ಬ್ರೇಕಿಂಗ್ ನ್ಯೂಸ್
25-07-24 09:53 pm Mangalore Correspondent ಕರಾವಳಿ
ಕಾರವಾರ, ಜುಲೈ.25: ಅಂಕೋಲಾ ಬಳಿಯ ಶಿರೂರಿನಲ್ಲಿ ಗುಡ್ಡ ಕುಸಿತದಿಂದ ಆಗಿರುವ ದುರಂತ ಸ್ಥಳದಲ್ಲಿ ಭಾರತೀಯ ನೌಕಾಪಡೆ ಮತ್ತು ಭೂಸೇನೆಯ ಯೋಧರು ಕಾರ್ಯಾಚರಣೆಗಿಳಿದಿದ್ದಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ನದಿ ದಡದಲ್ಲೇ ಕೇರಳದ ಅರ್ಜುನ್ ಚಲಾಯಿಸುತ್ತಿದ್ದ ಲಾರಿ ಇದೆಯೆಂದು ಅತ್ಯಾಧುನಿಕ ಡ್ರೋಣ್ ಕ್ಯಾಮರಾದಲ್ಲಿ ಪತ್ತೆಯಾದರೂ, 15 ಮೀಟರ್ ಆಳದಲ್ಲಿರುವುದರಿಂದ ನೀರಿನ ರಭಸದ ಹರಿವಿನಿಂದಾಗಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿಲ್ಲ.
ಇದೇ ವೇಳೆ, ದುರಂತ ನಡೆದ ಸ್ಥಳದಿಂದ ಎಂಟು ಕಿಮೀ ದೂರದಲ್ಲಿ ಮರದ ದಿಮ್ಮಿಗಳು ಪತ್ತೆಯಾಗಿವೆ. ಕೋಝಿಕ್ಕೋಡ್ ಮೂಲದ ಅರ್ಜುನ್ ಚಲಾಯಿಸುತ್ತಿದ್ದ ಲಾರಿಯಲ್ಲಿ ಮರದ ದಿಮ್ಮಿಗಳಿದ್ದವು. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಿಂದ ಕೇರಳಕ್ಕೆ ಮರದ ಕಟ್ಟಿಗೆ ಮಾದರಿಯ ದಿಮ್ಮಿಗಳನ್ನು ಹೊತ್ತು ಹೊರಟಿದ್ದ ಲಾರಿ ಶಿರೂರಿನಲ್ಲಿದ್ದಾಗಲೇ ಗುಡ್ಡ ಕುಸಿತಕ್ಕೆ ಸಿಲುಕಿತ್ತು ಎನ್ನಲಾಗಿದೆ. ಮರದ ದಿಮ್ಮಿಗಳಲ್ಲಿ ಪಿಎ -1 ಎಂದು ಬರೆದಿದ್ದು, ಲಾರಿಯಲ್ಲಿದ್ದ ದಿಮ್ಮಿಗಳೇ ಆಗಿರಬಹುದು ಎಂದು ಲಾರಿ ಮಾಲೀಕ ಮುನಾಫ್ ದೃಢಪಡಿಸಿದ್ದಾರೆ.
ನದಿ ದಡದಿಂದ 20 ಮೀಟರ್ ದೂರದಲ್ಲಿ ನದಿಯ ಮಧ್ಯೆ ಲಾರಿ ಇರುವ ಬಗ್ಗೆ ಜಾಗವನ್ನು ನೌಕಾಪಡೆಯ ತಾಂತ್ರಿಕ ಪರಿಣತರು ಬುಧವಾರ ದೃಢಪಡಿಸಿದ್ದರು. ಆದರೆ, ಆ ಜಾಗದಲ್ಲಿ ಭಾರೀ ಮಣ್ಣು ತುಂಬಿದ್ದಲ್ಲದೆ, ಅದರ ಮೇಲಿನಿಂದ ರಭಸದಲ್ಲಿ ನೀರಿನ ಹರಿವು ಇದೆ. ಹೀಗಾಗಿ ಸೇನೆಯ ನುರಿತ ಡೈವರ್ ಗಳು ಬಂದಿದ್ದರೂ, ಗಾಳಿ ಮತ್ತು ನೀರಿನ ಸೆಳೆತದಿಂದಾಗಿ ನೀರಿನಾಳಕ್ಕೆ ಇಳಿದು ಅದು ಲಾರಿಯದ್ದೇ ಅವಶೇಷ ಎನ್ನುವುದನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಮನೋರಮಾ ಸುದ್ದಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ನಿವೃತ್ತ ಮೇಜರ್ ಜನರಲ್ ಎಂ. ಇಂದ್ರಬಾಲ, ಮಳೆಗಾಲದ ಸಂದರ್ಭ ನದಿಯ ಆಳದಲ್ಲಿ ಅತಿ ಹೆಚ್ಚು ಸೆಳೆತವಿರುತ್ತದೆ. ಈ ವೇಳೆ, ನೀರಿನಾಳಕ್ಕೆ ಡೈವ್ ಮಾಡುವುದು ಜೀವಕ್ಕೆ ಅಪಾಯ. ಆಳಕ್ಕಿಳಿದು ಮೇಲೆ ಬರಬಹುದು ಎನ್ನುವ ಆತ್ಮವಿಶ್ವಾಸ ಒಳಕ್ಕಿಳಿಯುವ ಯೋಧನಲ್ಲಿ ಇರಬೇಕಾಗುತ್ತದೆ. ಲಾರಿ ಇರುವ ಜಾಗ ಮತ್ತು ಅದರ ವ್ಯಾಪ್ತಿಯನ್ನು ನಿರ್ದಿಷ್ಟಪಡಿಸಿದರೆ ಮಾತ್ರ ಅಲ್ಲಿಗೆ ಇಳಿಯಬಹುದು. ಇಲ್ಲದೇ ಇದ್ದರೆ, 15 ಮೀಟರ್ ನೀರಿನಾಳದಲ್ಲಿ ಇಳಿದು ಯೋಧ ಕಾರ್ಯಾಚರಣೆ ನಡೆಸುವುದಕ್ಕೆ ಕಷ್ಟ ಇದೆ ಎಂದಿದ್ದಾರೆ.
ಲಾರಿ ಕ್ಯಾಬಿನ್ ಪತ್ತೆಯೇ ಸವಾಲು
ಭಾರೀ ಮಳೆ ಮತ್ತು ನೀರಿನ ಸೆಳೆತ ಹೆಚ್ಚಿದ್ದರಿಂದ ಗುರುವಾರ ಬೆಳಗ್ಗೆ ಏಳು ಗಂಟೆಗೆ ಸೇನಾ ಯೋಧರು ಕಾರ್ಯಾಚರಣೆ ಶುರು ಮಾಡಿದ್ದರೂ ಹತ್ತು ಗಂಟೆ ವೇಳೆಗೆ ಸ್ಥಗಿತಗೊಳಿಸಿದ್ದರು. ಸ್ಕೂಬಾ ಡೈವಿಂಗ್ ತಂಡದ ಸದಸ್ಯರು ಕೂಡ ನೀರಿಗಿಳಿಯಲಾಗದೆ ಯಾಂತ್ರಿಕ ಬೋಟಿನಲ್ಲೇ ಹುಡುಕಾಟ ನಡೆಸಿದರು. ಆನಂತರ, ಡ್ರೋಣ್ ಮೂಲಕ ಭೂಮಿ ಮತ್ತು ನೀರಿನ ಆಳದಲ್ಲಿರುವ ಲೋಹದ ಚಿತ್ರವನ್ನು ಪತ್ತೆಹಚ್ಚುವ ಕಾರ್ಯಾಚರಣೆ ಮುಂದುವರಿದಿತ್ತು. ನಿವೃತ್ತ ನೌಕಾಪಡೆಯ ಯೋಧ ಮೇಜರ್ ಇಂದ್ರಪಾಲ್ ನಂಬ್ಯಾರ್ ನೇತೃತ್ವದಲ್ಲಿ ಡ್ರೋಣ್ ಕಾರ್ಯಾಚರಣೆಗಾಗಿ ಆರು ಮಂದಿಯ ತಂಡ ರಚಿಸಲಾಗಿದೆ. ನೀರಿನ ಸೆಳೆತ 6ರಿಂದ 7 ನಾಟ್ ಗಳಷ್ಟಿದ್ದು, ಇಂತಹ ಸಂದರ್ಭದಲ್ಲಿ ಸ್ಕೂಬಾ ಡೈವರ್ ಗಳು ಅಷ್ಟು ಆಳಕ್ಕಿಳಿಯಲು ಸಾಧ್ಯವಿಲ್ಲ. ಕೆಸರು ಮಣ್ಣಿನಲ್ಲಿ ಹುದುಗಿರುವುದರಿಂದ ಆಳಕ್ಕಿಳಿಯುವುದು ಸವಾಲು ಎಂದು ನೇವಿ ಕಮಾಂಡರ್ ಅತುಲ್ ಪಿಳ್ಳೆ ಹೇಳಿದ್ದಾರೆ.
ಅಂಕೋಲಾದಲ್ಲಿ ಅತಿ ಹೆಚ್ಚು ಮಳೆ ದಾಖಲೆ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಗುರುವಾರ ಭಾರೀ ಮಳೆಯಾಗಿದ್ದು, ಎಂದಿಗಿಂತ 92 ಶೇಕಡಾ ಹೆಚ್ಚು ಮಳೆಯಾಗಿದ್ಯಂತೆ. ಜಿಲ್ಲಾಡಳಿತ ಮಾಹಿತಿ ಪ್ರಕಾರ, ಜೂನ್ 1ರಿಂದ ಜುಲೈ 24ರ ನಡುವೆ 44 ಶೇಕಡಾ ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆ ಮಳೆ 1525 ಮಿಮೀ ಆಗಿದ್ದರೆ, ಜಿಲ್ಲೆಯಲ್ಲಿ ಈ ಬಾರಿ 2198 ಮಿಮೀ ಮಳೆಯಾಗಿದೆ. ಬುಧವಾರ ಉತ್ತರ ಕನ್ನಡ ಜಿಲ್ಲೆಯಲ್ಲಿ 60.8 ಮಿಮೀ ಮಳೆಯಾಗಿದ್ದರೆ, ಅಂಕೋಲಾ ಭಾಗದಲ್ಲೇ 5 ಸೆ.ಮೀ. ಮಳೆಯಾಗಿದೆ. ಇದೇ ವೇಳೆ, ತಮಿಳುನಾಡಿನ ಕುಟುಂಬವೊಂದು ಬಂದು ಟ್ಯಾಂಕರ್ ಚಾಲಕ ಷನ್ಮುಗಂ ಎಂಬವರು ನಾಪತ್ತೆಯಾಗಿರುವ ಬಗ್ಗೆ ಅಂಕೋಲಾದಲ್ಲಿ ಪೊಲೀಸ್ ದೂರು ನೀಡಿದ್ದಾರೆ. ಷಣ್ಮುಗಂ ಚಲಾಯಿಸುತ್ತಿದ್ದ ಟ್ಯಾಂಕರ್ ಪತ್ತೆಯಾಗಿದ್ದು, ಆತನ ಮೃತದೇಹ ಪತ್ತೆಯಾಗಿಲ್ಲ.
ದುರಂತ ನಡೆದು ಹತ್ತು ದಿನ ಕಳೆದರೂ ನದಿಯಲ್ಲಿ ತುಂಬಿರುವ ಮಣ್ಣನ್ನು ತೆರವು ಮಾಡುವುದಕ್ಕಾಗಿಯೇ ಗೋವಾದಿಂದ ವಿಶೇಷ ತಂಡವೊಂದು ಶಿರೂರಿಗೆ ಆಗಮಿಸಿದೆ. ಈಗಾಗಲೇ ಎರಡು ಬೂಮ್ ಯಂತ್ರ ಸ್ಥಳಕ್ಕೆ ಬಂದಿದ್ದು, ಕಾರ್ಯಾಚರಣೆ ನಡೆಸುತ್ತಿದೆ. ಸ್ಥಳದಲ್ಲಿ ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್, ಅಗ್ನಿಶಾಮಕ ದಳ, ನೌಕಾಪಡೆ, ಭೂಸೇನೆಯ ತಂಡ, ಮರಾಠಾ ಲೈಟ್ ಇನ್ ಫೇಂಟ್ರಿ ರೆಜಿಮೆಂಟಿನ 55 ಮಂದಿಯ ತಂಡ ಸೇರಿ 150ಕ್ಕೂ ಹೆಚ್ಚು ಸಿಬಂದಿ ಸ್ಥಳದಲ್ಲಿದ್ದಾರೆ. ಅಲ್ಲದೆ, ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಕೋಜಿಕ್ಕೋಡ್ ಸಂಸದ, ಉತ್ತರ ಕನ್ನಡ ಜಿಲ್ಲೆಯ ಎಸ್ಪಿ ಸೇರಿದಂತೆ ಪ್ರಮುಖ ಅಧಿಕಾರಿಗಳು ಸ್ಥಳದಲ್ಲಿದ್ದು, ಕಾರ್ಯಾಚರಣೆಗೆ ನೇತೃತ್ವ ನೀಡಿದ್ದಾರೆ.
The advanced Iboard drone, which was used in the search operation for Kozhikode native Arjun, located his truck in Gangavali river on Thursday. The drone was however, unable to locate the cabin. The Indian Navy suspended the search operations for the day as its scuba diving team was unable to reach the riverbed due to the strong current.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
02-04-25 07:35 pm
HK News Desk
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
02-04-25 11:02 pm
Mangalore Correspondent
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
02-04-25 05:49 pm
Mangalore Correspondent
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm