ಬ್ರೇಕಿಂಗ್ ನ್ಯೂಸ್
08-12-20 10:51 am Mangalore Correspondent ಕರಾವಳಿ
ಮಂಗಳೂರು, ಡಿ.7: ವಿದೇಶಕ್ಕೆ ಹೋದವರು ಸಂಕಷ್ಟದಲ್ಲಿ ಬಿದ್ದರೆ ಅಥವಾ ವಿದೇಶದಲ್ಲಿ ಯಾರಾದರೂ ಮೃತಪಟ್ಟರೆ ಇಂಥ ಸಂದಿಗ್ಧ ಸನ್ನಿವೇಶದಲ್ಲಿ ನೆರವಾಗುವ ಸಂಸ್ಥೆಯೇ ಎನ್ಆರ್ ಐ ಫೋರಂ. ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಗೂ, ಕರ್ನಾಟಕ ಸರಕಾರಕ್ಕೂ ಕೊಂಡಿಯಾಗಿರುವ ಸಂಸ್ಥೆ. ಆದರೆ, ಇಂಥದ್ದೊಂದು ಸಂಸ್ಥೆ ಇದ್ದರೂ, ಅದಕ್ಕೊಬ್ಬ ಸರಕಾರದ ಪ್ರತಿನಿಧಿಯನ್ನು ನೇಮಕ ಮಾಡದೆ ಎರಡು ವರ್ಷಗಳಿಂದ ಎನ್ ಆರ್ ಐ ಕನ್ನಡಿಗರನ್ನು ಕರ್ನಾಟಕ ಸರಕಾರ ಸತಾಯಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಕಳೆದ ಬಾರಿ ಕೊರೊನಾ ಲಾಕ್ಡೌನ್ ಆಗಿದ್ದ ಸಂದರ್ಭದಲ್ಲಿ ಸಾವಿರಾರು ಮಂದಿ ಹೊರ ದೇಶಗಳಲ್ಲಿ ಸಿಕ್ಕಿಬಿದ್ದಿದ್ದರು. ಸಣ್ಣ ಪುಟ್ಟ ಕೆಲಸಗಳಿಗಾಗಿ ಕೊಲ್ಲಿ ರಾಷ್ಟ್ರಗಳಿಗೆ ತೆರಳಿದ್ದವರು ಲಾಕ್ಡೌನ್ ಆಗಿದ್ದಾಗ ಊಟಕ್ಕಿಲ್ಲದೆ ಪರದಾಡುವ ಸ್ಥಿತಿ ಉಂಟಾಗಿತ್ತು. ತಾಯ್ನಾಡಿಗೆ ತಿರುಗಿ ಬರಬೇಕು ಎಂದಿದ್ದರೂ, ಭಾರತಕ್ಕೆ ಕರೆತರಲು ಯಾವುದೇ ವ್ಯವಸ್ಥೆ ಇರಲಿಲ್ಲ. ಕೆಲವು ವ್ಯವಸ್ಥೆ ಇದ್ದರೂ, ಕರ್ನಾಟಕ ಸರಕಾರದಿಂದ ಅದನ್ನು ಮಾಡಲು ಪ್ರತಿನಿಧಿಯೇ ಇರಲಿಲ್ಲ. ಅತ್ತ ಕೇರಳ, ತಮಿಳುನಾಡು ಸರಕಾರಗಳು ಎನ್ಆರ್ ಐ ಫೋರಂ ಮೂಲಕ ತುರ್ತು ಸ್ಪಂದನೆಯನ್ನು ಮಾಡಿದ್ದವು.
ಕರ್ನಾಟಕ ಸರಕಾರದಿಂದ ಇಂಥ ಸಹಕಾರ ಸಿಗದೆ ಅಲ್ಲಿನ ಕನ್ನಡಿಗರೇ ಸೇರಿಕೊಂಡು ಸ್ವಯಂಸ್ಫೂರ್ತಿಯಿಂದ ನೂರಾರು ಮಂದಿಗೆ ಅನ್ನ ಕೊಡುವ ಕೆಲಸ ಮಾಡಿದ್ದಾರೆ. ಸಿಕ್ಕಿಬಿದ್ದವರಿಗೆ ತಾತ್ಕಾಲಿಕ ಆಶ್ರಯ ಕೊಡುವ ವ್ಯವಸ್ಥೆಯನ್ನೂ ಮಾಡಿದ್ದಾರೆ. ಅನಿವಾಸಿ ಭಾರತೀಯರ ಘಟಕಕ್ಕೆ ಈ ಸಂದರ್ಭದಲ್ಲಿ ತುರ್ತಾಗಿ ಪ್ರತಿನಿಧಿ ಒಬ್ಬರನ್ನು ನೇಮಕ ಮಾಡುವಂತೆ ಸರಕಾರಕ್ಕೆ ಕೇಳಿಕೊಂಡರೂ, ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ದುಬೈನ ಉದ್ಯಮಿ ಪ್ರವೀಣ್ ಶೆಟ್ಟಿ ಸೇರಿ ಮಂಗಳೂರು ಮೂಲದ ಉದ್ಯಮಿಗಳು ಸ್ವತಃ ಕಾರ್ಗೋ ವಿಮಾನಗಳನ್ನು ಬಾಡಿಗೆ ಪಡೆದು ಕಾರ್ಮಿಕರನ್ನು ಹುಟ್ಟೂರಿಗೆ ತಲುಪಿಸುವ ಕೆಲಸ ಮಾಡಿದ್ದರು.
ಈಗ ಲಾಕ್ಡೌನ್ ಮುಗಿದಿದ್ದರೂ, ಅಲ್ಲಿನ ಕನ್ನಡಿಗರ ಸಂಕಷ್ಟ ತಪ್ಪಿಲ್ಲ. ಶಿಕ್ಷಣ, ಉದ್ಯೋಗ, ತುರ್ತು ಅಗತ್ಯ ವಿಚಾರಗಳಿಗೆ ಸರಕಾರದ ಸ್ಪಂದನೆ ಬೇಕಿದ್ದರೆ ಯಾರನ್ನು ಕೇಳಿಕೊಳ್ಳಬೇಕು ಎನ್ನುತ್ತಾರೆ, ಎನ್ಆರ್ ಐ ಫೋರಂ ಘಟಕದ ಸದಸ್ಯ ಮೋಹನ್ ದಾಸ್ ಕಾಮತ್. ಸರಕಾರದಿಂದ ಯಾವುದೇ ಹಣದ ಅವಶ್ಯಕತೆ ನಮಗೆ ಅಗತ್ಯವಿಲ್ಲ. ತುರ್ತಾಗಿ ಸ್ಪಂದಿಸಲು ಒಬ್ಬ ಪ್ರತಿನಿಧಿಯನ್ನು ನೇಮಕ ಮಾಡಿ ಅನ್ನುವುದಷ್ಟೇ ನಮ್ಮ ಕೋರಿಕೆ ಎನ್ನುತ್ತಾರೆ.
ಯಾವುದೇ ಒಬ್ಬ ವ್ಯಕ್ತಿ ಮೃತಪಟ್ಟಲ್ಲಿ ಆತನನ್ನು ಊರಿಗೆ ಕಳುಹಿಸಲು ಕನಿಷ್ಠ 3 ಲಕ್ಷ ರೂ. ಬೇಕಾಗುತ್ತದೆ. ಆತನಲ್ಲಿ ಅಷ್ಟು ಸಾಮರ್ಥ್ಯ ಇಲ್ಲದಿದ್ದರೆ ಯಾರು ಸ್ಪಂದನೆ ಮಾಡಬೇಕು. ಸುಷ್ಮಾ ಸ್ವರಾಜ್ ವಿದೇಶಾಂಗ ಇಲಾಖೆಯಲ್ಲಿದ್ದ ವೇಳೆ ಅಂಥ ಸಂದರ್ಭ ಬಂದರೆ, ಅರ್ಧದಷ್ಟು ಹಣವನ್ನು ಸರಕಾರದಿಂದ ಭರಿಸುವ ವ್ಯವಸ್ಥೆ ಮಾಡಿದ್ದಾರೆ. ಆದರೆ, ಅಂಥ ಸಂದರ್ಭದಲ್ಲಿ ಕಾರ್ಗೋ ವಿಮಾನಗಳನ್ನು ನಿರ್ವಹಿಸಲು ಮತ್ತು ಭಾರತ ಹಾಗೂ ಅಲ್ಲಿನ ಸರಕಾರದ ಜೊತೆಗೆ ವ್ಯವಹರಿಸಲು ಪ್ರತಿನಿಧಿ ಬೇಕಾಗುತ್ತದೆ. ಅದಕ್ಕೆ ಅನಿವಾಸಿ ಭಾರತೀಯ ವ್ಯಕ್ತಿಗಳೇ ಈ ಘಟಕದಲ್ಲಿದ್ದರೆ ಉತ್ತಮ. ಅವರಿಗೆ ನಮ್ಮ ಸಮಸ್ಯೆಯ ಅರಿವು ಇರುತ್ತದೆ. ಯಾವುದೋ ಒಬ್ಬ ರಾಜಕಾರಣಿಯನ್ನು ನೇಮಿಸಿ, ಆ ಘಟಕಕ್ಕೆ ಇಂತಿಷ್ಟು ಅನುದಾನ ಕೊಟ್ಟರೆ ಆ ವ್ಯಕ್ತಿ ಪ್ರಚಾರಕ್ಕಷ್ಟೇ ವಿದೇಶ ಪ್ರಯಾಣ ಮಾಡಿಕೊಂಡಿರುತ್ತಾರೆ. ನಮ್ಮ ಸಮಸ್ಯೆಗೆ ಸ್ಪಂದಿಸುವುದಿಲ್ಲ ಎಂದು ಹೇಳುತ್ತಾರೆ, ಒಮಾನ್ ಬಂಟರ ಸಂಘದ ಸದಸ್ಯ ಶಶಿಧರ್ ಶೆಟ್ಟಿ.
2008ರಲ್ಲಿ ಯಡಿಯೂರಪ್ಪ ಸರಕಾರ ಇದ್ದಾಗ ಮೊದಲ ಬಾರಿಗೆ ಅನಿವಾಸಿ ಭಾರತೀಯರ ಕರ್ನಾಟಕ ಘಟಕ ರಚನೆಯಾಗಿತ್ತು. ಅದಕ್ಕೆ ಮುಖ್ಯಮಂತ್ರಿಯೇ ಅಧ್ಯಕ್ಷರು. ಉಪಾಧ್ಯಕ್ಷರಾಗಿ ಒಬ್ಬ ಪ್ರತಿನಿಧಿಯನ್ನು ನೇಮಕ ಮಾಡಬೇಕು. ಕ್ಯಾಬಿನೆಟ್ ದರ್ಜೆಯ ಸ್ಥಾನ. ಮೊದಲ ಅವಧಿಗೆ ಗಣೇಶ್ ಕಾರ್ಣಿಕ್ ಆ ಹುದ್ದೆಗೆ ನೇಮಕವಾಗಿದ್ದರು. ಸಿದ್ದರಾಮಯ್ಯ ಸರಕಾರ ಇದ್ದಾಗ ಕೊನೆಯ ಎರಡು ವರ್ಷಗಳಲ್ಲಿ ಆರತಿ ಕೃಷ್ಣ ಅವರನ್ನು ನೇಮಕ ಮಾಡಲಾಗಿತ್ತು. ಅಮೆರಿಕದಲ್ಲಿ ಅನಿವಾಸಿಯಾಗಿರುವ ಆರತಿ ಕೃಷ್ಣ ಆನಂತರ ಬದಲಾಗಿದ್ದರು. ಆಬಳಿಕ ಕುಮಾರಸ್ವಾಮಿ ಸರಕಾರ ಇದ್ದಾಗ ಮತ್ತು ಈಗ ಯಡಿಯೂರಪ್ಪ ಸರಕಾರ ಬಂದು ಒಂದೂವರೆ ವರ್ಷ ಆಗ್ತಾ ಬಂತು. ಆ ಹುದ್ದೆಗೆ ಯಾರನ್ನೂ ನೇಮಕ ಮಾಡಿಲ್ಲ. ಇದರಿಂದಾಗಿ ಎನ್ಆರ್ ಐ ಫೋರಂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿ.
ಕಳೆದ ಎರಡು ವಾರಗಳಿಂದ ಸಿಎಂ ಯಡಿಯೂರಪ್ಪ ಬಹುತೇಕ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ. ಈ ಅನಿವಾಸಿ ಭಾರತೀಯ ಘಟಕಕ್ಕೆ ನೇಮಕ ಮಾಡಲು ಯಾರು ಕೂಡ ನೆನಪು ಮಾಡಿಲ್ಲವೋ ಏನೋ.. ದುಬೈ ಕನ್ನಡಿಗರು, ದುಬೈನಲ್ಲಿರುವ ಆಸಕ್ತರನ್ನೇ ಈ ಘಟಕಕ್ಕೆ ನೇಮಕ ಮಾಡುವಂತೆ ಕೇಳಿಕೊಂಡಿದ್ದಾರೆ. ಯಡಿಯೂರಪ್ಪ ಅವರ ಕಿವಿಗೆ ಬಿದ್ದರೆ ಇದನ್ನು ಪರಿಗಣಿಸದಿರುವ ವ್ಯಕ್ತಿಯಂತೂ ಅಲ್ಲ.
The state government has nominated presidents and members for various corporations, authorities and committees. However, it has still not given thought on establishing NRI Forum for the Kannadiagas of the state which is very much needed to help the people of the state living abroad.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm