ಬ್ರೇಕಿಂಗ್ ನ್ಯೂಸ್
27-07-24 10:05 pm Mangalore Correspondent ಕರಾವಳಿ
ಉಳ್ಳಾಲ, ಜು.27: ನರಿಂಗಾನ ಗ್ರಾಮದ ತೌಡುಗೋಳಿ ಮುಖ್ಯ ಜಂಕ್ಷನ್ ಬಳಿಯ ಮೊಬೈಲ್ ಟವರ್ ಬಳಿಯಲ್ಲಿ ಐದು ಕಾಗೆ, ಎರಡು ಗಿಡುಗ ಹಾಗೂ ಒಂದು ಕುಪುಲು ಪಕ್ಷಿ ಸಾವಿಗೀಡಾಗಿದ್ದು ಗ್ರಾಮಸ್ಥರಲ್ಲಿ ಸಂಶಯದ ಜೊತೆಗೆ ಆತಂಕ ಮನೆಮಾಡಿದೆ.
ಪಕ್ಷಿಗಳು ಸಾವಿಗೀಡಾಗಿರುವ ಸ್ಥಳದಲ್ಲಿ ಇತ್ತೀಚೆಗಷ್ಟೇ ಮೊಬೈಲ್ ಟವರ್ ನಿರ್ಮಿಸಲಾಗಿದೆ. ಗ್ರಾಮದ ಕೆಲವು ಮಂದಿಯ ವಿರೋಧವಿದ್ದರೂ ಅಧಿಕಾರಿಗಳು ಪ್ರಾಣಿ ಸಂಕುಲ, ತೆಂಗಿನ ಮರಗಳಿಗೆ ಟವರ್ ನಿಂದ ಯಾವುದೇ ರೀತಿಯ ಸಮಸ್ಯೆ ಬಾರದೆಂದು ತಿಳಿಸಿದ್ದರಿಂದ ಟವರ್ ನಿರ್ಮಾಣಕ್ಕೆ ನರಿಂಗಾನ ಪಂಚಾಯತ್ ಅನುಮತಿ ನೀಡಿತ್ತು. ಇದೀಗ ಟವರ್ ಕೆಳ ಭಾಗದಲ್ಲೇ ವನ್ಯ ಪಕ್ಷಿಗಳು ನಿಗೂಢವಾಗಿ ಸತ್ತು ಬಿದ್ದಿವೆ.


ತೌಡುಗೋಳಿಯಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು ಇತ್ತೀಚೆಗೆ ಬಾಲಕನೊಬ್ಬನ ಮೇಲೆ ನಾಯಿಗಳು ದಾಳಿ ಮಾಡಲು ಮುಂದಾದಾಗ ಆಟೋ ಚಾಲಕರು ನಾಯಿಗಳನ್ನ ಓಡಿಸಿ ಬಾಲಕನನ್ನ ರಕ್ಷಿಸಿದ್ದರು. ಬೀದಿ ನಾಯಿಗಳನ್ನ ಕೊಲ್ಲಲು ಯಾರಾದರೂ ತಿನಿಸಲ್ಲಿ ವಿಷ ಪದಾರ್ಥ ಬೆರೆಸಿ ಇಟ್ಟಿದ್ದು ಅದನ್ನು ಹಕ್ಕಿಗಳು ಸೇವಿಸಿ ಸಾವಿಗೀಡಾಗಿರಬಹುದೇ ಎಂಬ ಸಂಶಯವೂ ಇದೆ. ಟವರ್ ಬಳಿಯ ವಿದ್ಯುತ್ ಟ್ರಾನ್ಸ್ ಫಾರ್ಮರ್ ಮೆಟ್ಟಿಲಲ್ಲೂ ಕಾಗೆಯೊಂದು ಸತ್ತು ಬಿದ್ದಿದೆ. ಟವರ್ ನಿಂದ ಇಪ್ಪತ್ತು ಮೀಟರ್ ದೂರದಲ್ಲಿಯೂ ಹಕ್ಕಿಗಳ ಕಳೇಬರವಿದೆ.
ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಮ ಪಂಚಾಯತ್ ಪಿಡಿಓ, ಸ್ಥಳೀಯ ಮುಖಂಡರು ಭೇಟಿ ನೀಡಿ ಪಂಚಾಯತ್ ಅಧ್ಯಕ್ಷರಿಗೆ ಈ ಬಗ್ಗೆ ಮೌಖಿಕ ದೂರು ನೀಡಿದ್ದಾರೆ.
ಹಕ್ಕಿಗಳು ಹೇಗೆ ಸಾವನ್ನಪ್ಪಿವೆ ಎಂಬುದನ್ನು ಖಚಿತಪಡಿಸಲು ಅದರ ಕಳೇಬರಗಳನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ನವಾಝ್ ನರಿಂಗಾನ ತಿಳಿಸಿದ್ದಾರೆ.
Mangalore Naringana birds found dead near new mobile tower, residents in fear.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm