ಬ್ರೇಕಿಂಗ್ ನ್ಯೂಸ್
28-07-24 11:09 pm Mangalore Correspondent ಕರಾವಳಿ
ಮಂಗಳೂರು, ಜುಲೈ.28: ಸಕಲೇಶಪುರ – ಸುಬ್ರಹ್ಮಣ್ಯ ಮಧ್ಯೆ ರೈಲು ಹಳಿಯ ಮೇಲೆ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದಿರುವುದರಿಂದ ಪಶ್ಚಿಮ ಘಟ್ಟದ ಬೆಟ್ಟಗಳ ಮಧ್ಯೆ ನಿರಂತರ ಕಾರ್ಯಾಚರಣೆ ನಡೆದಿದೆ. ಸ್ಥಳದಲ್ಲಿ 200ಕ್ಕೂ ಹೆಚ್ಚು ಸಿಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಆದಷ್ಟು ಶೀಘ್ರ ರೈಲು ಸೇವೆಯನ್ನು ಯಥಾಸ್ಥಿತಿಗೊಳಿಸಲು ಶ್ರಮ ಪಡುತ್ತಿದ್ದಾರೆ ಎಂದು ದಕ್ಷಿಣ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು- ಬೆಂಗಳೂರು ಸಂಪರ್ಕದ ಪ್ರಮುಖ ಮಾರ್ಗವಾಗಿರುವುದರಿಂದ ರೈಲು ಸೇವೆಯನ್ನು ಸರಿಪಡಿಸುವುದಕ್ಕಾಗಿ ಸ್ಥಳದಲ್ಲಿ ಒಟ್ಟು 430 ಸಿಬಂದಿಯನ್ನು ನಿಯೋಜನೆ ಮಾಡಲಾಗಿದೆ. ಹಗಲಿನ ವೇಳೆಯಲ್ಲಿ 200 ಸಿಬಂದಿ, ರಾತ್ರಿ ವೇಳೆ 120 ಸಿಬಂದಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ, 110 ಸಿಬಂದಿ ಹೆಚ್ಚುವರಿ ಅಗತ್ಯಕ್ಕಾಗಿ ಕರೆಸಿಕೊಳ್ಳಲಾಗಿದೆ. ಸಿಬಂದಿಗೆ ಕೋಟ್, ಶೂಸ್, ಪೋರ್ಟೆಬಲ್ ಟಾಯ್ಲೆಟ್ ಎಲ್ಲವನ್ನೂ ಮಾಡಲಾಗಿದೆ. ನಾಲ್ಕು ಮಂದಿ ಅಡುಗೆಯವರು ಸ್ಥಳದಲ್ಲೇ ಊಟ, ತಿಂಡಿಯನ್ನು ರೆಡಿ ಮಾಡುತ್ತಿದ್ದಾರೆ. ಇದಕ್ಕಾಗಿ ಕಚ್ಚಾ ಸಾಮಗ್ರಿಗಳನ್ನು ಸುಬ್ರಹ್ಮಣ್ಯದಿಂದ ತರಿಸಲಾಗಿದೆ.






ಇದಲ್ಲದೆ, ವೈದ್ಯರು, ನರ್ಸ್ ಗಳು ಕೂಡ ಸ್ಥಳದಲ್ಲಿದ್ದು, ಕಾರ್ಯಾಚರಣೆ ಸಂದರ್ಭದಲ್ಲಿ ತುರ್ತು ಅಗತ್ಯಕ್ಕೆ ಕರೆಸಲಾಗಿದೆ. ಸಕಲೇಶಪುರದಿಂದ ಬಂದಿರುವ ಎಂಟು ಮಂದಿ ಸದಸ್ಯರ ಮೆಡಿಕಲ್ ಟೀಮ್ ಇದ್ದು, ಎರಡು ಶಿಫ್ಟ್ ನಲ್ಲಿ ರಾತ್ರಿ- ಹಗಲು ಕೆಲಸ ಮಾಡುತ್ತಿದೆ. ಕಾರ್ಯಾಚರಣೆಗೆ ನೆರವಾಗಲು ಎಂಟು ಪೋರ್ಟೆಬಲ್ ಜನರೇಟರ್, 60 ಫ್ಲಡ್ ಲೈಟ್ಸ್, ಎಂಟು ಟಾರ್ಚ್, 1140 ಲೀಟರ್ ಪೆಟ್ರೋಲ್, ಗ್ಯಾಸ್ ಕಟ್ಟರ್ ತರಿಸಲಾಗಿದೆ. ಆಪರು ಹಿಟಾಚಿ, ಐದು ಪ್ರೊಕ್ಲೈನ್ ಮೆಷಿನ್ ತರಿಸಲಾಗಿದೆ. 20 ವ್ಯಾಗನ್ ಗಳಲ್ಲಿ ಶೋರನೂರಿನಿಂದ ಜಲ್ಲಿಕಲ್ಲುಗಳನ್ನು ತರಿಸಲಾಗಿದೆ. 40 ಕೇಜಿಯ ಒಂದು ಲಕ್ಷ ಮರಳು ಚೀಲಗಳನ್ನು ತರಿಸಿಕೊಂಡಿದ್ದು, ಕಾರ್ಯಾಚರಣೆಗೆ ಬಳಸಲಾಗುತ್ತಿದೆ.
ರೈಲ್ವೇ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು, ತಜ್ಞರು ಸ್ಥಳಕ್ಕೆ ಬಂದು ಕಾರ್ಯಾಚರಣೆಗೆ ನೇತೃತ್ವ ನೀಡಿದ್ದಾರೆ. ಮೈಸೂರು ಡಿವಿಶನ್ ಡಿಆರ್ ಎಂ ಶಿಲ್ಪಿ ಅಗರ್ವಾಲ್, ದಕ್ಷಿಣ ರೈಲ್ವೇ ಜಿಎಂ ಅರವಿಂದ ಶ್ರೀವಾಸ್ತವ ಮತ್ತಿತರ ಅಧಿಕಾರಿಗಳು ಬಂದು ಠಿಕಾಣಿ ಹೂಡಿದ್ದಾರೆ. ಸದ್ಯಕ್ಕೆ ಹಳಿಯ ಸಮಸ್ಯೆ ಸರಿ ಆಗೋವರೆಗೂ ಈ ಭಾಗದಲ್ಲಿ ರೈಲು ಸೇವೆ ಪುನರ್ ಸ್ಥಾಪನೆ ಸಾಧ್ಯವಿಲ್ಲ ಎಂದು ರೈಲ್ವೇ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
The South Western Railway (SWR) had initially canceled all train services on the Bengaluru-Mangaluru sector until Monday. However, the cancellation has now been extended indefinitely due to extensive earth embankment work required to restore tracks affected by landslips in the Sakleshpur-Subrahmanya Road Ghat section.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm