ಬ್ರೇಕಿಂಗ್ ನ್ಯೂಸ್
16-07-24 07:31 pm Mangalore Correspondent ಕರಾವಳಿ
ಮಂಗಳೂರು, ಜುಲೈ.16: ಮನಸ್ಸು ಮಾಡಿದರೆ, ಅಸಾಧ್ಯವನ್ನೂ ಸಾಧಿಸಿ ತೋರಿಸಬಹುದು ಅಂತಾರೆ. ಬಂಟ್ವಾಳ ಮೂಲದ ಯುವಕರಿಬ್ಬರು ಕೇವಲ 11 ದಿನಗಳಲ್ಲಿ ಕೇವಲ ಆಟೋರಿಕ್ಷಾ ಹಿಡಿದು ನಾಲ್ಕು ರಾಜ್ಯಗಳನ್ನು ಸುತ್ತಿ ಐದು ಜ್ಯೋತಿರ್ಲಿಂಗಗಳನ್ನು ದರ್ಶನ ಮಾಡಿ ಬಂದಿದ್ದಾರೆ. 11 ದಿನಗಳಲ್ಲಿ ಇವರು ಸಂಚರಿಸಿದ್ದು ಬರೋಬ್ಬರಿ 4200 ಕಿಮೀ ದೂರ..
ಬಂಟ್ವಾಳ ತಾಲೂಕಿನ ಮೆಲ್ಕಾರಿನ ಕ್ಯಾಟರಿಂಗ್ ಉದ್ಯಮಿ ವಿಜೇತ್ ನಾಯಕ್ ಹಾಗೂ ಕಲ್ಲಡ್ಕದ ಸಾಫ್ಟ್ ವೇರ್ ಇಂಜಿನಿಯರ್ ವಿಶ್ವಾಸ್ ಪ್ರಭು ಬಾಲ್ಯದಿಂದಲೂ ಸ್ನೇಹಿತರಾಗಿದ್ದು, ಖಾಸಗಿ ಆಟೋ ರಿಕ್ಷಾದಲ್ಲಿಯೇ ಇವರು ನಾಲ್ಕು ರಾಜ್ಯ ಸುತ್ತಿ ಬಂದಿದ್ದಾರೆ. ಜೂನ್ 29ರಂದು ಮುಂಜಾನೆ 4 ಗಂಟೆಗೆ ಸಂಚಾರ ಆರಂಭಿಸಿದ್ದ ಇವರು ಜುಲೈ 9ರಂದು ಪ್ರವಾಸ ಮುಗಿಸಿ ಊರಿಗೆ ಮರಳಿದ್ದಾರೆ.
ಈ ಹಿಂದೆ ಆಟೋ ರಿಕ್ಷಾದಲ್ಲಿಯೇ ಕಾಸರಗೋಡು ಜಿಲ್ಲೆಯ ಅನಂತಪುರ, ಚಾರ್ಮಾಡಿ ಮೊದಲಾದ ಪ್ರವಾಸಿ ತಾಣಗಳಿಗೆ ತೆರಳಿದ್ದರು. ಆದರೆ ನಾಲ್ಕು ರಾಜ್ಯ ಸುತ್ತುವ ಸುದೀರ್ಘ ಪ್ರಯಾಣವನ್ನು ಇದೇ ಮೊದಲ ಬಾರಿಗೆ ಕೈಗೊಂಡಿದ್ದರು. ಈ ಹಿಂದೆ ರೈಲಿನಲ್ಲೇ ಉತ್ತರ ಭಾರತದ ತೀರ್ಥ ಕ್ಷೇತ್ರಗಳಿಗೆ ಹೋಗಿ ಬಂದಿದ್ದ ಇವರು, ಈ ಬಾರಿ ಆಟೋ ಹಿಡಿದು ಜ್ಯೋತಿರ್ಲಿಂಗ ದರ್ಶನ ಮಾಡಿ ಬಂದಿದ್ದಾರೆ.
ಕ್ಯಾಟರಿಂಗ್ ಉದ್ಯಮಿ ವಿಜೇತ್ ನಾಯಕ್, ಉದ್ಯಮದ ಅನುಕೂಲಕ್ಕಾಗಿ ಖಾಸಗಿ ಆಟೋ ರಿಕ್ಷಾವನ್ನು ಖರೀದಿಸಿದ್ದರು. ಖಾಸಗಿ ವಾಹನಗಳಿಗೆ ಯಾವುದೇ ರಾಜ್ಯಕ್ಕೆ ಹೋಗಲು ಟೂರಿಸ್ಟ್ ಪರವಾನಿಗೆ ಪಡೆಯಬೇಕಿಲ್ಲ. ಇದಲ್ಲದೆ, ಒಬ್ಬ ವಾಹನ ಚಾಲನ ಮಾಡಿದರೆ, ಇನ್ನೊಬ್ಬ ಹಿಂಬದಿ ಕುಳಿತು ಊಟ, ತಿಂಡಿಗೆ ರೆಡಿ ಮಾಡಲು ಸಾಧ್ಯವಾಗುವಂತೆ ಆಟೋವನ್ನು ರೆಡಿ ಮಾಡಿಕೊಂಡಿದ್ದರು.
ಜೂನ್ 29ರಂದು ಬಂಟ್ವಾಳದಿಂದ ಹೊರಟ ಯುವಕರು ಉಡುಪಿ, ಕಾರವಾರ ಮೂಲಕ ಗೋವಾ ರಾಜ್ಯವನ್ನು ದಾಟಿ ಮಹಾರಾಷ್ಟ್ರಕ್ಕೆ ತೆರಳಿದ್ದರು. ಅಲ್ಲಿ ಗೃಷ್ಣೇಶ್ವರ, ಭೀಮಾಶಂಕರ, ತ್ರ್ಯಂಬಕೇಶ್ವರ ಎಂಬ ಮೂರು ಜ್ಯೋತಿರ್ಲಿಂಗ ಕ್ಷೇತ್ರಗಳ ದರ್ಶನ ಮಾಡಿದ್ದರು. ಆನಂತರ, ಗುಜರಾತ್ ತಲುಪಿದ್ದು ನಾಗೇಶ್ವರ, ಸೋಮನಾಥ ಜ್ಯೋತಿರ್ಲಿಂಗ ಕ್ಷೇತ್ರಗಳಿಗೂ ಹೋಗಿ ಬಂದಿದ್ದಾರೆ. ಇದರ ಜೊತೆಗೆ ಎಲ್ಲೋರಾ, ದ್ವಾರಕಾ, ಏಕತಾ ವಿಗ್ರಹ ಇರುವ ಸ್ಥಳಗಳಿಗೂ ಭೇಟಿ ನೀಡಿದ್ದಾರೆ.
11 ದಿನಗಳ ಪ್ರವಾಸದಲ್ಲಿ ಊಟ, ಉಪಾಹಾರವನ್ನು ಇವರು ಆಟೋದಲ್ಲೇ ತಯಾರಿಸಿದ್ದರು. ದಿನಸಿ ಸಾಮಾಗ್ರಿಗಳು, ಗ್ಯಾಸ್ ಸ್ಟೌ, ಪಾತ್ರೆಗಳನ್ನು ಜೊತೆಯಲ್ಲಿ ಒಯ್ದಿದ್ದರಲ್ಲದೆ, ಆಟೋ ಚಾಲನೆಯಲ್ಲಿದ್ದಾಗಲೇ ರೆಡಿ ಮಾಡಿಕೊಳ್ಳುತ್ತಿದ್ದರು. ಸಮಯ ಹಾಳು ಮಾಡದೇ ಮೊದಲೇ ರೆಡಿ ಮಾಡಿದ್ದ ಪ್ರವಾಸ ರೂಟ್ ಮತ್ತು ಯೋಜನೆಯಂತೆ ನಿಗದಿತ ಜಾಗ ತಲುಪಿದ್ದಾರೆ. ಒಬ್ಬರ ನಂತರ ಮತ್ತೊಬ್ಬರಂತೆ ಆಟೋ ಚಲಾಯಿಸುತ್ತ ಸುದೀರ್ಘ ಪ್ರವಾಸ ಮುಗಿಸಿದ್ದಾರೆ. ಎಲ್ಲ ಯೋಜನೆಗಳನ್ನು ಮೊದಲೇ ಹಾಕಿಕೊಂಡಿದ್ದರಿಂದ ನಿರೀಕ್ಷೆಯಂತೆ ಪ್ರವಾಸ ಪೂರ್ತಿಗೊಳಿಸಿದ್ದೇವೆ. ಹೊಸ ರಿಕ್ಷಾ ಆಗಿದ್ದರಿಂದ ಎಲ್ಲಿಯೂ ಸಮಸ್ಯೆ ಆಗಿಲ್ಲ ಎಂದು ವಿಜೇತ್ ನಾಯಕ್ ಹೇಳಿದ್ದಾರೆ.
Mangalore Bantwal Youths travel by auto rickshaw for 4200 kilometers visiting temples in just 11 days. Bantwal catering youth and software engineer youth travel over auto visiting temples all around four states of India from Mangalore.
04-04-25 12:00 pm
Bangalore Correspondent
MLC Vishwanath, Siddaramaiah: ಫ್ರೀ ಬಸ್ ಕೊಟ್ಟ...
04-04-25 10:28 am
Mandya Mysuru Bangalore Accident, KSRTC, Car:...
03-04-25 09:44 pm
Hubballi student suicide attempt: ಯುವತಿಯ ಖಾಸಗ...
02-04-25 10:48 pm
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
04-04-25 12:44 pm
HK News Desk
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
04-04-25 01:39 pm
Mangalore Correspondent
Mangalore Police, Inspector Balakrishna: ಪ್ರಕ...
03-04-25 10:14 pm
Mangalore Court, Lawyers Protest, Judge: ಜಡ್ಜ...
03-04-25 04:04 pm
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
03-04-25 05:01 pm
HK News Desk
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm