-03-25 02:03 pm
BJP MLA Yatnal, Tweet: 'ಸತ್ಯವಂತರಿಗಿದು ಕಾಲವಲ್ಲ...
27-03-25 01:00 pm
BJP Yatnal Out, Vijayapura, BY Vijayendra: ಬಿ...
26-03-25 09:42 pm
27-03-25 04:07 pm
HK News Desk
ರಾಹುಲ್ ಗಾಂಧಿ ಭಾರತೀಯ ಪೌರತ್ವ ಹೊಂದಿದ್ದಾರೋ, ಇಲ್ಲ...
25-03-25 04:06 pm
Justice Yashwant Varma: ಭಾರೀ ಪ್ರಮಾಣದ ನೋಟು ಸುಟ...
24-03-25 03:54 pm
Delhi High Court judge Varma: ಹೈಕೋರ್ಟ್ ಜಡ್ಜ್...
23-03-25 02:40 pm
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
27-03-25 08:45 pm
Mangalore Correspondent
Mangalore Kukke Subrahmanya Temple: ರಾಜ್ಯದ ಶ್...
27-03-25 07:53 pm
Bedra Bus Saudi, Mangalore, Moodbidri: ಸೌದಿಯಲ...
27-03-25 04:39 pm
U T Khader, Ullal, Cashew: ದೇಶದಲ್ಲಿ 90 ಶೇ. ಗೇ...
27-03-25 01:42 pm
Mangalore Anirvedha Organization: ಅನಿರ್ವೇದ ಸಂ...
26-03-25 10:02 pm
27-03-25 01:37 pm
HK News Desk
Bangalore Fake Marksheet, Arrest: ನಕಲಿ ಅಂಕಪಟ್...
26-03-25 11:19 pm
ಮನೆ ಮಾಲೀಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ; ಯೋ...
26-03-25 11:08 pm
Mangalore Dharmasthala PSI P Kishor, Wife Att...
26-03-25 08:38 pm
ಸೈಬರ್ ಕೇಸಿನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲು ಲಂಚ...
26-03-25 08:00 pm