ಬ್ರೇಕಿಂಗ್ ನ್ಯೂಸ್
29-07-24 09:08 pm Mangalore Correspondent ಕರಾವಳಿ
ಮಂಗಳೂರು, ಜುಲೈ.29: ಕರಾವಳಿಯಲ್ಲಿ ಮಳೆ ಬರುವುದು, ಗುಡ್ಡ ಕುಸಿಯುವುದು ಹೊಸತಲ್ಲ. ಎಲ್ಲೋ ರಸ್ತೆ ಕುಸಿಯಿತೆಂದು ಇಡೀ ಹೆದ್ದಾರಿಯನ್ನು ಬಂದ್ ಮಾಡುವುದರಿಂದ ಜನರಿಗೆ ತೊಂದರೆಯಾಗುತ್ತದೆ. ಅಂತಹ ಸಂದರ್ಭ ಬಂದಲ್ಲಿ ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮೀಟಿಂಗ್ ಮಾಡಿ ನಿರ್ಧಾರಕ್ಕೆ ಬರಬೇಕು. ಗುಡ್ಡ ಕುಸಿತಗಳ ಸಂದರ್ಭ ಕಾಮಗಾರಿ ನಡೆಸಲು ಸ್ಥಳೀಯವಾಗಿ ತಂಡ ರೆಡಿ ಇಟ್ಟುಕೊಳ್ಳಬೇಕು. ಹೆದ್ದಾರಿ ಬಂದ್ ಮಾಡಿದರೆ ದೊಡ್ಡ ಮಟ್ಟದಲ್ಲಿ ನಷ್ಟವಾಗುತ್ತದೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.
ಪಿಡಬ್ಲ್ಯುಡಿ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆಸಿದ ಖಾದರ್, ಬಳಿಕ ಮಾಧ್ಯಮಕ್ಕೆ ಮಾಹಿತಿ ನೀಡಿದರು. ಬಂಟ್ವಾಳ ಭಾಗದ ಹೆದ್ದಾರಿಯಲ್ಲಿ ದೊಡ್ಡ ಹೊಂಡಗಳಾಗಿದ್ದು, ಜನರು ಸಂಚರಿಸದ ಸ್ಥಿತಿಯಾಗಿದೆ. ಮೂಡುಬಿದ್ರೆ ರಸ್ತೆಯಲ್ಲೂ ಅಂತಹದ್ದೇ ಸ್ಥಿತಿಯಿದೆ. ಶಿರಾಡಿ, ಚಾರ್ಮಾಡಿ ರಸ್ತೆಯನ್ನೂ ಪರಿಶೀಲನೆ ನಡೆಸಲು ಸೂಚಿಸಿದ್ದೇನೆ. ಇಲ್ಲಿ ಏರುತಗ್ಗು, ಗುಡ್ಡಗಳಿರುವುದರಿಂದ ಉತ್ತರ ಕರ್ನಾಟಕದ ರೀತಿ ರಸ್ತೆಗೆ ಎಸ್ಟಿಮೇಟ್ ಮಾಡುವುದಲ್ಲ. ಗುಡ್ಡ ಅಗೆತದ ಬಳಿ ಕುಸಿಯದಂತೆ ತಡೆಗೋಡೆಯನ್ನೂ ಕಟ್ಟಬೇಕು. ಇದಕ್ಕಾಗಿ ಯೋಜನೆಯಲ್ಲಿ ಹೆಚ್ಚುವರಿ ಮೊತ್ತ ಸೇರಿಸಬೇಕು. ಇಲ್ಲದಿದ್ದರೆ ರಸ್ತೆ ಆದಕೂಡಲೇ ಕುಸಿಯುವ ಸ್ಥಿತಿ ಎದುರಾಗುತ್ತದೆ ಎಂದರು.
ಘಾಟಿ ಪ್ರದೇಶದಲ್ಲಿ ಮಳೆಗಾಲದಲ್ಲಿ ಕುಸಿತ ಉಂಟಾಗುವ ಸ್ಥಿತಿಯಿದ್ದರೆ, ಹತ್ತು ಕಿಮೀಗೆ ಒಂದರಂತೆ ತಂಡ ರೆಡಿ ಇಟ್ಟುಕೊಂಡು ಕುಸಿತದ ಬೆನ್ನಲ್ಲೇ ಸರಿಪಡಿಸಬೇಕು. ಸಕಲೇಶಪುರದಿಂದ ಮಾರನಹಳ್ಳಿ ವರೆಗೆ ಶಿರಾಡಿಯಲ್ಲಿ ಕುಸಿತ ಆಗುತ್ತಿದ್ದು, ಇದನ್ನು ಸರಿಪಡಿಸುವ ವ್ಯವಸ್ಥೆ ಆಗಬೇಕು ಎಂದು ಹೇಳಿದರು.
ತುಳು ಭಾಷೆ ಬಗ್ಗೆ ಬೆಂಗಳೂರಿನಲ್ಲಿ ಸಭೆ
ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿಸುವ ಪ್ರಸ್ತಾಪದ ಬಗ್ಗೆ ಕೇಳಿದ ಪ್ರಶ್ನೆಗೆ, ಶೀಘ್ರದಲ್ಲೇ ಕರಾವಳಿಯ ಶಾಸಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ತುಳು ಅಕಾಡೆಮಿ ಅಧ್ಯಕ್ಷರ ಜೊತೆಗೆ ಬೆಂಗಳೂರಿನಲ್ಲಿ ಸಭೆ ನಡೆಸುತ್ತೇವೆ. ಬೇರೆ ರಾಜ್ಯಗಳಲ್ಲಿ ಯಾವ ರೀತಿ ಅಧಿಕೃತ ಭಾಷೆ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆಯಲಾಗಿದೆ. ತುಳು ಭಾಷೆಗೆ ತನ್ನದೇ ಲಿಪಿ ಹೊಂದಿದ್ದು, ಇತರ ದ್ರಾವಿಡ ಭಾಷೆಗಳಷ್ಟೇ ಪ್ರಾಮುಖ್ಯತೆ ಇದೆ. ಕರಾವಳಿಯಲ್ಲಿ ಬೇರೆ ಭಾಷೆಗಳಿಗೆ ಲಿಪಿ ಇಲ್ಲದಿದ್ದರೂ, ತುಳುವಿಗೆ ಸ್ವಂತ ಲಿಪಿ ಇದೆ. 2 ಸಾವಿರ ವರ್ಷಗಳ ಇತಿಹಾಸ ಇದೆ. ಇದನ್ನು ತುಳು ಅಕಾಡೆಮಿ ಮೂಲಕ ಇಡೀ ರಾಜ್ಯದಲ್ಲಿ ಪಸರಿಸುವ ಕೆಲಸ ಆಗಬೇಕಿದೆ ಎಂದರು.
Road closures should be a last resort and only implemented when there are significant issues such as landslides on Shiradi and Charmadi Ghats, said Karnataka Legislative Assembly Speaker U.T. Khader on Monday. He emphasized the importance of addressing problems during road construction to prevent landslides during the monsoon.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm