ಬ್ರೇಕಿಂಗ್ ನ್ಯೂಸ್
30-07-24 03:03 pm Mangalore Correspondent ಕರಾವಳಿ
ಸಕಲೇಶಪುರ, ಜುಲೈ.30: ಶಿರಾಡಿಘಾಟ್ ಹೆದ್ದಾರಿಯ ದೊಡ್ಡತಪ್ಲು ಭಾಗದಲ್ಲಿ ಮತ್ತೆ ಭಾರೀ ಪ್ರಮಾಣದ ಭೂಕುಸಿತ ಆಗಿದ್ದು ಎರಡು ಕಾರು, ಟ್ಯಾಂಕರ್, ಟಿಪ್ಪರ್ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದೆ. ಗುಡ್ಡ ಕುಸಿತದ ಕಾರಣ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ತಡೆ ಒಡ್ಡಲಾಗಿದ್ದು ಮಂಗಳೂರು- ಬೆಂಗಳೂರು ಸಂಚಾರಕ್ಕೆ ತೊಡಕಾಗಿದೆ.
ಗುಡ್ಡ ಕುಸಿದ ಮಣ್ಣು ಮಣ್ಣಿನಡಿ ಹಲವು ವಾಹನಗಳು ಸಿಲುಕಿದ್ದು ರಸ್ತೆಯಲ್ಲಿ ನಿಲ್ಲಿಸಿದ್ದ ಟಿಪ್ಪರ್ ಮತ್ತು ಟ್ಯಾಂಕರ್ ಮಣ್ಣು ಕುಸಿತದಿಂದ ಪಲ್ಟಿಯಾಗಿ ಬಿದ್ದಿದೆ. ಎರಡು ಕಾರು, ಒಂದು ಟ್ಯಾಂಕರ್, ಒಂದು ಟಿಪ್ಪರ್ ಸೇರಿ ಕೆಲವು ವಾಹನ ವಾಹನಗಳು ಜಖಂ ಆಗಿವೆ. ಅದೃಷ್ಟವಶಾತ್ ವಾಹನ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಮ್ಮ ವಾಹನಗಳನ್ನ ಅಲ್ಲಿಯೇ ಬಿಟ್ಟು ಪ್ರಯಾಣಿಕರು ಮಣ್ಣಿನಿಂದ ಹೊರಬಂದಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್ ಬಳಿಯಲ್ಲಿ ಕಳೆದ ಹದಿನೈದು ದಿನಗಳಿಂದ ಭೂಮಿ ಕುಸಿಯುತ್ತಿದ್ದು ಮಣ್ಣಿನ ರಾಶಿ ರಸ್ತೆಗೆ ಬೀಳುತ್ತಿದೆ. ಕಾರಿನಲ್ಲಿ ಸಿಲುಕಿದ್ದ ಸವಾರರನ್ನು ರಕ್ಷಣೆ ಮಾಡಲಾಗಿದೆ. ಜೆಸಿಬಿ ಮೂಲಕ ಕುಸಿದ ಮಣ್ಣನ್ನು ತೆರವು ಮಾಡುತ್ತಿದ್ದಾರೆ.
ಸ್ಥಳದಲ್ಲಿ ಮತ್ತಷ್ಟು ಮಣ್ಣು ಕುಸಿದರೆ ದೊಡ್ಡ ಅನಾಹುತವೇ ನಡೆಯೋ ಭೀತಿ ಜನರಲ್ಲಿದೆ. ಸಮರೋಪಾದಿಯಲ್ಲಿ ಮಣ್ಣು ತೆರವು ಮಾಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಸಕಲೇಶಪುರ ಆಸುಪಾಸಿನಲ್ಲಿ ವಿಪರೀತ ಎನ್ನುವಷ್ಟು ಅಲ್ಲಲ್ಲಿ ಭೂಕುಸಿತ, ರಸ್ತೆ ಕುಸಿತ ಆಗಿದ್ದು ಇದಕ್ಕೆಲ್ಲ ಅವೈಜ್ಞಾನಿಕ ರೀತಿಯ ಎತ್ತಿನಹೊಳೆ ಕಾಮಗಾರಿ ಕಾರಣ ಎಂಬ ಆಕ್ರೋಶ ಕೇಳಿಬಂದಿದೆ.
The movement of vehicles on Shiradi Ghat stretch of Bengaluru-Mangaluru highway (NH 75) has been badly affected following a landslip at Doddathappale village in Sakleshpur taluk of Hassan district in Karnataka. Large chunks of a hillock fell on vehicles travelling on the road on July 30. Two trucks and a car were stuck in the mud. Heavy earthmovers have been deployed to clear the mud on the road.
25-08-25 10:55 pm
Bangalore Correspondent
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
25-08-25 10:59 pm
Mangalore Correspondent
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
Dharmasthala, Mask Man, Fake Skull, SIT: ಎಸ್ಐ...
25-08-25 12:24 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am