ಬ್ರೇಕಿಂಗ್ ನ್ಯೂಸ್
20-07-24 02:34 pm Mangalore Correspondent ಕರಾವಳಿ
ಮಂಗಳೂರು, ಜುಲೈ 20: ಮಂಗಳೂರು- ಬೆಂಗಳೂರು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿರುವುದರಿಂದ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ. ಶಿರಾಡಿ ಘಾಟ್ ಜೊತೆಗೆ ಸಂಪಾಜೆ- ಮಡಿಕೇರಿ ಹೆದ್ದಾರಿಯೂ ಬಂದ್ ಆಗಿದ್ದು, ಮಂಗಳೂರು – ಬೆಂಗಳೂರು ಸಾಗುವ ಹೆಚ್ಚಿನ ಖಾಸಗಿ ಬಸ್ಗಳು ಸಂಚಾರಕ್ಕೆ ಬ್ರೇಕ್ ಹಾಕಿವೆ. ಚಾರ್ಮಾಡಿ ಘಾಟ್ ನಲ್ಲಿ ಮಾತ್ರ ಸಾಗಬೇಕಿರುವುದರಿಂದ ವೋಲ್ವೋ ಸೇರಿದಂತೆ ದೊಡ್ಡ ಗಾತ್ರದ ಸ್ಲೀಪರ್ ಬಸ್ಗಳು ಸಂಚಾರದ ರಿಸ್ಕ್ ಬೇಡವೆಂಬ ನಿರ್ಧಾರಕ್ಕೆ ಬಂದಿವೆ. ಅಂಬಾರಿ ಮಾದರಿಯ ಕೆಎಸ್ಸಾರ್ಟಿಸಿ ವೋಲ್ವೋ ಬಸ್ಸುಗಳೂ ಸಂಚಾರ ನಿಲ್ಲಿಸಿವೆ.

ಇದೇ ವೇಳೆ, ಸಿಕ್ಕಿದ್ದು ಲಾಭ ಎನ್ನುವಂತೆ ವೀಕೆಂಡಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಬಸ್ ಪ್ರಯಾಣ ದರವನ್ನೂ ಹೆಚ್ಚಿಸಲಾಗಿದೆ. ಮಂಗಳೂರು- ಬೆಂಗಳೂರು ನಡುವೆ ಏನಿಲ್ಲ ಅಂದ್ರೂ 350-400 ಬಸ್ಗಳು ವೀಕೆಂಡಲ್ಲಿ ಹೋಗಿ ಬರುತ್ತವೆ. ರೈಲಿನ ವ್ಯವಸ್ಥೆ ಇದ್ದರೂ, ಭಾರೀ ಸಂಖ್ಯೆಯಲ್ಲಿ ಜನರು ರಾಜಧಾನಿಯತ್ತ ಹೋಗುವುದರಿಂದ ಬಸ್ಗಳು ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಹೆಚ್ಚಳ ಮಾಡುತ್ತವೆ. ಈಗ ಚಾರ್ಮಾಡಿ ಘಾಟಿಯಲ್ಲಿ ಮಾತ್ರ ವಾಹನಗಳು ಹೋಗಿ ಬರುವುದರಿಂದ ಆ ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದೆ. ಇದರ ಜೊತೆಗೆ, ಪ್ರಯಾಣ ದರ ಹೆಚ್ಚಿಸುವ ಮೂಲಕ ಸುಲಿಗೆಯೂ ಆಗುತ್ತಿದೆ.


ಮತ್ತೊಂದೆಡೆ, ವಿಮಾನ ದರವೂ ಗಗನಕ್ಕೇರಿದೆ. ಮೈಕ್ರೋಸಾಫ್ಟ್ ತೊಂದರೆಯಿಂದಾಗಿ ಇಂಡಿಗೋ ವಿಮಾನ ಪ್ರಯಾಣ ಕಡಿತಗೊಳಿಸಿದ್ದು, ಏರ್ ಇಂಡಿಯಾ ಮಾತ್ರ ಸಂಚಾರ ಮಾಡುತ್ತಿವೆ. ಸಾಮಾನ್ಯ ದಿನಗಳಲ್ಲಿ ಮಂಗಳೂರು- ಬೆಂಗಳೂರು ನಡುವೆ ವಿಮಾನ ದರ 3-4 ಸಾವಿರ ಇದ್ದರೆ, ಈಗ ದರ ಮೂರು ಪಟ್ಟು ಏರಿಕೆಯಾಗಿದೆ. ಭಾನುವಾರದ ರೇಟ್ 15 ಸಾವಿರ ತೋರಿಸುತ್ತಿದ್ದರೆ, ಶುಕ್ರವಾರ, ಶನಿವಾರ 9ರಿಂದ 12 ಸಾವಿರ ಟಿಕೆಟ್ ದರ ಇದೆ. ಬೆಂಗಳೂರಿಗೆ ಪ್ರತಿದಿನ ಆರು ವಿಮಾನಗಳಿರುತ್ತಿದ್ದವು. ಈ ಪೈಕಿ ಜುಲೈ 1ರಿಂದ ಎರಡು ಏರ್ ಇಂಡಿಯಾ ವಿಮಾನಗಳನ್ನು ರದ್ದುಗೊಳಿಸಲಾಗಿತ್ತು. ಶುಕ್ರವಾರ ಇಂಡಿಗೋ ವಿಮಾನ ಇಲ್ಲದ ಕಾರಣ, ಎರಡು ಏರ್ ಇಂಡಿಯಾ ವಿಮಾನಗಳ ಪ್ರಯಾಣ ದರ ಸಿಕ್ಕಾಪಟ್ಟೆ ಏರಿಕೆಯಾಗಿತ್ತು. ಶನಿವಾರ ಬೆಳಗ್ಗೆಯೂ ಎರಡು ಇಂಡಿಗೋ ವಿಮಾನ ರದ್ದುಪಡಿಸಲಾಗಿದೆ.
ಮಂಗಳೂರಿನಿಂದ ಮುಂಬೈಗೆ ಡೈಲೀ 5 ವಿಮಾನಗಳು ಸಂಚರಿಸುತ್ತಿದ್ದು, ಎಲ್ಲವೂ ಭರ್ತಿಯಾಗುತ್ತವೆ. ಸಾಮಾನ್ಯ ದಿನಗಳಲ್ಲಿ ನಾಲ್ಕೈದು ಸಾವಿರ ಇರುತ್ತಿದ್ದ ಈ ವಿಮಾನಗಳ ದರವೂ ಈಗ 12-14 ಸಾವಿರಕ್ಕೆ ಏರಿಕೆಯಾಗಿದೆ. ಇದಲ್ಲದೆ, ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಮಂಗಳೂರು ಏರ್ಪೋರ್ಟಿನಲ್ಲಿ ವಿಮಾನ ಇಳಿಯುವುದಕ್ಕೂ ತೊಂದರೆಯಾಗಿದೆ. ಬೆಂಗಳೂರು, ಮುಂಬೈನಿಂದ ಬರುವ ವಿಮಾನಗಳು ಹೆಚ್ಚು ಮಳೆಯಿದ್ದ ಸಂದರ್ಭದಲ್ಲಿ ಲ್ಯಾಂಡ್ ಆಗುವುದಕ್ಕಾಗದೇ ಹಿಂದಕ್ಕೆ ಹೋಗಿದ್ದಿವೆ. ಮೊನ್ನೆ ಭಾನುವಾರ ರಾತ್ರಿ ಬೆಂಗಳೂರಿನಿಂದ ಬಂದಿದ್ದ ಏರ್ ಇಂಡಿಯಾ ವಿಮಾನ ಮಂಗಳೂರಿಗೆ ಎರಡು ಬಾರಿ ಬಂದು ಇಳಿಯಲಾಗದೆ ಹೋಗಿತ್ತು ಎನ್ನುತ್ತಾರೆ, ಸ್ವತಃ ಆ ವಿಮಾನದಲ್ಲಿ ಪ್ರಯಾಣಿಕರಾಗಿದ್ದ ಉದ್ಯಮಿ ದಿಲ್ ರಾಜ್ ಆಳ್ವಾ.

ಮಂಗಳೂರಿನಲ್ಲಿ ವಿಮಾನ ಲ್ಯಾಂಡಿಂಗ್ ಕಷ್ಟ
ಮಂಗಳೂರು ಏರ್ಪೋರ್ಟ್ ಟೇಬಲ್ ಟಾಪ್ ರೀತಿಯ ವ್ಯವಸ್ಥೆಯನ್ನು ಹೊಂದಿರುವುದರಿಂದ ಇಲ್ಲಿ ವಿಮಾನ ಇಳಿಸುವುದು ಪೈಲಟ್ಗಳಿಗೆ ಸವಾಲು. ಬೆಂಗಳೂರು, ಮುಂಬೈನಲ್ಲಿ ವಿಮಾನ ಇಳಿಸುವ ಮಂದಿ ಮಂಗಳೂರಿನಲ್ಲಿ ಲ್ಯಾಂಡ್ ಮಾಡುವುದಕ್ಕೆ ಕಷ್ಟಪಡುತ್ತಾರಂತೆ. ಏರ್ಪೋರ್ಟ್ ಎತ್ತರದಲ್ಲಿರುವುದರಿಂದ ಹೆಚ್ಚಿನ ಸಮಯಗಳಲ್ಲಿ ಮಂಜು ಇರುತ್ತದೆ. ಸ್ವಲ್ಪ ಆಯತಪ್ಪಿದರೂ, ಏರ್ಪೋರ್ಟ್ ರನ್ ವೇಗಿಂತ ಕೆಳಗಿರುವ ಅಡ್ಡಗೋಡೆಗೆ ಡಿಕ್ಕಿಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಳೆಗಾಲದಲ್ಲಂತೂ ವಿಮಾನ ಇಳಿಸುವುದು ಕಷ್ಟವಾಗುತ್ತದೆ. ಇದಕ್ಕಾಗಿ ನುರಿತ ಪೈಲಟ್ಗಳೇ ಇರಬೇಕಾಗುತ್ತದೆ ಎನ್ನುತ್ತಾರೆ, ವಿಮಾನ ಸಿಬಂದಿ.
ಸದ್ಯಕ್ಕೆ ವಿಮಾನ ಮತ್ತು ಹೆದ್ದಾರಿ ಸಂಚಾರ ಸಮಸ್ಯೆ ಆಗಿರುವುದರಿಂದ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ವಿಶೇಷ ಕಾಳಜಿ ವಹಿಸಿ, ಹೆಚ್ಚುವರಿ ರೈಲು ವ್ಯವಸ್ಥೆಯನ್ನು ಮಾಡಿದ್ದಾರೆ. ಆದರೆ, ಹೊಸ ರೈಲು ಹಾಕಿದ್ದರೂ ಸೀಟು ಖಾಲಿ ಇಲ್ಲ. ಸೀಟು ಫುಲ್ ಬುಕ್ಕಿಂಗ್ ಆಗಿದ್ದು ಸಾಮಾನ್ಯ ಜನರು ರೈಲೋ, ಬಸ್ಸೋ ಎನ್ನುವ ಗೊಂದಲದಲ್ಲಿದ್ದಾರೆ.
Bangalore Mangalore shiradi ghat closed, private bus companies and flights have increased their ticket prices. Some bus tickets have reached 2 thosand and flight prices have reached to 13 - 14 thosand per passenger after the shiradi ghat has been closed due to landslide.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm