ಬ್ರೇಕಿಂಗ್ ನ್ಯೂಸ್
21-07-24 01:20 pm Mangalore Correspondent ಕರಾವಳಿ
ಮಂಗಳೂರು, ಜುಲೈ.21: ಶಿರಾಡಿ ಮತ್ತು ಸಂಪಾಜೆ ಘಾಟ್ ಹೆದ್ದಾರಿಯಲ್ಲಿ ಭೂಕುಸಿತದ ಪರಿಣಾಮ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಹೊರಡುವ ಶೇ.50ರಷ್ಟು ಪ್ರೀಮಿಯಂ ಬಸ್ ಸಂಚಾರ ರದ್ದುಗೊಂಡಿದೆ. ರಾತ್ರಿ ವೇಳೆ ಶಿರಾಡಿ ಘಾಟ್ ಪ್ರದೇಶದಲ್ಲಿ ವಾಹನ ಸಂಚಾರ ನಿಷೇಧ ಇರುವುದರಿಂದ ಆ ದಾರಿಯಲ್ಲಿ ತೆರಳಿದ ವಾಹನಗಳು ಕೂಡ ಅಲ್ಲಿವರೆಗೆ ಹೋಗಿ ಬೆಳಗ್ಗಿನ ವರೆಗೆ ಕಾದು ಹೋಗುವ ಸ್ಥಿತಿಯಾಗಿದೆ.
ಕೆಎಸ್ಸಾರ್ಟಿಸಿ ವಿಭಾಗದಿಂದ ಹೊರಡುವ ನಾನ್ ಎಸಿ ಸ್ಲೀಪರ್, ರಾಜಹಂಸ, ಸಾಮಾನ್ಯ ಸಾರಿಗೆ ಬಸ್ಗಳು ಚಾರ್ಮಾಡಿ ಮೂಲಕ ಸಂಚರಿಸುತ್ತದೆ. ಆದರೆ, ಕೆಎಸ್ಸಾರ್ಟಿಸಿ ಪ್ರೀಮಿಯಂ ಬಸ್ಗಳಾದ ಅಂಬಾರಿ ಉತ್ಸವ, ವೋಲ್ವೋ ಮಲ್ಟಿ ಆ್ಯಕ್ಸೆಲ್, ಡ್ರೀಮ್ ಕ್ಲಾಸ್ ಸ್ಲೀಪರ್ ಮಾದರಿಯ ಬಸ್ಗಳು ಚಾರ್ಮಾಡಿ ಘಾಟ್ ರಸ್ತೆಯ ಗುಣಮಟ್ಟಕ್ಕೆ ಆಧರಿಸಿ ಸಂಚಾರಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಶಿರಾಡಿ ಮಾರ್ಗವೊಂದೇ ಸಂಚಾರಕ್ಕೆ ಸೂಕ್ತ. ವಿಭಾಗದಿಂದ ಪ್ರತಿದಿನ ರಾತ್ರಿ ಹೊರಡುವ 40 ಪ್ರೀಮಿಯಂ ಬಸ್ಗಳ ಪೈಕಿ ಸುಮಾರು 20 ಬಸ್ ಮಾತ್ರ ಸದ್ಯ ಶಿರಾಡಿ ಮೂಲಕ ಸಂಚರಿಸುತ್ತಿದೆ. ಉಳಿದ ಬಸ್ ಸಂಚಾರ ರದ್ದಾಗಿದೆ. ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗದಲ್ಲಿ ಯಾವುದೇ ಪ್ರೀಮಿಯಂ ಬಸ್ ಸೇವೆ ಇರದ ಕಾರಣ ಯಾವುದೇ ಸಮಸ್ಯೆ ಇಲ್ಲ.


ಮಂಗಳೂರಿನಿಂದ ರಾತ್ರಿ ಸುಮಾರು 10.30, 11 ಗಂಟೆಗೆ ಹೊರಡುವ ಪ್ರೀಮಿಯಂ ಬಸ್ಗಳು ನಸುಕಿನ ಜಾವ ಸುಮಾರು 2ರಿಂದ 3 ಗಂಟೆ ವೇಳೆಗೆ ಶಿರಾಡಿಗೆ ತಲುಪುತ್ತದೆ. ರಾತ್ರಿ ನಿಷೇಧ ಇದ್ದು ಬೆಳಗ್ಗೆ 6 ಗಂಟೆ ಬಳಿಕ ವಾಹನ ಸಂಚಾರ ಆರಂಭವಾಗುವ ಕಾರಣ ಪ್ರಯಾಣಿಕರು 3 ಗಂಟೆಗಳ ಕಾಲ ಬಸ್ನಲ್ಲೇ ಕಳೆಯಬೇಕು. ಬೆಳಗ್ಗೆ 6 ಗಂಟೆಗೆ ಹೊರಟ ಬಸ್ ಬೆಂಗಳೂರಿಗೆ ತಲುಪುವಾಗ 11 ಗಂಟೆ ಸಮೀಪಿಸುತ್ತದೆ. ಇದೇ ಕಾರಣಕ್ಕೆ ಕೆಎಸ್ಸಾರ್ಟಿಸಿಯಿಂದ ಪ್ರಯಾಣಿಕರಿಗೆ ಮೊದಲೇ ವಿಷಯ ತಿಳಿಸಿ ಬಸ್ಗೆ ಹತ್ತಿಸಲಾಗುತ್ತಿದೆ. ಆದರೆ ಬೆಂಗಳೂರಿನಿಂದ ಹೊರಡುವ ಬಸ್ಗಳು ಶಿರಾಡಿ ತಲುಪುವಾಗಲೇ ಮುಂಜಾನೆ 4 ಗಂಟೆ ಆಗುವ ಕಾರಣ ಅಷ್ಟೊಂದು ಸಮಸ್ಯೆ ಇಲ್ಲ ಎನ್ನುತ್ತಾರೆ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ.
ಸಂಚಾರಕ್ಕೆ ಸಮಸ್ಯೆ ಆಗಿರುವುದರಿಂದ ಶಿರಾಡಿ ಘಾಟ್ ಹೊರತುಪಡಿಸಿ, ಬೇರೆ ರೂಟ್ನಲ್ಲಿ ಸಂಚಾರಕ್ಕೆ ಅವಕಾಶ ಇದೆಯೇ ಎಂದು ತಿಳಿಯುವ ಉದ್ದೇಶಕ್ಕೆ ಕೆಎಸ್ಸಾರ್ಟಿಸಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗಿದೆ. ಹುಲಿಕಲ್ ಘಾಟ್ ಮೂಲಕ ಬೆಂಗಳೂರು ತಲುಪಲು ಹೆಚ್ಚುವರ 120 ಕಿ.ಮೀ. ಕ್ರಮಿಸಬೇಕು. ಕಾರ್ಕಳದಲ್ಲಿ ಬಲಕ್ಕೆ ತಿರುಗಿ ಕುದುರೆಮುಖ -ಕಳಸ- ಚಿಕ್ಕಮಗಳೂರು ಮೂಲಕ ಬೆಂಗಳೂರಿಗೆ ಸಂಚರಿಸಲು ದಾರಿಯಿದೆ. ಇದರಿಂದ 45 ಕಿ.ಮೀ. ಅಷ್ಟೇ ಹೆಚ್ಚಾಗುತ್ತದೆ. ಆದರೆ ಈ ರಸ್ತೆ ಕಿರಿದಾಗಿದ್ದು ದೊಡ್ಡ ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ. ಬಿಸಿಲೆ ಘಾಟ್ ಮೂಲಕವೂ ಸಂಚಾರಕ್ಕೆ ಚಿಂತನೆ ನಡೆಸಲಾಗಿದ್ದು, ಸುಬ್ರಹ್ಮಣ್ಯ ಭಾಗದಲ್ಲಿ ಕೃತಕ ನೆರೆ ಸೃಷ್ಟಿಯಾದ ಕಾರಣ ತೊಂದರೆಯಾಗಿದೆ.
ಶನಿವಾರ ರಾತ್ರಿ ಮೊದಲಿಗೆ ಕೆಂಪು ಸಾಮಾನ್ಯ ಕೆಎಸ್ಸಾರ್ಟಿಸಿ ಬಸ್ಗಳನ್ನು ಮಾತ್ರ ಬೆಂಗಳೂರಿಗೆ ಬಿಡಲಾಗಿತ್ತು. ರಾತ್ರಿ 11ರ ಬಳಿಕ ರಾಜಹಂಸ ಬಸ್ಗಳು ತೆರಳಿದ್ದವು. ಬಸ್ಸಿಗಾಗಿ ಬೇಗನೆ ಬಂದಿದ್ದವರು ರೈಲಿನ ಮೂಲಕವೇ ತೆರಳಿದ್ದಾರೆ ಎಂದು ಕೆಲವು ಪ್ರಯಾಣಿಕರು ತಿಳಿಸಿದ್ದಾರೆ. ಖಾಸಗಿ ಬಸ್ಸುಗಳು ಕೂಡ ರಾತ್ರಿ ಲೇಟಾಗಿ ಹೊರಟು ಶಿರಾಡಿ ಘಾಟಿಯಲ್ಲಿ ಬೆಳಗ್ಗಿನ ವರೆಗೆ ಕಾದು ಬಳಿಕ ಬೆಂಗಳೂರು ತೆರಳಿವೆ. ಹೀಗಾಗಿ ಬೆಂಗಳೂರು ತಲುಪುವಾಗ ವಿಳಂಬ ಆಗಿತ್ತು.
Mangalore 50 percent ksrtc Volvo buses left to move on Shiradi Ghat, Most private buses made to wait whole night because of which buses have reached late.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm