ಬ್ರೇಕಿಂಗ್ ನ್ಯೂಸ್
17-07-24 09:40 pm Mangalore Correspondent ಕರಾವಳಿ
ಮಂಗಳೂರು, ಜುಲೈ.17: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಜುಲೈ 18 ಮತ್ತು 19ರಂದು ಮತ್ತೆ ಭಾರೀ ಮಳೆಯಾಗುವ ಬಗ್ಗೆ ರೆಡ್ ಅಲರ್ಟ್ ಸೂಚನೆ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆಯಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಜುಲೈ 15 ಮತ್ತು 16ರಂದು ರೆಡ್ ಅಲರ್ಟ್ ನೀಡಿದ್ದರಿಂದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು. 17ರಂದು ಮೊಹರಂ ರಜೆ ಹಿನ್ನೆಲೆಯಲ್ಲಿ ಸರಕಾರಿ ರಜೆ ಇತ್ತು. ಇದರಿಂದಾಗಿ ಸತತ ಮೂರು ದಿನ ರಜೆ ಆಗಿದ್ದು, ಮತ್ತೆ ರೆಡ್ ಅಲರ್ಟ್ ನೀಡಿರುವುದರಿಂದ ಜಿಲ್ಲಾಡಳಿತ ರಜೆ ನೀಡುವುದಾ, ಬೇಡವಾ ಎನ್ನುವ ಸಂದಿಗ್ಧದಲ್ಲಿದೆ. ಇದಲ್ಲದೆ, ಎರಡು ಜಿಲ್ಲೆಗಳಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಸುಮಾರು ಏಳು ರಜೆಗಳನ್ನು ಮಳೆಗಾಗಿ ನೀಡಲಾಗಿದ್ದು ಶಾಲಾ ಶಿಕ್ಷಕರು ಪಠ್ಯ ಪೂರೈಸುವ ಚಿಂತೆಯಲ್ಲಿದ್ದಾರೆ.
ರೆಡ್ ಅಲರ್ಟ್ ಇದ್ದರೂ, ಕಳೆದೆರಡು ದಿನಗಳಲ್ಲಿ ವಿಪರೀತ ಎನ್ನುವ ರೀತಿ ಮಳೆ ಆಗಿಲ್ಲ. ಸಾಮಾನ್ಯ ರೀತಿಯ ಮಳೆಯಷ್ಟೇ ಸುರಿದಿದೆ. ಬುಧವಾರ ಬಹುತೇಕ ಹಗಲಿನಲ್ಲಿ ಮಂಗಳೂರಿನಲ್ಲಿ ಮಳೆ ಇರಲಿಲ್ಲ. ಮೂಡುಬಿದ್ರೆ, ಬೆಳ್ತಂಗಡಿ ಭಾಗದಲ್ಲಿ ಸೋನೆ ಮಳೆಯ ರೀತಿ ಸುರಿಯುತ್ತಿತ್ತು ಎನ್ನುವ ಮಾಹಿತಿ ಇದೆ. ಉಳಿದಂತೆ, ರಾತ್ರಿ ಎಂಟು ಗಂಟೆ ವೇಳೆಗೆ ಜೋರಾದ ಮಳೆಯಾಗಿದೆ. ಜುಲೈ ತಿಂಗಳಲ್ಲಿ ಈ ರೀತಿಯ ಮಳೆ ಹಿಂದಿನಿಂದಲೂ ಸಾಮಾನ್ಯ. ತುಳುನಾಡಿನಲ್ಲಿ ಆಷಾಢ ತಿಂಗಳು ಈಗಷ್ಟೇ ಆರಂಭ ಆಗಿದ್ದು, ಮಳೆ ಬಂದರೆ ಬಿರುಸಾಗಿರುತ್ತದೆ. ಬಿಸಿಲು ಬಂದರೆ, ಅದೂ ಪ್ರಖರವಾಗಿರುತ್ತದೆ. ಇದು ಹಿಂದಿನಿಂದ ಮಾಮೂಲಿ ಎಂಬಂತಿದ್ದ ವಾತಾವರಣ. ಈ ಬಾರಿ ಹವಾಮಾನ ವೈಪರೀತ್ಯದಿಂದ ಆಗಿಂದಾಗ್ಗೆ ತೀವ್ರ ಮಳೆ ಮತ್ತು ತೀವ್ರ ಬರವೂ ಎದುರಾಗುತ್ತಿದೆ. ಹಾಗಾಗಿ, ಮಳೆಯ ಬಗ್ಗೆ ಹವಾಮಾನ ಇಲಾಖೆಯವರು ನೀಡುವ ಭವಿಷ್ಯವೂ ಈ ಬಾರಿ ನಿಜವಾಗಿಲ್ಲ.
ಪ್ರತಿ ಬಾರಿ ಜುಲೈ ಕೊನೆಯಲ್ಲಿ ಮಳೆಯಿಂದಾಗಿ ವಿಕೋಪ ಸಂಭವಿಸುತ್ತದೆ. ಅಂಕೋಲಾದಲ್ಲಿ ಹೆದ್ದಾರಿ ಕುಸಿತಗೊಂಡು ಈಗಾಗಲೇ ಹಲವರು ಪ್ರಾಣ ಕಳಕೊಂಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಬೆಳ್ತಂಗಡಿ, ಸುಳ್ಯ, ಕೊಡಗು ಭಾಗದಲ್ಲಿ ಬೆಟ್ಟವೇ ಕುಸಿದು ಅಪಾರ ನಷ್ಟವುಂಟಾಗಿತ್ತು. ಹೀಗಾಗಿ ಮಳೆಯ ಬಗ್ಗೆ ರೆಡ್ ಅಲರ್ಟ್ ನೀಡಿದ ಕೂಡಲೇ ಜಿಲ್ಲಾಡಳಿತವೂ ಹಳ್ಳಿಗಳಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಅಪಾಯ ಆಗಬಾರದು ಎಂಬ ಮುಂಜಾಗ್ರತೆಯಿಂದ ಮೊದಲೇ ರಜೆ ನೀಡುವುದನ್ನು ವಾಡಿಕೆ ಮಾಡಿಕೊಂಡು ಬಂದಿದೆ. ಈ ನಡುವೆ, ಜಿಲ್ಲಾಧಿಕಾರಿಗಳು ರಜೆಯ ಬಗ್ಗೆ ಆದೇಶ ನೀಡಿರದೇ ಇದ್ದರೂ ಕಿಡಿಗೇಡಿಗಳು ರಜೆ ನೀಡಿರುವ ಪತ್ರವನ್ನು ಸೃಷ್ಟಿಸಿ ವೈರಲ್ ಮಾಡಿದ್ದಾರೆ. ಈ ಬಗ್ಗೆ ಮಂಗಳೂರಿನ ಜಿಲ್ಲಾಧಿಕಾರಿ ಗರಂ ಆಗಿದ್ದು, ಅಂಥ ಪತ್ರಗಳನ್ನು ಫಾರ್ವರ್ಡ್ ಮಾಡಿದರೂ ಎಫ್ಐಆರ್ ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
Rain, Fake letter on school college holiday goes viral, Mangalore DC Mullai Muhilan M P Orders for strict action against those miscreants who have created fake letter and are circulating it online.
04-04-25 12:00 pm
Bangalore Correspondent
MLC Vishwanath, Siddaramaiah: ಫ್ರೀ ಬಸ್ ಕೊಟ್ಟ...
04-04-25 10:28 am
Mandya Mysuru Bangalore Accident, KSRTC, Car:...
03-04-25 09:44 pm
Hubballi student suicide attempt: ಯುವತಿಯ ಖಾಸಗ...
02-04-25 10:48 pm
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
04-04-25 12:44 pm
HK News Desk
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
04-04-25 01:39 pm
Mangalore Correspondent
Mangalore Police, Inspector Balakrishna: ಪ್ರಕ...
03-04-25 10:14 pm
Mangalore Court, Lawyers Protest, Judge: ಜಡ್ಜ...
03-04-25 04:04 pm
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
03-04-25 05:01 pm
HK News Desk
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm