ಬ್ರೇಕಿಂಗ್ ನ್ಯೂಸ್
24-07-24 09:01 pm HK News Desk ಕರಾವಳಿ
ಮಂಗಳೂರು, ಜುಲೈ.24: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಣ್ಣು ಕುಕ್ಕುವ ರೀತಿಯ ದೀಪಗಳನ್ನು ಅಳವಡಿಸಿದ ವಾಹನಗಳ ವಿರುದ್ಧ ಪೊಲೀಸರು ಜೂನ್ 15 ರಿಂದ ದಂಡ ವಿಧಿಸುವ ಕಾರ್ಯಾಚರಣೆ ನಡೆಸುತ್ತಿದ್ದು ಈವರೆಗೆ 1170 ಪ್ರಕರಣಗಳನ್ನು ದಾಖಲಿಸಿ 5,86,500 ರೂ. ದಂಡ ವಿಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರಿಗೆ ವಿಶೇಷ ಸೂಚನೆ
ಸಾರ್ವಜನಿಕರು ತಮ್ಮ ಮೋಟಾರು ವಾಹನಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆ-1989 ರಲ್ಲಿ ಸೂಚಿಸಿರುವಂತೆ ವಿವಿಧ ಮಾದರಿಯ ವಾಹನಗಳಿಗೆ ಸದರಿ ವಾಹನ ಕಂಪೆನಿಯವರು ನಿಗದಿ ಪಡಿಸಿದ ಹೆಡ್ ಲೈಟ್ ಗಳನ್ನು ಮಾತ್ರ ಅಳವಡಿಸಬೇಕಾಗಿರುತ್ತದೆ.
ಹೆಚ್ಚುವರಿಯಾಗಿ ಅಲಂಕಾರಿಕ ದೀಪಗಳನ್ನು ಹಾಗೂ ಪ್ರಖರ ಬೆಳಕು ಸೂಸುವ ಮತ್ತು ಕಣ್ಣಿಗೆ ಕುಕ್ಕುವ ಎಲ್.ಇ.ಡಿ ಬಲ್ಬ್ ಗಳನ್ನು ಅಳವಡಿಸುವಂತಿಲ್ಲ.
ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿ ಬೀದಿದೀಪಗಳು ಇರುವೆಡೆ ಯಾವುದೇ ಕಾರಣಕ್ಕೂ ಹೈಬೀಮ್ ಬೆಳಕಿನೊಂದಿಗೆ ವಾಹನಗಳನ್ನು ಚಲಾಯಿಸುವಂತಿಲ್ಲ.
ಮೋಟಾರು ಸೈಕಲ್ ಹಾಗೂ ಆಟೋರಿಕ್ಷಾಗಳು 1 ಅಥವಾ 2 ಹೆಡ್ ಲೈಟ್ ಗಳನ್ನು ಮಾತ್ರ ಹೊಂದುವುದು. ನಾಲ್ಕು ಚಕ್ರ ಮತ್ತು ಹೆಚ್ಚಿನ ಚಕ್ರದ ವಾಹನಗಳು 2 ಅಥವಾ 4 ಹೆಡ್ ಲೈಟ್ ಗಳನ್ನು ಮಾತ್ರ ಹೊಂದುವುದು.
ವಾಹನಗಳ ಹೆಡ್ ಲೈಟ್ ಗಳಿಂದ ಹೊರಹೊಮ್ಮವ ಬೆಳಕು ಶಾಶ್ವತವಾಗಿ ಕೆಳ ಮುಖವಾಗಿ ಸದರಿ ಹೆಡ್ ಲೈಟ್ ನಿಂದ 8 ಮೀಟರ್ ದೂರದಲ್ಲಿನ ವಾಹನದಲ್ಲಿ ಕುಳಿತಿರುವ ವ್ಯಕ್ತಿಯ ಕಣ್ಣಿಗೆ ಪ್ರಖರವಾಗಿರತಕ್ಕದ್ದಲ್ಲ. ಹಾಗೆಯೇ ಸದರಿ ವಾಹನದ ಬಲಭಾಗದಲ್ಲಿ ಅಳವಡಿಸಿರುವ ಹೆಡ್ ಲೈಟ್ ನಿಂದ ಬಲಕ್ಕೆ 0.5 ಮೀ ದೂರದಲ್ಲಿ ಕುಳಿತಿರುವ ಎದುರಿನ ವಾಹನದಲ್ಲಿನ ವ್ಯಕ್ತಿಯ ಕಣ್ಣಿಗೆ ಪ್ರಖರವಾಗಿರತಕ್ಕದ್ದಲ್ಲ ಎಂದು ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ.
High beam light, Mangalore police collect fine of rs 5.87 lakhs. Police have fined almost 1170 vehicles so far.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm