ಬ್ರೇಕಿಂಗ್ ನ್ಯೂಸ್
21-07-24 10:10 pm Mangalore Correspondent ಕರಾವಳಿ
ಮಂಗಳೂರು, ಜುಲೈ 21: ಮಂಗಳೂರು- ಸೋಲಾಪುರ ಸಂಪರ್ಕಿಸುವ ಹೆದ್ದಾರಿಯಲ್ಲಿ ಮಂಗಳೂರು ಹೊರವಲಯದ ವಾಮಂಜೂರು ಬಳಿಯ ಕೆತ್ತಿಕಲ್ ಗುಡ್ಡ ಮತ್ತೆ ಅಪಾಯಕ್ಕೀಡಾಗಿದೆ. 20 ವರ್ಷಗಳ ಹಿಂದೆ ಇದೇ ಗುಡ್ಡದ ರಸ್ತೆ ಕುಸಿದು ಹಲವು ಸಮಯದ ಕಾಲ ಮಂಗಳೂರು –ಮೂಡುಬಿದ್ರೆ ನಡುವೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಮಂಗಳೂರಿನಿಂದ ಕಾರ್ಕಳದ ಸಾಣೂರು ವರೆಗೆ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಕೆತ್ತಿಕಲ್ ಗುಡ್ಡವನ್ನು ಅಗೆದಿರುವುದೇ ಕುಸಿತದ ಭೀತಿಗೆ ಕಾರಣ.
ಮಂಗಳೂರು- ಮೂಡುಬಿದ್ರೆ ನಡುವೆ ಹೆದ್ದಾರಿ ಕಾಮಗಾರಿ ಆಗುತ್ತಿದ್ದರೂ, ಗುರುಪುರದಲ್ಲಿ ದೊಡ್ಡ ಮಟ್ಟದಲ್ಲಿ ಎಡವಟ್ಟು ನಡೆದಿದೆ. ಫಲ್ಗುಣಿ ನದಿಗೆ ಒಂದು ಸೇತುವೆ ಇರುವಾಗಲೇ ನೂರು ಮೀಟರ್ ಅಂತರದಲ್ಲಿ ಮತ್ತೊಂದು ಸೇತುವೆ ಕಟ್ಟಲಾಗುತ್ತಿದ್ದು, ಆ ಜಾಗ ತಗ್ಗಿನ ಪ್ರದೇಶದಲ್ಲಿದೆ. ನೀರು ನಿಲ್ಲುತ್ತಿದ್ದ ಹಿಂದೆ ಗದ್ದೆ ಇದ್ದ ಜಾಗದಲ್ಲೇ ಈಗ ರಸ್ತೆಯನ್ನು ಮಾಡಲಾಗಿದ್ದು, ಅಲ್ಲಿಗೆ ಮಣ್ಣು ತುಂಬಿಸುವುದಕ್ಕಾಗಿ ಕೆತ್ತಿಕಲ್ ಗುಡ್ಡವನ್ನು ಅಗೆಯಲಾಗಿದೆ. ಗುಡ್ಡದ ಬದಿಯಿಂದಲೇ ಹೆದ್ದಾರಿ ಅಗಲೀಕರಣ ಮಾಡಲಾಗಿದ್ದು, ಮತ್ತೊಂದೆಡೆ ನೂರು ಮೀಟರ್ ದೂರದ ಸೇತುವೆ ಆಸುಪಾಸಿನಲ್ಲಿ ಮಣ್ಣು ತುಂಬಿಸಲಾಗುತ್ತಿದೆ.
ಇದರಿಂದಾಗಿ ಗುಡ್ಡ ಪ್ರದೇಶದ ಅರ್ಧದಷ್ಟು ಮಣ್ಣು ತೆರವಾಗಿದ್ದು, ಈಗ ಮಳೆಯಿಂದಾಗಿ ಅಗೆದಿಟ್ಟ ಗುಡ್ಡದ ನಡುವಿನಿಂದಲೇ ಮೇಲ್ಭಾಗದಿಂದ ನೀರು ಹರಿದು ಬರುತ್ತಿದೆ. ಗುಡ್ಡದ ಮೇಲ್ಭಾಗದ ನೀರನ್ನು ಹರಿಯಲು ಪರ್ಯಾಯ ವ್ಯವಸ್ಥೆ ಮಾಡದ ಕಾರಣ ಚಾರ್ಮಾಡಿ ಘಾಟ್ ರೀತಿಯಲ್ಲಿ ನೀರು ಇಳಿದು ರಸ್ತೆಗೆ ಬೀಳುತ್ತಿದೆ. ಈ ಕಾರಣದಿಂದ ಗುಡ್ಡದ ಮಣ್ಣು ಸಡಿಲಗೊಂಡಿದ್ದು, ದಿನದಿಂದ ದಿನಕ್ಕೆ ಮೇಲಿನ ಭಾಗದಲ್ಲಿ ಮಣ್ಣು ಕುಸಿದು ಬೀಳುತ್ತಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ರಸ್ತೆಯ ಕೆಳಭಾಗದಲ್ಲಿ ಹಲವಾರು ಮನೆಗಳಿದ್ದು, ಅಂಕೋಲಾ ಮಾದರಿಯಲ್ಲಿ ಮೇಲಿನಿಂದ ಗುಡ್ಡ ಕುಸಿತಗೊಂಡರೆ ಹತ್ತಾರು ಜನರ ಪ್ರಾಣಕ್ಕೆ ಕಂಟಕವಾಗಬಹುದು.
ಯಾರದ್ದೋ ಜಾಗ ತುಂಬಲು ರಸ್ತೆ ಅಗೆತ
ಅವೈಜ್ಞಾನಿಕ ರೀತಿಯಲ್ಲಿ ಗುಡ್ಡವನ್ನು ಅಗೆದಿರುವುದು ಮತ್ತು ಮಳೆ ನೀರು ಹರಿಯಲು ವ್ಯವಸ್ಥೆ ಮಾಡದಿರುವುದು ಕೆತ್ತಿಕಲ್ ಗುಡ್ಡಕ್ಕೆ ಕೇಡು ತಂದಿದೆ. ಮಂಗಳೂರು – ಮೂಡುಬಿದ್ರೆ ಹೆದ್ದಾರಿಯನ್ನು ಗುರುಪುರದ ಬದಲು ಅಡ್ಡೂರಿನ ವರೆಗೆ ಒಯ್ಯಲಾಗಿದ್ದು, ಇದರ ಹಿಂದೆ ಪ್ರಭಾವಿ ರಾಜಕಾರಣಿ ಮತ್ತು ಕೆಲವು ಸ್ಥಳೀಯ ಪುಢಾರಿಗಳ ಲಾಬಿ ಕೆಲಸ ಮಾಡಿದೆ ಎನ್ನುವುದು ಹಿಂದಿನಿಂದಲೂ ಕೇಳಿಬರುತ್ತಿರುವ ಮಾತು. ಅಡ್ಡೂರು ಆಸುಪಾಸಿನಲ್ಲಿ ಪ್ರಭಾವಿ ರಾಜಕಾರಣಿ ಮತ್ತು ಕೆಲವು ಉದ್ಯಮಿಗಳು 500 ಎಕರೆಯಷ್ಟು ಜಾಗ ತೆಗೆದಿಟ್ಟಿದ್ದು, ಸುತ್ತುಬಳಸಿ ಅಲ್ಲಿಂದಲೇ ಹೆದ್ದಾರಿಯನ್ನು ಒಯ್ಯಲಾಗುತ್ತಿದೆ. ಒಟ್ಟು ಹೆದ್ದಾರಿಯೇ ಯಾರದ್ದೋ ಮೂಗಿನ ನೇರಕ್ಕೆ ನಡೆಯುತ್ತಿದೆ ಎಂದು ಸ್ಥಳೀಯರೇ ಹೇಳುತ್ತಿದ್ದು, ಇದರ ಕಾರಣಕ್ಕೆ ಈಗ ಕೆತ್ತಿಕಲ್ ಗುಡ್ಡವನ್ನು ಅಗೆದು ಬೇರೆಡೆಯ ರಸ್ತೆ ತುಂಬಲು ಮಣ್ಣು ಒಯ್ಯುತ್ತಿದ್ದು ಇದರಿಂದ ತೊಂದರೆ ಎದುರಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಅಂಕೋಲಾದ ಶಿರೂರಿನಲ್ಲಿ ದುರಂತ ನಡೆಯುವುದಕ್ಕೂ ನದಿ ಬಳಿಯಿದ್ದ ಕಡಿದಾದ ಬೆಟ್ಟವನ್ನು ಕಡಿದು ರಸ್ತೆ ಮಾಡಿದ್ದೇ ಕಾರಣ. ಮಳೆಯಿಂದಾಗಿ ಬೆಟ್ಟ ಕುಸಿದು ಹೆದ್ದಾರಿ ಸಹಿತ ನದಿಯತ್ತ ಬಿದ್ದಿದೆ. ಅಲ್ಲಿದ್ದ ಮೂರ್ನಾಲ್ಕು ಲಾರಿ, ಟ್ಯಾಂಕರ್, ಟೀ ಅಂಗಡಿಗಳು ನದಿ ಪಾಲಾಗಿದ್ದು ಹತ್ತಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದರು. ಅಲ್ಲಿ ನಾಪತ್ತೆಯಾಗಿರುವ ಒಂದು ಲಾರಿಯನ್ನು ಪತ್ತೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಕೆತ್ತಿಕಲ್ ಗುಡ್ಡದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅಂತಹದ್ದೇ ಅಪಾಯ ಎದುರಾಗಬಹುದು ಎನ್ನುವ ಆತಂಕದಲ್ಲಿದ್ದಾರೆ ಸ್ಥಳೀಯರು. ವಾಮಂಜೂರಿನಿಂದ ಮೂಡುಬಿದ್ರೆಯತ್ತ ತೆರಳುವ ರಸ್ತೆಯ ಮೇಲಿನ ಭಾಗದಲ್ಲಿ ಗುಡ್ಡವನ್ನು ಅಗೆದಿರುವ ಜಾಗಕ್ಕೆ ಒಂದಷ್ಟು ಸಿಮೆಂಟ್ ಬಳಿಯಲಾಗಿದೆ. ಆದರೆ, ಮಳೆಯಿಂದಾಗಿ ಒಟ್ಟು ಗುಡ್ಡವೇ ಸಡಿಲಗೊಂಡು, ನೀರು ಒಳಕ್ಕಿಳಿಯುತ್ತಿರುವುದರಿಂದ ಗುಡ್ಡದ ಮಣ್ಣು ಕುಸಿಯುತ್ತಾ ದೊಡ್ಡ ಅಪಾಯ ತಂದಿಡುವ ಸಾಧ್ಯತೆ ತೋರುತ್ತಿದೆ.. ಇದಕ್ಕೆಲ್ಲ ರಸ್ತೆ ಬಗ್ಗೆ ನಿರ್ಲಕ್ಷ್ಯ ವಹಿಸಿದ ಸ್ಥಳೀಯ ಶಾಸಕರು, ಹಿಂದಿನ ಸಂಸದರು ಮತ್ತು ಜಿಲ್ಲಾಡಳಿತವೇ ಹೊಣೆ ಎನ್ನಬೇಕಾಗುತ್ತದೆ.
Mangalore Kethikal landslide fear, Ankola landslide type fear erupts among people. The disastrous slope failure occurred at the Kethikal hill, in the outskirts of Mangalore city in NH 13, India, during the month of June 1998 soon after the heavy and continuous monsoon rains. Many closely built dwelling houses at the top of hill are damaged and the traffic along the road is also diverted for some duration.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
03-04-25 01:04 pm
HK News Staff
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
03-04-25 04:04 pm
Mangalore Correspondent
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
03-04-25 05:01 pm
HK News Desk
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm