ಬ್ರೇಕಿಂಗ್ ನ್ಯೂಸ್
02-08-24 04:40 pm Mangalore Correspondent ಕರಾವಳಿ
ಉಳ್ಳಾಲ, ಅ.2: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಉಳ್ಳಾಲದ ಮೇಲಂಗಡಿಯ ಮನೆಯೊಂದರ ಹಂಚಿನ ಛಾವಣಿ ಇಂದು ಬೆಳಗ್ಗೆ ಕುಸಿದು ಬಿದ್ದಿದ್ದು ಮನೆಯೊಳಗಿದ್ದ ಇಬ್ಬರು ಗಾಯಗೊಂಡಿದ್ದಾರೆ. ಉಳಿದವರು ಮನೆಯ ಹಾಲಿನ ಸೀಲಿಂಗ್ ನಿಂದ ರಕ್ಷಣೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೇಲಂಗಡಿ ನಿವಾಸಿ ವೃದ್ಧೆ ಖತೀಜಮ್ಮ ಎಂಬವರ ಮನೆಯ ಹಂಚಿನ ಛಾವಣಿ ಇಂದು ಬೆಳಗ್ಗೆ ಕುಸಿದು ಬಿದ್ದಿದೆ. ಘಟನೆಯಿಂದ ಖತೀಜಮ್ಮರ ಹಿರಿಯ ಮಗ ಖಲೀಲ್(38) ಮತ್ತು ಮೊಮ್ಮಗಳಾದ ಖತೀಜತುಲ್ ಕುಬ್ರ(11) ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವೇಳೆ ಖತೀಜಮ್ಮ ಮತ್ತು ಕಿರಿಯ ಮಗ ನಗರಸಭೆಯ ಮಾಜಿ ಉದ್ಯೋಗಿ ಅಬ್ಬಾಸ್ ಅವರು ಮನೆಯ ಹಾಲಲ್ಲಿದ್ದು ಛಾವಣಿಯ ಕೆಳಗಿನ ಫ್ಲೈವುಡ್ ಸೀಲಿಂಗ್ ನಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖತೀಜಮ್ಮರ ಇಬ್ಬರು ಸೊಸೆಯಂದಿರು ಉಡುಪಿಗೆ ತೆರಳಿದ್ದರು. ರಾತ್ರಿ ವೇಳೆ ಘಟನೆ ಸಂಭವಿಸಿದ್ದರೆ ಮನೆಯಲ್ಲಿ ಮಾರಣಹೋಮವೇ ನಡೆಯುತ್ತಿತ್ತೆಂದು ಖತೀಜಮ್ಮರ ಮಗ ಅಬ್ಬಾಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಘಟನೆ ನಡೆದು ಗಂಟೆಗಳು ಕಳೆದರೂ ನಗರಸಭೆಯ ಯಾರೊಬ್ಬ ಅಧಿಕಾರಿಗಳು ಘಟನಾ ಸ್ಥಳವನ್ನ ಇಣುಕಿ ನೋಡಿಲ್ಲ.
ಕೌನ್ಸಿಲರ್ ಮನವಿಗೆ ಡೋಂಟ್ ಕೇರ್ ಎಂದಿದ್ದ ಪೌರಾಯುಕ್ತೆ..
ಮೇಲಂಗಡಿಯ ಖತೀಜಮ್ಮ ಅವರದ್ದು ತೀರಾ ಬಡ ಕುಟುಂಬವಾಗಿದ್ದು ಕಿರಿಯ ಮಗ ಅಬ್ಬಾಸ್ ಅವರು ಅಂಗವಿಕಲರಿದ್ದಾರೆ. ಅವರ ಮನೆಯ ಗೋಡೆ ಮತ್ತು ಮೇಲ್ಛಾವಣಿ ಶಿಥಿಲಾವಸ್ಥೆಯಲ್ಲಿದ್ದು ಕೂಡಲೇ ಅವರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ನಗರಸಭೆ ವತಿಯಿಂದ ಮನೆಯನ್ನ ದುರಸ್ತಿ ಪಡಿಸಬೇಕೆಂದು ಸ್ಥಳೀಯ ನಗರಸಭೆ ಸದಸ್ಯೆ ಖಮರುನ್ನೀಸ ನಿಝಾಮ್ ಎಂಬವರು ನಗರಸಭೆಯ ಪ್ರಭಾರ ಪೌರಾಯುಕ್ತೆ ವಾಣಿ ಆಳ್ವರಿಗೆ ಕಳೆದ ಜುಲೈ 16 ರಂದು ಮನವಿ ಸಲ್ಲಿಸಿದ್ದರು. ಮುನ್ನೂರು ಗ್ರಾಮದ ಮದನಿ ನಗರ ಎಂಬಲ್ಲಿನ ಘಟನೆಯಿಂದಲೂ ಎಚ್ಚೆತ್ತುಕೊಳ್ಳದ ಪೌರಾಯುಕ್ತೆ ವಾಣಿ ಅವರು ಕೌನ್ಸಿಲರ್ ಮನವಿಯನ್ನೇ ಡೋಂಟ್ ಕೇರ್ ಮಾಡಿ ಸುಮ್ಮನಿದ್ದ ಪರಿಣಾಮ ಇಂದು ದುರಂತ ಸಂಭವಿಸಿದೆ ಎನ್ನಲಾಗಿದೆ.
ನಗರಸಭೆ ಅಧಿಕಾರಿಗಳೇ ಘಟನೆಗೆ ಕಾರಣ..
ಖತೀಜಮ್ಮರ ಮನೆ ಶಿಥಿಲಗೊಂಡಿರುವ ಬಗ್ಗೆ ಖುದ್ದಾಗಿ ಲಿಖಿತ ಮನವಿ ಕೊಟ್ಟರೂ ನಗರಸಭೆ ಪೌರಾಯುಕ್ತೆ ವಾಣಿ ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಪರಿಣಾಮ ಇಂದು ದುರಂತ ಸಂಭವಿಸಿದೆ. ಮನವಿಯ ಪ್ರತಿಯನ್ನ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳಿಗೂ ನೀಡುವಂತೆ ನಮೂದಿಸಲಾಗಿತ್ತು. ಅಕಸ್ಮಾತ್ ಘಟನೆಯಲ್ಲಿ ಪ್ರಾಣ ಹಾನಿಯಾಗಿದ್ದರೆ ಅದಕ್ಕೆ ನಗರಸಭೆ ಅಧಿಕಾರಿಗಳೇ ಕಾರಣರಾಗುತ್ತಿದ್ದರು ಎಂದು ಸ್ಥಳೀಯ ಕೌನ್ಸಿಲರ್ ಕಮರುನ್ನೀಸ ನಿಝಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆಗೆ ಖಾಯಂ ಪೌರಾಯುಕ್ತೆಯನ್ನು ಇನ್ನೂ ನೇಮಿಸಿಲ್ಲ. ಮಂಗಳೂರು ನಗರದಲ್ಲಿಯೂ ಕಾರ್ಯ ನಿರ್ವಹಿಸುತ್ತಿರುವ ಪ್ರಭಾರ ಪೌರಾಯುಕ್ತೆ ವಾಣಿ ಅವರು ಜನಸಾಮಾನ್ಯರ ಅಹವಾಲು ಸ್ವೀಕರಿಸುವುದು ದೂರದ ಮಾತು. ಕೌನ್ಸಿಲರ್ಗಳ ಮನವಿಗಳಿಗೂ ಸ್ಪಂದನೆ ನೀಡುತ್ತಿಲ್ಲವೆಂದು ಸ್ಥಳೀಯರಾದ ನಿಝಾಮ್ ಆರೋಪಿಸಿದ್ದಾರೆ. ಖತೀಜಮ್ಮನ ಕುಟುಂಬಕ್ಕೆ ಬದಲಿ ಮನೆಯ ವ್ಯವಸ್ಥೆ, ಗಾಯಾಳುಗಳ ವೈದ್ಯಕೀಯ ಖರ್ಚು, ಅವರ ಮನೆಯ ದುರಸ್ತಿ ಕಾರ್ಯವನ್ನು ನಗರಸಭೆ ಶೀಘ್ರವೇ ನಡೆಸಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.
Ullal house roof collapses due to heavy rains in Mangalore, accident averted. Family who was had injuries due to fall have been admitted in the private hospital.
29-03-25 09:19 pm
HK News Desk
Mysuru three drowned, Lake, Ugadi: ಮೈಸೂರು ; ಹ...
29-03-25 03:13 pm
Naxal Karanataka, Anti Naxal Force: ನಕ್ಸಲ್ ನಿ...
28-03-25 10:47 pm
Minister Rajanna, honeytrap, Son, Murder atte...
28-03-25 12:19 pm
Yatnal expulsion, Ramesh Jarkiholi: ಯತ್ನಾಳ್...
27-03-25 06:41 pm
29-03-25 04:40 pm
HK News Desk
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
Elon Musk, Fraud India: ವಿಶ್ವದ ನಂಬರ್ 1 ಶ್ರೀಮಂ...
28-03-25 01:38 pm
Vladimir Putin, Zelensky: ರಷ್ಯಾ ಅಧ್ಯಕ್ಷ ಪುಟಿನ...
28-03-25 01:07 pm
30-03-25 11:02 pm
Mangaluru HK Staff
Mangalore, Ullal Netravati Bridge Repair, Tra...
30-03-25 03:07 pm
Kumapla, Mangalore, Crime: ಲಕೋಟೆಯಲ್ಲಿ ಸಂಸ್ಕರಿ...
30-03-25 02:39 pm
Mangalore CM Medal, Anupam Agrawal, Police Ma...
29-03-25 11:04 pm
MLC Ivan D'Souza, Mangalore: 7ನೇ ವೇತನ ಆಯೋಗ ;...
29-03-25 10:07 pm
30-03-25 08:59 am
Mangaluru Correspondent
ಆಂಧ್ರದಲ್ಲಿ ಪ್ಯಾಸ್ಟರ್ ಪ್ರವೀಣ್ ಕುಮಾರ್ ಸಂಶಯಾಸ್ಪದ...
29-03-25 10:33 pm
Bajrang Dal, Arrest, Cow Transport, Mangalore...
29-03-25 04:02 pm
Mangalore Nandigudde Prostitution case: ನಂದಿಗ...
28-03-25 09:25 pm
Ccb Mangalore, Drugs, Charas, Crime: ಸಿಸಿಬಿ ಪ...
28-03-25 08:37 pm