ಬ್ರೇಕಿಂಗ್ ನ್ಯೂಸ್
29-07-24 08:25 pm Mangalore Correspondent ಕರಾವಳಿ
ಮಂಗಳೂರು, ಜುಲೈ.29: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಜನ ಸೋಲಿಸುತ್ತಾರೆಂಬ ನಿರೀಕ್ಷೆ ಇತ್ತು. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತದೆಯೆಂಬ ನಿರೀಕ್ಷೆ ಇತ್ತು. ಜನರು ನಿರೀಕ್ಷೆ ಮಾಡದ ರೀತಿ ಫಲಿತಾಂಶ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸಿಗೆ ಸೋಲಾಗಿರುವುದು ಪ್ರಜಾಪ್ರಭುತ್ವಕ್ಕಾದ ಸೋಲು, ಸಂವಿಧಾನಕ್ಕೆ ಆಗಿರುವ ಸೋಲು. ಪಕ್ಷದ ಸೋಲಿನ ಬಗ್ಗೆ ವಿಮರ್ಶೆ ಮಾಡಲು ತಳಮಟ್ಟದ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಅಧ್ಯಕ್ಷ ವಿ.ಎಸ್ ಉಗ್ರಪ್ಪ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಪ್ರಮುಖರಿಂದ ಮಾಹಿತಿ ಸಂಗ್ರಹಿಸಿದ ಬಳಿಕ ಉಗ್ರಪ್ಪ ಸುದ್ದಿಗೋಷ್ಠಿ ನಡೆಸಿದರು. ಮೋದಿ ಈ ಬಾರಿ 400 ಸೀಟು ಗೆಲ್ಲುತ್ತೇವೆ ಎನ್ನುತ್ತಿದ್ದರು. ಇಂಡಿಯಾ ಒಕ್ಕೂಟ 300 ಪ್ಲಸ್ ಸೀಟು ಗೆಲ್ಲುವ ಭರವಸೆಯಲ್ಲಿತ್ತು. ರಾಜ್ಯದಲ್ಲಿ ಬಿಜೆಪಿ 28 ಸೀಟು ಅಂತ ಹೇಳುತ್ತಿದ್ದರೆ, ನಾವು 20 ಸೀಟು ಗೆಲ್ಲುವ ಉತ್ಸಾಹದಲ್ಲಿದ್ದೆವು. ಆದರೆ, ಮತದಾರ ಬೇರೆಯದ್ದೇ ರೀತಿಯ ಫಲಿತಾಂಶ ಕೊಟ್ಟಿದ್ದಾನೆ. ದೇಶದಲ್ಲಿ ಪ್ರತಿ ಚುನಾವಣೆಯೂ ವಿಚಾರದ ಮೇಲೆ ನಡೆದುಬಂದಿದೆ. 1980ರಲ್ಲಿ ಬೆಲೆಯೇರಿಕೆ, 84ರಲ್ಲಿ ಇಂದಿರಾ ಹತ್ಯೆ, 89ರಲ್ಲಿ ಬೋಫೋರ್ಸ್, 91ರಲ್ಲಿ ರಾಜೀವ ಗಾಂಧಿ ಹತ್ಯೆ, 96ರಲ್ಲಿ ರಾಮಮಂದಿರ, 98ರಲ್ಲಿ ಅತಂತ್ರ ಫಲಿತಾಂಶ, 2004ರಲ್ಲಿ ಭಾರತ ಪ್ರಕಾಶಿಸುತ್ತಿದೆ ಎಂಬ ನೆಲೆಯಲ್ಲಿ ಚುನಾವಣೆ ನಡೆದಿತ್ತು. 2009ರಲ್ಲಿ ಮನಮೋಹನ್ ಸಿಂಗ್ ಸರಕಾರದ ಆರ್ಟಿಐ ಹಕ್ಕು, ಶಿಕ್ಷಣದ ಹಕ್ಕು, ಉದ್ಯೋಗ ಖಾತ್ರಿ ಇತ್ಯಾದಿ ಜನಪರ ಕಾರ್ಯಕ್ರಮದ ಮೇಲೆ ಚುನಾವಣೆ ನಡೆದಿತ್ತು. 2014ರಲ್ಲಿ 2ಜಿ, 3ಜಿ ಹಗರಣ ಮುಂದಿಟ್ಟು ಚುನಾವಣೆ ನಡೆದಿತ್ತು. ಹಗರಣ ಎಂದು ಹೇಳಿದರೂ, ಯಾವುದನ್ನೂ ಮೋದಿ ಸರ್ಕಾರಕ್ಕೆ ಸಾಬೀತು ಪಡಿಸಲು ಆಗಿಲ್ಲ.
2019ರಲ್ಲಿ ಪುಲ್ವಾಮಾ ದಾಳಿ ವಿಚಾರವೇ ಮೇಲುಗೈ ಪಡೆದಿತ್ತು. ಆನಂತರ, ಜಮ್ಮು ಕಾಶ್ಮೀರದ ಗವರ್ನರ್ ಪುಲ್ವಾಮಾ ದಾಳಿಯ ಹಿಂದಿನ ಹುನ್ನಾರಗಳನ್ನು ಬಯಲು ಮಾಡಿದ್ದರು. ಈ ಸಲದ ಚುನಾವಣೆಯಲ್ಲಿ ಬೆಲೆಯೇರಿಕೆ, ಭ್ರಷ್ಟಾಚಾರ, ಸರ್ಕಾರದ ವೈಫಲ್ಯ ಎಲ್ಲ ವಿಚಾರಗಳೂ ಇದ್ದವು. ರಫೇಲ್ ಹಗರಣ ಎಂದು ಹೇಳಿ 570 ಕೋಟಿಯ ಯುಪಿಎ ಒಪ್ಪಂದವನ್ನು ಮುರಿದು 135 ಕಾಪ್ಟರ್ ಬದಲು 35ಕ್ಕಿಳಿಸಿ, ಅದರ ಬೆಲೆಯನ್ನು ಒಂದಕ್ಕೆ 1065 ಕೋಟಿಗೇರಿಸಿ ಅದರಲ್ಲಿ ಸುಮಾರು 40 ಸಾವಿರ ಕೋಟಿಯಷ್ಟು ಕಿಕ್ ಬ್ಯಾಕ್ ಪಡೆದಿದ್ದರು. 5ಜಿ ಅಂತ ಮಾಡಿ 12 ಸಾವಿರ ಕೋಟಿಯಲ್ಲಿ 60 ಪರ್ಸೆಂಟ್ ಕಿಕ್ ಬ್ಯಾಕ್ ಮಾಡಿಕೊಂಡರು. ಇದಕ್ಕಾಗಿ ಈ ಸಲ ಬಿಜೆಪಿಯನ್ನು ಜನ ಸೋಲಿಸುತ್ತಾರೆಂಬ ನಿರೀಕ್ಷೆ ಇತ್ತು. ಈವರೆಗೆ ದೇಶ ಕಂಡ ಪ್ರಧಾನಿಗಳಲ್ಲಿ ಅತ್ಯಂತ ದುರ್ಬಲ, ವಿಫಲ ಪ್ರಧಾನಿಯಿದ್ದರೆ ಅದು ಮೋದಿ ಮಾತ್ರ. ದೇಶ ರಕ್ಷಣೆ ಮಾಡುವಲ್ಲಿಯೂ ಮೋದಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಸರಕಾರಿ ನೌಕರರು ಆರೆಸ್ಸೆಸ್ ಅಥವಾ ಇನ್ನೊಂದು ಮೂಲಭೂತವಾದಿ ಸಂಘಟನೆಗಳಲ್ಲಿ ಸೇರಬಾರದು ಎಂದು ನಿರ್ಬಂಧ ಮಾಡಿದ್ದೆವು. ಒಂದು ಜಿಲ್ಲೆಯ ಡೀಸಿ ಅಥವಾ ಎಸ್ಪಿ ಆರೆಸ್ಸೆಸ್ ಶಾಖೆಗಳಲ್ಲಿ ಕಾಣಿಸಿಕೊಂಡರೆ ಹೇಗಿರಬೇಡ. ಸಂವಿಧಾನದ ಪೀಠಿಕೆಯಲ್ಲಿರುವಂತೆ ಧರ್ಮನಿರಪೇಕ್ಷ ತತ್ವ ಜಾರಿಗೆ ಬರಬೇಕು, ಧರ್ಮದ ತಳಹದಿ ಇರಬಾರದು ಎಂದು ಕಾಂಗ್ರೆಸ್ ಕಾಲದಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಬಿಜೆಪಿ ಮತ್ತು ಆರೆಸ್ಸೆಸ್ ಒಂದೇ ನಾಣ್ಯದ ಎರಡು ಮುಖ. ಸರಕಾರಿ ನೌಕರರನ್ನೂ ಆರೆಸ್ಸೆಸ್ ಮಾಡಿಸಬೇಕೆಂಬ ಹುನ್ನಾರದಿಂದ ಈ ಕೆಲಸ ಮಾಡಿದೆ. ಈಗ ಇನ್ನಾವುದೇ ಸಂಘಟನೆ ಈ ಬೇಡಿಕೆಯನ್ನು ಇಟ್ಟರೆ ಇವರು ಈಡೇರಿಸುತ್ತಾರೆಯೇ ಎಂದು ಪ್ರಶ್ನಿಸಿದರು.
ಬಜೆಟ್ ನಲ್ಲಿ ತಾರತಮ್ಯ ಮಾಡುವುದು ಮುತ್ಸದ್ಧಿತನ ಅಲ್ಲ. ಬಿಹಾರ ಮತ್ತು ಆಂಧ್ರಕ್ಕೆ ಹೆಚ್ಚಿನ ಪಾಲು ಕೊಟ್ಟಿರುವುದು ಯಾವ ಸೂತ್ರ ಎಂದು ಕೇಳಿದ ಅವರು, ಈ ಕುರಿತ ಚರ್ಚೆಯ ಸಂದರ್ಭದಲ್ಲಿ ಚಂದ್ರಬಾಬು ನಾಯ್ಡುಗೆ 20 ನಿಮಿಷ ಅವಕಾಶ ಕೊಡುತ್ತಾರೆ. ಮಮತಾ ಬ್ಯಾನರ್ಜಿಗೆ ಮೈಕ್ ಆಫ್ ಮಾಡಿಸುತ್ತಾರೆ. ಇದು ಮುತ್ಸದ್ಧಿ ರಾಜಕಾರಣವೇ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಇದ್ದರೂ, ಹೆಚ್ಚು ಸೀಟು ಸಿಗಲಿಲ್ಲ ಯಾಕೆ ಎಂಬ ಪ್ರಶ್ನೆಗೆ, ಒಂದು ಸೀಟು ಇದ್ದ ಜಾಗದಲ್ಲಿ ಒಂಬತ್ತು ಸೀಟು ಗೆದ್ದಿದ್ದೇವೆ. ಇದು ಕನಿಷ್ಠ ಸಾಧನೆಯಲ್ಲ ಎಂದರು. ಮಾಜಿ ಸಚಿವ ರಮಾನಾಥ ರೈ, ಎಂಎಲ್ಸಿ ಐವಾನ್ ಡಿಸೋಜ, ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿ ಪದ್ಮರಾಜ್, ಎಂ.ಎಸ್ ಮಹಮ್ಮದ್ ಮತ್ತಿತರರಿದ್ದರು.
It was expected that the people would defeat the BJP in the Lok Sabha elections this time. It was expected that the India alliance would come to power. They have given results that people did not expect. But the defeat of the Congress is a defeat for democracy and a defeat for the Constitution. Congress fact-finding committee chairman V S Ugrappa said he was collecting ground-level opinion to review the party's defeat.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm