ಬ್ರೇಕಿಂಗ್ ನ್ಯೂಸ್
26-07-24 09:06 pm Mangalore Correspondent ಕರಾವಳಿ
ಉಳ್ಳಾಲ, ಜು.26: ಉಳ್ಳಾಲ ತಾಲೂಕಿನ ಸೋಮೇಶ್ವರ ನ್ಯೂಉಚ್ಚಿಲದಲ್ಲಿ ಕಡಲು ಶುಕ್ರವಾರ ಮತ್ತಷ್ಟು ಪ್ರಕ್ಷುಬ್ದಗೊಂಡಿದೆ. ಕಡಲ್ಕೊರೆತ ತಡೆಯಲು ತಾತ್ಕಾಲಿಕ ರಕ್ಷಣಾ ಕಾಮಗಾರಿಯನ್ನು ಇನ್ನೂ ಆರಂಭಿಸಿಲ್ಲ. ಜಿಲ್ಲಾಧಿಕಾರಿ ಮತ್ತು ಬಂದರು ಅಧಿಕಾರಿಗಳಿಗೆ ಕರೆ ಮಾಡಿದರೂ ಸಮರ್ಪಕ ಸ್ಪಂದನೆ ಸಿಕ್ಕಿಲ್ಲವೆಂದು ಸೋಮೇಶ್ವರ ಪುರಸಭಾ ಸದಸ್ಯ ರವಿಶಂಕರ್ ಸೋಮೇಶ್ವರ ದೂರಿದ್ದಾರೆ.
ಸೋಮೇಶ್ವರ ನ್ಯೂಉಚ್ಚಿಲದ ವಾಸ್ಕೊ ರೆಸಾರ್ಟ್ ಎದುರಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಭಾರೀ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ತೀರದಲ್ಲಿರುವ ಯೋಗೀಶ್ ಎಂಬವರ ಮನೆ ಈಗಲೋ ಆಗಲೋ ಎಂದು ಸಮುದ್ರಕ್ಕೆ ಆಹುತಿಯಾಗುವ ಭೀತಿಯಲ್ಲಿದೆ. ಸೋಮೇಶ್ವರ - ಉಚ್ಚಿಲ ಸಂಪರ್ಕದ ಬೀಚ್ ರಸ್ತೆಯನ್ನೂ ಪ್ರಚಂಡ ಅಲೆಗಳು ನುಂಗಲು ಮುಂದಡಿ ಇಡುತ್ತಿವೆ. ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ ಅವರು ಶುಕ್ರವಾರದಂದೇ ಕಡಲ್ಕೊರೆತ ತಡೆಗೆ ತಾತ್ಕಾಲಿಕ ಕಾಮಗಾರಿಯನ್ನು ಬಂದರು ಇಲಾಖಾಧಿಕಾರಿಗಳು ಆರಂಭಿಸುವುದಾಗಿ ಹೇಳಿದ್ದರು.


ಶುಕ್ರವಾರ ಸಮುದ್ರ ಕೊರೆತ ತಡೆಗೆ ಕಲ್ಲುಗಳನ್ನ ಹಾಕುವ ತಾತ್ಕಾಲಿಕ ಕಾಮಗಾರಿ ಆರಂಭಿಸುವ ನಿರೀಕ್ಷೆ ಸ್ಥಳೀಯರಲ್ಲಿತ್ತು. ಆದರೆ ಸಂಜೆಯ ವರೆಗೂ ರಕ್ಷಣಾ ಕಾಮಗಾರಿಗಳನ್ನ ಆರಂಭಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗೆಯೆ ಅಧಿಕಾರಿಗಳು ಅಸಡ್ಡೆ ವಹಿಸಿದರೆ ಕೆಲವೇ ದಿನಗಳಲ್ಲಿ ಉಚ್ಚಿಲ- ಸೋಮೇಶ್ವರ ಸಂಪರ್ಕ ರಸ್ತೆಯೂ ಸಮದ್ರ ಪಾಲಾಗುವುದು ನಿಶ್ಚಿತವಾಗಿದೆ.
ಗುರುವಾರ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರಿಗೆ ಕರೆ ಮಾಡಿದ್ದೆ. ಅವರ ಆಪ್ತ ಸಹಾಯಕರು ಕರೆ ಸ್ವೀಕರಿಸಿ ಮಾತನಾಡಿದ್ದು ಕಡಲ್ಕೊರೆತದ ತೀವ್ರತೆಯ ಬಗ್ಗೆ ಹೇಳಿದ್ದೆ. ಶುಕ್ರವಾರ ಮತ್ತೆ ಜಿಲ್ಲಾಧಿಕಾರಿಗಳಿಗೆ ಫೋನ್ ಕರೆ ಮಾಡಿದ್ದು ಕರೆಯನ್ನು ಯಾರೂ ಸ್ವೀಕರಿಸಿಲ್ಲ. ಒಂದೆರಡು ಬಂದರು ಅಧಿಕಾರಿಗಳಿಗೂ ಫೋನ್ ಕರೆ ಮಾಡಿದ್ದು ಅವರಿಂದಲೂ ಸಮಸ್ಯೆಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನ ರಕ್ಷಿಸುವುದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಈ ರೀತಿ ಅಧಿಕಾರಿಗಳು ಅಸಡ್ಡೆ ತೋರಿಸಿದರೆ ಶೀಘ್ರವೇ ಮನೆ ಮತ್ತು ರಸ್ತೆ ಸಮುದ್ರ ಪಾಲಾಗಲಿದೆ ಎಂದು ಸೋಮೇಶ್ವರ ಪುರಸಭೆ ಸದಸ್ಯರಾದ ರವಿಶಂಕರ್ ಸೋಮೇಶ್ವರ ಹೇಳಿದ್ದಾರೆ.
Mangalore Someswara beach rough sea at Uchila, residents in great danger and fear. Local authorities, adminstration and port authorise show no concern even after residents calling them for help.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm