ಬ್ರೇಕಿಂಗ್ ನ್ಯೂಸ್
01-08-24 03:06 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 1: ಕೆತ್ತಿಕಲ್ ಗುಡ್ಡದಲ್ಲಿ ಭೂಕುಸಿತದ ಸ್ಥಿತಿ ಎದುರಾಗಿದ್ದು, ಇದಕ್ಕೆ ಸ್ವಯಂಕೃತ ಅಪರಾಧವೇ ಕಾರಣ. ಅಲ್ಲಿಂದ ಅವೈಜ್ಞಾನಿಕ ರೀತಿಯಲ್ಲಿ ಮಣ್ಣನ್ನು ಎತ್ತಿ ಹೆದ್ದಾರಿಗೆ ಬಳಸಲಾಗಿದೆ. ಈಗ ಅಲ್ಲಿನ ಆಸುಪಾಸಿನ ನಿವಾಸಿಗಳಿಗೆ ಸ್ಥಳಾಂತರ ಆಗುವಂತೆ ನೋಟೀಸ್ ಕೊಟ್ಟಿದ್ದಾರೆ. ಯಾರ ನಿರ್ಲಕ್ಷ್ಯದಿಂದ ಇದಾಗಿದೆಯೋ, ಅಂಥವರನ್ನು ಶಿಕ್ಷಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಹೇಳಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಸುದ್ದಿಗೋಷ್ಠಿ ಕರೆದಿದ್ದ ಸಂದರ್ಭದಲ್ಲಿ ಮಳೆಯಿಂದ ಆಗುತ್ತಿರುವ ದುರಂತಗಳ ಬಗ್ಗೆ ಪತ್ರಕರ್ತರು ಪ್ರಶ್ನೆ ಮಾಡಿದ್ದು, ನಿಮ್ಮ ನಿರ್ಲಕ್ಷ್ಯದಿಂದಲೇ ಇಂತಹ ದುರಂತಗಳಾಗುತ್ತಿವೆ, ಮಾಧವ ಗಾಡ್ಗೀಳ್ ವರದಿ ಕೊಟ್ಟಾಗ ನಿರ್ಲಕ್ಷ್ಯ ಮಾಡಿದ್ದರಿಂದ ವಯನಾಡ್ ದುರಂತ ಆಗಿದೆಯಲ್ಲಾ ಎಂದು ಗಮನ ಸೆಳೆದಾಗ, ನಾನಿದನ್ನು ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪ ಮಾಡುತ್ತೇನೆ. ಮುಖ್ಯಮಂತ್ರಿ ಗಮನಕ್ಕೂ ತರುತ್ತೇನೆ ಎಂದರು. ಪ್ರತಿ ಬಾರಿ ಗುಡ್ಡ ಕುಸಿತ ಆಗುತ್ತಿರುವುದು ಯಾಕೆ, ಅದರ ಹಿಂದಿನ ಕಾರಣಗಳೇನು ಎಂಬ ಬಗ್ಗೆ ಅಧ್ಯಯನ ಆಗಬೇಕಾಗಿದೆ. ಗಾಡ್ಗೀಳ್ ವರದಿಯ ಬಗ್ಗೆ ನನಗೆ ಗೊತ್ತಿಲ್ಲ. ಸರಕಾರದ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಗುರುಪುರದಲ್ಲಿ ಒಂದು ಸೇತುವೆ ಇರುವಾಗಲೇ ನೂರು ಮೀಟರ್ ಅಂತರದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಮತ್ತೊಂದು ಸೇತುವೆ ಮಾಡುತ್ತಿದ್ದೀರಿ, ಅದರ ಬಗ್ಗೆ ನೀವು ಯಾಕೆ ಪ್ರಶ್ನೆ ಮಾಡಿಲ್ಲ. ಅದೇ ಕಾರಣಕ್ಕೆ ಕೆತ್ತಿಕಲ್ ಗುಡ್ಡದಿಂದ ಮಣ್ಣು ಒಯ್ದಿದ್ದಲ್ಲವೇ ಎಂದು ಕೇಳಿದ್ದಕ್ಕೆ, ಮಂಜುನಾಥ ಭಂಡಾರಿ ಮೌನಕ್ಕೆ ಶರಣಾದರು. ಮುಖ್ಯಮಂತ್ರಿ ವಿರುದ್ಧ ತನಿಖೆಗೆ ರಾಜ್ಯಪಾಲರಿಗೆ ದೂರು ಕೊಟ್ಟಿರುವ ವಿಚಾರ ಪ್ರಸ್ತಾಪಿಸಿದ ಭಂಡಾರಿ, ಮುಖ್ಯಮಂತ್ರಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ, ಆಮೂಲಕ ಒಟ್ಟು ಸರಕಾರವನ್ನು ಬೀಳಿಸುವ ಕುತಂತ್ರ ಮಾಡುತ್ತಿದ್ದಾರೆ. ಹಿಂದೆ ಡಿಕೆಶಿ ಅವರನ್ನು ಕೇಸು ಹಾಕಿಸಿ, 20 ದಿನ ಜೈಲಿನಲ್ಲಿ ಇಟ್ಟಿದ್ದರು. ಆ ಪ್ರಕರಣ ಏನಾಯ್ತು, ಯಾಕೆ ಅದನ್ನು ಅಂತಿಮಗೊಳಿಸಿಲ್ಲ. ಅದೇ ರೀತಿ ಈಗ ಸಿದ್ದರಾಮಯ್ಯ ಸರಕಾರವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ ಎಂದರು.
ಧರ್ಮ ಬಿಟ್ಟು ಜಾತಿ ಹಿಡಿದಿದ್ದಾರೆ
ಬಿಜೆಪಿಯವರಿಗೆ ಧರ್ಮದ ವಿಚಾರಕ್ಕೆ ವೋಟು ಬರಲ್ಲ ಎಂದು ಗೊತ್ತಾಗಿದೆ. ಈಗ ಜಾತಿ ವಿಷ ಬೀಜ ಎತ್ತುತ್ತಿದ್ದಾರೆ. ಸಂಸತ್ತಿನಲ್ಲಿ ಅನುರಾಗ್ ಠಾಕೂರ್ ಜಾತಿ ವಿಷಯ ಎತ್ತಿದ್ದು, ಅದನ್ನು ಸ್ಪೀಕರ್ ವಿರೋಧಿಸಿದ್ದರೆ, ಪ್ರಧಾನಿ ಮೋದಿ ಆ ವಿಡಿಯೋವನ್ನು ಟ್ವಿಟರ್ ನಲ್ಲಿ ಹಾಕಿ ಜನರ ಬೆಂಬಲ ಕೇಳಿದ್ದಾರೆ. ಇದರರ್ಥ, ಬಿಜೆಪಿ ಧರ್ಮ ರಾಜಕಾರಣ ಬಿಟ್ಟು ಜಾತಿ ರಾಜಕೀಯಕ್ಕೆ ಹೊರಳುತ್ತಿರುವುದನ್ನು ಸೂಚಿಸುತ್ತದೆ ಎಂದರು. ಹೊಸದಾಗಿ ಮದುವೆಯಾಗಿರುವ ಬಿಜೆಪಿ- ಜೆಡಿಎಸ್ ಸಂಸಾರ ಹೆಚ್ಚು ದಿನ ಇರಲ್ಲ. ಬಿಜೆಪಿ ಪಾದಯಾತ್ರೆ ಬಗ್ಗೆ ಜೆಡಿಎಸ್ ನಾಯಕರು ವಿರೋಧಿಸಿ ಮಾತಾಡಿದ್ದಾರೆ. ಕುಮಾರಸ್ವಾಮಿ ಮಾತು ನೋಡಿದರೆ, ಸದ್ಯದಲ್ಲೇ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಹೊರಬರುತ್ತಾರೆ ಎಂದನಿಸುತ್ತದೆ. ಕೇಂದ್ರದಲ್ಲಿ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡುವನ್ನು ಓಲೈಸುತ್ತಿದ್ದಾರೆ. ಆದರೆ, ಅವರು ಅರ್ಧದಲ್ಲಿ ಕೈಕೊಡುವುದು ಖಚಿತ ಎಂದರು ಭಂಡಾರಿ. ಸುದ್ದಿಗೋಷ್ಟಿಯಲ್ಲಿ ಪದ್ಮರಾಜ್, ಮಹಾಬಲ ಮಾರ್ಲ, ಶಶಿಧರ್ ಹೆಗ್ಡೆ, ಎಂ.ಎಸ್ ಮಹಮ್ಮದ್, ಶುಭೋದಯ ಆಳ್ವ ಮತ್ತಿತರರಿದ್ದರು.
Ketikal landslide action should be taken over negligence says Manjunath Bhandary in Mangalore.
29-03-25 09:19 pm
HK News Desk
Mysuru three drowned, Lake, Ugadi: ಮೈಸೂರು ; ಹ...
29-03-25 03:13 pm
Naxal Karanataka, Anti Naxal Force: ನಕ್ಸಲ್ ನಿ...
28-03-25 10:47 pm
Minister Rajanna, honeytrap, Son, Murder atte...
28-03-25 12:19 pm
Yatnal expulsion, Ramesh Jarkiholi: ಯತ್ನಾಳ್...
27-03-25 06:41 pm
29-03-25 04:40 pm
HK News Desk
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
Elon Musk, Fraud India: ವಿಶ್ವದ ನಂಬರ್ 1 ಶ್ರೀಮಂ...
28-03-25 01:38 pm
Vladimir Putin, Zelensky: ರಷ್ಯಾ ಅಧ್ಯಕ್ಷ ಪುಟಿನ...
28-03-25 01:07 pm
30-03-25 11:02 pm
Mangaluru HK Staff
Mangalore, Ullal Netravati Bridge Repair, Tra...
30-03-25 03:07 pm
Kumapla, Mangalore, Crime: ಲಕೋಟೆಯಲ್ಲಿ ಸಂಸ್ಕರಿ...
30-03-25 02:39 pm
Mangalore CM Medal, Anupam Agrawal, Police Ma...
29-03-25 11:04 pm
MLC Ivan D'Souza, Mangalore: 7ನೇ ವೇತನ ಆಯೋಗ ;...
29-03-25 10:07 pm
30-03-25 08:59 am
Mangaluru Correspondent
ಆಂಧ್ರದಲ್ಲಿ ಪ್ಯಾಸ್ಟರ್ ಪ್ರವೀಣ್ ಕುಮಾರ್ ಸಂಶಯಾಸ್ಪದ...
29-03-25 10:33 pm
Bajrang Dal, Arrest, Cow Transport, Mangalore...
29-03-25 04:02 pm
Mangalore Nandigudde Prostitution case: ನಂದಿಗ...
28-03-25 09:25 pm
Ccb Mangalore, Drugs, Charas, Crime: ಸಿಸಿಬಿ ಪ...
28-03-25 08:37 pm