ಬ್ರೇಕಿಂಗ್ ನ್ಯೂಸ್
01-08-24 02:36 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 1: ಫಲ್ಗುಣಿ ನದಿಯ ಹರಿಯುವ ಉದ್ದಕ್ಕೂ ನಿನ್ನೆ ರಾತ್ರಿ ದಿಢೀರ್ ನೆರೆ ಬಂದಿದೆ. ವೇಣೂರು, ಹೊಸಂಗಡಿ, ಪೊಳಲಿ ಸಮೀಪದ ಅಮ್ಮುಂಜೆ, ಉಳಾಯಿಬೆಟ್ಟು ಆಸುಪಾಸಿನಲ್ಲಿ ರಾತ್ರೋರಾತ್ರಿ ನೀರು ಉಕ್ಕಿ ಬಂದಿದ್ದು, ಪರಿಸರದ ಹಲವಾರು ಮನೆಗಳಿಗೆ ನುಗ್ಗಿದೆ. ಇದರಿಂದಾಗಿ ಜನರು ಮನೆ ಬಿಟ್ಟು ಹೊರಬಂದು ಪರದಾಟ ಅನುಭವಿಸಿದ್ದಾರೆ.
ಇತ್ತ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಸ್ವಲ್ಪ ಮಟ್ಟಿಗೆ ಇಳಿಕೆಯಾದರೂ, ಫಲ್ಗುಣಿ ನದಿಯಲ್ಲಿ ಮಾತ್ರ ನೆರೆ ಬಂದಿರುವುದು ಹೇಗೆ ಎಂಬ ಪ್ರಶ್ನೆ ಬಂದಿದೆ. ಗುರುಪುರದಲ್ಲಿ ಹೊಸ ಹೆದ್ದಾರಿಗೆ ಅವೈಜ್ಞಾನಿಕ ರೀತಿ ಮತ್ತು ತರಾತುರಿಯಲ್ಲಿ ಕಟ್ಟಲಾಗುತ್ತಿರುವ ಅಣೆಕಟ್ಟು ಹಾಗೂ ಕುಳೂರಿನಲ್ಲಿ ಎರಡು ವರ್ಷಗಳಿಂದಲೂ ಅಣೆಕಟ್ಟು ಸಲುವಾಗಿ ನದಿಗೆ ಮಣ್ಣು ತುಂಬಿದ್ದರಿಂದ ಈ ರೀತಿಯ ನೆರೆ ಬಂದಿದೆ ಎನ್ನಲಾಗುತ್ತಿದೆ.
ಹೊಸಂಗಡಿ, ವೇಣೂರಿನಲ್ಲಿ ಈ ರೀತಿ ನೆರೆ ಬಂದಿದ್ದು ಭಾರೀ ಕಡಿಮೆ. ಅಲ್ಲದೆ, ಪೊಳಲಿ ಆಸುಪಾಸಿನಲ್ಲಿಯೂ ನೆರೆ ಬಂದದ್ದಿಲ್ಲ. ಉಳಾಯಿಬೆಟ್ಟು ಪರಿಸರದಲ್ಲಿ ಹೆಚ್ಚು ಮಳೆಯಾದರೆ ಈ ಹಿಂದೆಯೂ ನೀರು ಉಕ್ಕಿ ಕೃಷಿಗೆ ನುಗ್ಗಿದ್ದಿದೆ. ಆದರೆ, ಫಲ್ಗುಣಿ ನದಿ ಹರಿಯುವ ಎಲ್ಲ ಕಡೆಯೂ ಈ ಬಾರಿ ನೆರೆ ಬಂದಿದೆ. ಅದ್ಯಪಾಡಿ ಬಳಿಯ ಮುಗೇರಕುದ್ರು ಎನ್ನುವ ಪ್ರದೇಶವಂತೂ ಒಂದು ತಿಂಗಳಿನಿಂದ ಮುಳುಗಡೆಯಾಗಿದೆ. ಅದಕ್ಕೆ ಅಲ್ಲಿನ ಅವೈಜ್ಞಾನಿಕ ಅಣೆಕಟ್ಟು ಕಾರಣವಾದರೆ, ಬೇರೆಲ್ಲ ಕಡೆ ದಿಢೀರ್ ನೆರೆ ನೀರು ಉಕ್ಕುವುದಕ್ಕೆ ಮಳೆ ಎಷ್ಟು ಕಾರಣವೋ, ಸೇತುವೆಯ ಕಾರಣಕ್ಕೆ ನದಿಗೆ ಮಣ್ಣು ತುಂಬಿಸಿರುವುದೂ ಅಷ್ಟೇ ಕಾರಣ.
ಪೊಳಲಿ, ಉಳಾಯಿಬೆಟ್ಟು ಪ್ರದೇಶದಲ್ಲಿ ರಾತ್ರಿ ವೇಳೆ ಮನೆಗೆ ನೀರು ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ವೇಣೂರು, ಹೊಸಂಗಡಿ ಪ್ರದೇಶದಲ್ಲಿ ಸ್ಥಳೀಯ ನಿವಾಸಿಗಳು ಮಹಿಳೆಯರು, ಮಕ್ಕಳು ನಿದ್ದೆ ಬಿಟ್ಟು ರಸ್ತೆಗೆ ಬಂದು ನಿಂತುಕೊಂಡಿರುವ ವಿಡಿಯೋ ವೈರಲ್ ಆಗಿದೆ. ಇದೇ ಏರಿಯಾದಲ್ಲಿ ರಸ್ತೆಗೆ ನೀರು ನುಗ್ಗಿದ್ದರಿಂದ ಬಸ್ ತೆರಳಲು ಸಾಧ್ಯವಾಗದೆ, ಸ್ಥಳೀಯರು ಅದರಲ್ಲಿದ್ದ ಜನರನ್ನು ಇಳಿಸಿ ಇನ್ನೊಂದು ಕಡೆಗೆ ದಾಟಿಸಿದ್ದಾರೆ. ಗುರವಾರ ನೆರೆ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಎಂದಿನ ರೀತಿಯಲ್ಲೇ ಪರಿಹಾರದ ಮಾತುಗಳನ್ನಾಡಿ ಬಂದಿದ್ದಾರೆ.
Mangalore heavy rain, palguni river water overflows, houses and tempele flooded with water. The water level of the Gurpur Phalguni river rose to dangerous levels due to the incessant rains lashing the city since Wednesday. Water gushed into the house of Arbee Didpe in Sanjeev early Thursday morning. Fire service personnel from Pandeshwar rushed to the spot.
29-03-25 09:19 pm
HK News Desk
Mysuru three drowned, Lake, Ugadi: ಮೈಸೂರು ; ಹ...
29-03-25 03:13 pm
Naxal Karanataka, Anti Naxal Force: ನಕ್ಸಲ್ ನಿ...
28-03-25 10:47 pm
Minister Rajanna, honeytrap, Son, Murder atte...
28-03-25 12:19 pm
Yatnal expulsion, Ramesh Jarkiholi: ಯತ್ನಾಳ್...
27-03-25 06:41 pm
29-03-25 04:40 pm
HK News Desk
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
Elon Musk, Fraud India: ವಿಶ್ವದ ನಂಬರ್ 1 ಶ್ರೀಮಂ...
28-03-25 01:38 pm
Vladimir Putin, Zelensky: ರಷ್ಯಾ ಅಧ್ಯಕ್ಷ ಪುಟಿನ...
28-03-25 01:07 pm
30-03-25 11:02 pm
Mangaluru HK Staff
Mangalore, Ullal Netravati Bridge Repair, Tra...
30-03-25 03:07 pm
Kumapla, Mangalore, Crime: ಲಕೋಟೆಯಲ್ಲಿ ಸಂಸ್ಕರಿ...
30-03-25 02:39 pm
Mangalore CM Medal, Anupam Agrawal, Police Ma...
29-03-25 11:04 pm
MLC Ivan D'Souza, Mangalore: 7ನೇ ವೇತನ ಆಯೋಗ ;...
29-03-25 10:07 pm
30-03-25 08:59 am
Mangaluru Correspondent
ಆಂಧ್ರದಲ್ಲಿ ಪ್ಯಾಸ್ಟರ್ ಪ್ರವೀಣ್ ಕುಮಾರ್ ಸಂಶಯಾಸ್ಪದ...
29-03-25 10:33 pm
Bajrang Dal, Arrest, Cow Transport, Mangalore...
29-03-25 04:02 pm
Mangalore Nandigudde Prostitution case: ನಂದಿಗ...
28-03-25 09:25 pm
Ccb Mangalore, Drugs, Charas, Crime: ಸಿಸಿಬಿ ಪ...
28-03-25 08:37 pm