ಬ್ರೇಕಿಂಗ್ ನ್ಯೂಸ್
31-07-24 11:03 pm Mangalore Correspondent ಕರಾವಳಿ
ಮಂಗಳೂರು, ಜುಲೈ 31: ಹಂಪನಕಟ್ಟೆಯ ಹೃದಯಭಾಗದಲ್ಲಿ ಶತಮಾನ ಪೂರೈಸಿದ ಪಿರೇರಾ ಹೊಟೇಲ್ ಕೊನೆಗೂ ಬಾಗಿಲು ಹಾಕಿದೆ. ಒಂದು ಕಾಲದಲ್ಲಿ ಪೋರ್ಕ್ ಪೆಪ್ಪರ್ ಡ್ರೈ ಕಾರಣಕ್ಕೆ ಕೆಥೋಲಿಕ್ ಕ್ರಿಸ್ತಿಯನ್ನರ ಪಾಲಿನ ಅತ್ಯಂತ ನೆಚ್ಚಿನ ಮತ್ತು ಮಂಗಳೂರಿನ ಈ ರೀತಿಯ ಏಕೈಕ ಹೊಟೇಲ್ ಆಗಿದ್ದ ಪಿರೇರಾ ಮೊನ್ನೆ ಜುಲೈ 27ರಂದು ಕೊನೆಯ ಸರ್ವ್ ಮಾಡಿದೆ.
1921ರಲ್ಲಿ ಮಿಲಾಗ್ರಿಸ್ ಚರ್ಚ್ ಎದುರಿನ ಕಟ್ಟಡದಲ್ಲಿ ಆರಂಭಗೊಂಡಿದ್ದ ಪಿರೇರಾ ಹೊಟೇಲಿನ ಒಡೆತನ ನಾಲ್ಕನೇ ತಲೆಮಾರಿಗೆ ವಾಲಿಕೊಂಡಿತ್ತು. ದಿವಂಗತ ಇಗ್ನೇಶಿಯಸ್ ಪಿರೇರಾ ಈ ಹೊಟೇಲಿನ ಸ್ಥಾಪಕರಾಗಿದ್ದು, ಆನಂತರ ಅವರ ಮಗ, ಮೊಮ್ಮಗನೂ ಹೊಟೇಲನ್ನು ಒಳ್ಳೆಯ ರೀತಿ ನಡೆಸಿಕೊಂಡು ಬಂದಿದ್ದರು. ಸಾಮಾನ್ಯ ದರದಲ್ಲಿ ಸಿಗುತ್ತಿದ್ದ ಮೀನು ಊಟ ಪಿರೇರಾ ಹೊಟೇಲಿನ ಫೇಮಸ್ ಡಿಶ್ ಆಗಿತ್ತು. ಸಾಮಾನ್ಯ ದರಕ್ಕೆ ಅತ್ಯುತ್ತಮ ಊಟ ಸಿಗುತ್ತಿದ್ದ ಕಾರಣಕ್ಕೆ ಅತಿ ಹೆಚ್ಚು ಜನರು ಊಟಕ್ಕಾಗಿ ಪಿರೇರಾ ಹೊಟೇಲ್ ಹೋಗುತ್ತಿದ್ದರು.



ಮೂರನೇ ತಲೆಮಾರಿನ ಓಲಿವರ್ ಪಿರೇರಾ ಇತ್ತೀಚಿನ ವರೆಗೂ ಹೊಟೇಲನ್ನು ಹಳೆಯ ಶೈಲಿಯಲ್ಲೇ ನಡೆಸಿಕೊಂಡು ಬಂದಿದ್ದರು. ಹೊಟೇಲ್ ನಿಲ್ಲಿಸುತ್ತಿರುವುದಕ್ಕೆ ಅವರು ಕೊಟ್ಟ ಮೇಜರ್ ಕಾರಣ, ನಮ್ಮ ನಾಲ್ಕನೇ ತಲೆಮಾರಿನವರು ಹೊಟೇಲ್ ನಡೆಸುವುದಕ್ಕೆ ಆಸಕ್ತಿ ಹೊಂದಿಲ್ಲ ಎನ್ನೋದನ್ನು. ಎರಡನೇದಾಗಿ ಪಾರ್ಕಿಂಗ್ ಇಲ್ಲದ ಕಾರಣ ಜನರು ಇಲ್ಲಿಗೆ ಹೆಚ್ಚು ಬರುತ್ತಿಲ್ಲ. ಹೆಚ್ಚಿನವರು ತಮ್ಮದೇ ವಾಹನದಲ್ಲಿ ಹೊಟೇಲ್ ಬರುತ್ತಾರೆ. ಮತ್ತೊಂದು, ಈಗ ಒಳ್ಳೆ ಕುಕ್ ಸಿಗುತ್ತಿಲ್ಲ. ನಾನು ಸುದೀರ್ಘ ಕಾಲ ಹೊಟೇಲ್ ನಡೆಸಿಕೊಂಡು ಬಂದೆವು. ಇನ್ನೂ ಕಷ್ಟ ಪಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ಮೊದಲಿಗೆ ಇಗ್ನೇಶಿಯಸ್ ಪಿರೇರಾ ಹೊಟೇಲ್ ಆರಂಭಿಸಿದ್ದರೂ, ಮಗ ವಿಲಿಯಂ ಪಿರೇರಾ ಕಾಲದಲ್ಲಿ ಹೊಟೇಲ್ ಮತ್ತಷ್ಟು ಉತ್ತಮವಾಗಿತ್ತು. ಆನಂತರ, ಮೊಮ್ಮಗ ಒಲಿವರ್ ಪಿರೇರಾ ಅವರು ಮತ್ತಷ್ಟು ಮೆನುಗಳನ್ನು ರೆಡಿ ಮಾಡಿಸಿ, ಮೀನು, ಮಾಂಸ ಪ್ರಿಯರನ್ನು ಹೊಟೇಲಿನತ್ತ ಆಕರ್ಷಿಸುವಂತೆ ಮಾಡಿದ್ದರು. ಸ್ವಂತ ಕಟ್ಟಡದಲ್ಲಿ ಹೊಟೇಲ್ ಮಾಡಿಸಿ, ಮೊದಲ ಮಹಡಿಯಲ್ಲಿ ಲಾಡ್ಜಿಂಗ್ ಮಾಡಿಸಿದ್ದರು. ಓಲಿವರ್ ಕ್ಯಾಟರಿಂಗ್ ಸೇವೆಯನ್ನೂ ಆರಂಭಿಸಿ, ಕೋವಿಡ್ ವರೆಗೂ ನಡೆಸಿಕೊಂಡು ಬಂದಿದ್ದರು. ಆನಂತರ, ಕೆಲಸಕ್ಕೆ ಜನ ಸಿಗದೆ ನಿಲ್ಲಿಸಿದ್ದರು.
ತಮ್ಮ ಕುಟುಂಬ ಬಿಟ್ಟು ಬೇರೆಯವರಿಗೆ ಹೊಟೇಲ್ ನಡೆಸುವುದಕ್ಕೆ ಬಿಟ್ಟುಕೊಡುತ್ತೀರಾ ಎಂಬ ಪ್ರಶ್ನೆಗೆ, ಒಂದೂ ತೋಚುತ್ತಿಲ್ಲ ಎನ್ನುತ್ತಾರೆ ಓಲಿವರ್. ಪಿರೇರಾ ಹೊಟೇಲ್ ಪ್ರಿಯರೆಲ್ಲ ಓಲಿವರ್ ಅವರಲ್ಲಿ ಏನು ಹೊಟೇಲ್ ನಿಲ್ಲಿಸ್ತೀರಾ ಎಂದು ಪ್ರಶ್ನೆ ಹಾಕುತ್ತಿದ್ದಾರೆ.
The iconic Pereira Hotel, affectionately known as Inasaam’s Hotel, located in the heart of the city at Hampankatta, served its final meal to customers on Saturday and closed its doors permanently, after 100 years of operation.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 06:08 pm
HK News Staffer
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
Mangalore Jail Jammer, Lawyers Protest, CM, M...
18-09-26 11:30 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am