ಬ್ರೇಕಿಂಗ್ ನ್ಯೂಸ್
29-07-24 09:22 pm Mangalore Correspondent ಕರಾವಳಿ
ಉಳ್ಳಾಲ, ಜು.29: ಉಳ್ಳಾಲದ ಕೋಟೆಪುರದಿಂದ ಉಚ್ಚಿಲ ಬಟ್ಟಪ್ಪಾಡಿ ತನಕದ ಕಡಲ್ಕೊರೆತ ಪೀಡಿತ ಸೂಕ್ಷ್ಮ ಪ್ರದೇಶಗಳನ್ನ ಗುರುತಿಸಿದ್ದು ಅಲ್ಲಿ ತಕ್ಷಣವೇ ತಾತ್ಕಾಲಿಕ ರಕ್ಷಣಾ ಕಾಮಗಾರಿ ನಡೆಸಲು ಆದೇಶಿಸಲಾಗಿದೆ. ಕಡಲ್ಕೊರೆತದಿಂದ ಮನೆ, ರಸ್ತೆಗಳಿಗೆ ಹಾನಿಯುಂಟಾಗಲು ನಾವು ಬಿಡುವುದಿಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಸೋಮವಾರ ಉಳ್ಳಾಲದ ಕಡಲ್ಕೊರೆತ ಪೀಡಿತ ಪ್ರದೇಶಗಳಾದ ಕೋಟೆಪುರ, ಮೊಗವೀರ ಪಟ್ಣ, ಸೀಗ್ರೌಂಡ್, ನ್ಯೂ ಉಚ್ಚಿಲ, ಉಚ್ಚಿಲ ಬಟ್ಟಪ್ಪಾಡಿ ಪ್ರದೇಶಗಳಿಗೆ ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಉಳ್ಳಾಲ ಕೋಟೆಪುರದಿಂದ ಬಟ್ಟಪ್ಪಾಡಿ ತನಕದ ಕಡಲ್ಕೊರೆತ ತೀವ್ರತೆಯ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಎಡಿಬಿ ಯೋಜನೆಯ ಮೂಲಕ ಕಡಲ್ಕೊರೆತ ತಡೆಯ ಬ್ರೇಕ್ ವಾಟರ್ ಕಾಮಗಾರಿ ನಡೆದ ಕಾರಣ ಮನೆಗಳಿಗೆ ಹಾನಿ ಉಂಟಾಗುವುದು ಬಹುತೇಕ ಕಡಿಮೆ ಆಗಿದೆ. ಬಟ್ಟಪ್ಪಾಡಿಯಲ್ಲಿ ನಾಲ್ಕು ವರುಷಗಳ ಹಿಂದೆ ರಸ್ತೆ ಸಂಪರ್ಕ ಕಡಿತ ಆದನಂತರ ಆ ಪ್ರದೇಶದಲ್ಲಿ ಕಡಲ್ಕೊರೆತ ತಡೆಯ ಶಾಶ್ವತ ಕಾಮಗಾರಿ ಆಗಿಲ್ಲ. ಬಟ್ಟಪ್ಪಾಡಿ ಪ್ರದೇಶದ ಮನೆಗಳ ರಕ್ಷಣೆಗಾಗಿ ತಾತ್ಕಾಲಿಕ ರಕ್ಷಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೆವು. ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡಿದರೂ ಪ್ರತೀ ವರ್ಷವೂ ಅದರ ಸಮರ್ಪಕ ನಿರ್ವಹಣೆ ಅಗತ್ಯ.


ಎಡಿಬಿ ಯೋಜನೆಯಿಂದ ನಡೆದ ಬ್ರೇಕ್ ವಾಟರ್ ಕಾಮಗಾರಿಯ ಸಮರ್ಪಕ ನಿರ್ವಹಣೆ ಆಗಿಲ್ಲ. ಮತ್ತೆ ಇದನ್ನ ಸುಸ್ಥಿರ ಮಾಡಲು ನಿರ್ವಹಣೆಯ ಖರ್ಚಿನ ಅಂದಾಜು ಪಟ್ಟಿಯ ವರದಿಯನ್ನ ಸರಕಾರಕ್ಕೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಅದಕ್ಕೆ ಅನುಗುಣವಾಗಿ ಮುಂದಿನ ವರ್ಷ ನಿರ್ವಹಣೆ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ. ಬಿರುಸಿನ ಮಳೆಗಾಲದ ಈ ಹಂತದಲ್ಲಿ ಅತಿ ಅಗತ್ಯತೆ ಇರುವ ಸ್ಥಳಗಳಲ್ಲಿ ಕಡಲ್ಕೊರೆತ ತಡೆಯ ತಾತ್ಕಾಲಿಕ ಕೆಲಸ, ಕಾಮಗಾರಿ ಚಾಲನೆ ಕೊಡುವ ಬಗ್ಗೆ ವೀಕ್ಷಣೆ ನಡೆಸಲು ಬಂದಿರುವುದಾಗಿ ತಿಳಿಸಿದರು.
ಕೆಲವರು ಸಮುದ್ರ ತೀರದ ತಮ್ಮ ಖಾಸಗಿ ಜಾಗದ ಮುಂದೆ ಅಲೆಗಳನ್ನ ನಿಯಂತ್ರಿಸಲು ಕಲ್ಲುಗಳನ್ನ ಹಾಕುತ್ತಿದ್ದಾರೆ. ಸಾರ್ವಜನಿಕ ರಸ್ತೆಯ ಜಾಗ ಬಿಟ್ಟು ಭವಿಷ್ಯದ ಕಾಮಗಾರಿಗೆ ತೊಂದರೆ ಕೊಡದಂತೆ ಖಾಸಗಿಯವರು ಅಧಿಕಾರಿಗಳಿಂದ ಒಪ್ಪಿಗೆ ತೆಗೆದೇ ಸಮುದ್ರ ತೀರಕ್ಕೆ ಕಲ್ಲುಗಳನ್ನ ಹಾಕುವ ಕಾಮಗಾರಿ ನಡೆಸಬೇಕೆಂಬ ನಿಯಮ ಮಾಡಿರುವುದಾಗಿ ಸ್ಪೀಕರ್ ಖಾದರ್ ಹೇಳಿದರು.
ನ್ಯೂ ಉಚ್ಚಿಲದ ವಾಸ್ಕೋ ರೆಸಾರ್ಟ್ ಮುಂದೆ ಕಡಲು ಪ್ರಕ್ಷುಬ್ದಗೊಂಡಿದ್ದು ಉಚ್ಚಿಲ- ಸೋಮೇಶ್ವರ ಸಂಪರ್ಕ ರಸ್ತೆ ಕಡಿತಗೊಳ್ಳುವ ಭೀತಿ ಎದುರಾಗಿದೆ. ಪ್ರದೇಶದ ಕಡಲ ತೀರದಲ್ಲಿರುವ ಯೋಗೀಶ್ ಎಂಬವರ ಮನೆ ಕೊಚ್ಚಿ ಹೋಗುವ ಹಂತದಲ್ಲಿದೆ. ನ್ಯೂ ಉಚ್ಚಿಲಕ್ಕೆ ಬೇಟಿ ನೀಡಿದ ಖಾದರ್ ಅವರು ಯೋಗೀಶ್ ಅವರನ್ನ ಭೇಟಿ ನೀಡಿ ಧೈರ್ಯ ತುಂಬಿದರು. ಮನೆ, ಸಂಪರ್ಕ ರಸ್ತೆಗೆ ಹಾನಿಯಾಗಲು ನಾವು ಬಿಡುವುದಿಲ್ಲ. ತಕ್ಷಣವೇ ತಾತ್ಕಾಲಿಕ ರಕ್ಷಣಾ ಕಾಮಗಾರಿ ನಡೆಸಲು ಆದೇಶಿಸಿರುವುದಾಗಿ ಹೇಳಿದರು.
ಮಂಗಳೂರು ಸಹಾಯಕ ಕಮೀಷನರ್ ಹರ್ಷವರ್ಧನ್, ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಬಂದರು ಇಲಾಖೆ ಅಧಿಕಾರಿ ರಾಜೇಶ್, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತಡಿ, ಸದಸ್ಯರಾದ ರವಿಶಂಕರ್ ಸೋಮೇಶ್ವರ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಶೆಟ್ಟಿ ಬೋಳಿಯಾರು, ಮುಖಂಡರಾದ ಸುರೇಶ್ ಭಟ್ನಗರ ಮೊದಲಾದವರು ಉಪಸ್ಥಿತರಿದ್ದರು.
Mangalore Ullal, speaker ut khader visits alll beaches to see sea Erosion, instructs officers for measurement.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm