ಬ್ರೇಕಿಂಗ್ ನ್ಯೂಸ್
07-12-20 01:43 pm Mangalore Correspondent ಕರಾವಳಿ
ಮಂಗಳೂರು, ಡಿಸೆಂಬರ್, 7: NCTE ಮಾನದಂಡ ನೆಪದಲ್ಲಿ ಸ್ಥಗಿತಗೊಳಿಸಲು ಉದ್ದೇಶಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ವೃತ್ತಿಪರ ಶಿಕ್ಷಣ (B.P.Ed) ಕೋರ್ಸ್ ಅನ್ನು ಕ್ರೀಡಾ ಪ್ರೇಮಿಗಳ ಒಕ್ಕೊರಳ ಅಭಿಯಾನದ ಫಲವಾಗಿ ಮುಂದುವರಿಸಲು ಅನುಮೋದನೆ ದೊರೆತಿದ್ದು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮಂಗಳೂರು ವಿವಿಯಲ್ಲಿ ಬಡ ಕ್ರೀಡಾಪಟುಗಳ ವೃತ್ತಿ ಬದುಕಿಗೆ ಆಶಾಕಿರಣವಾಗಿರುವ B.P.Ed ಕೋರ್ಸ್ ಅನ್ನು NCTE ಮಾನದಂಡದ ಕಾರಣವೊಡ್ಡಿ ವಿವಿಯ ಅಧಿಕಾರಿಗಳು ಸ್ಥಗಿತಗೊಳಿಸಲು ಮುಂದಾಗಿದ್ದರು. ಇದರಿಂದ ದ.ಕನ್ನಡ, ಕೊಡಗು, ಉಡುಪಿ ಜಿಲ್ಲೆಗಳ ಬಡ ವಿದ್ಯಾರ್ಥಿಗಳು ಖಾಸಗಿ ಕಾಲೇಜಿನಲ್ಲಿ ಸುಮಾರು ಎರಡೂವರೆ ಲಕ್ಷ ರೂಪಾಯಿ ವ್ಯಯಿಸಿ ವೃತ್ತಿಪರ ಶಿಕ್ಷಣ ಕಲಿಯುವ ಅನಿವಾರ್ಯತೆ ಎದುರಾಗಿತ್ತು. ಈ ವಿಚಾರ ಅರಿತ ಅವಿಭಜಿತ ದ.ಕನ್ನಡ, ಉಡುಪಿ ಜಿಲ್ಲೆಯ ಕ್ರೀಡಾ ಪ್ರೇಮಿಗಳು ಅಭಿಯಾನ ನಡೆಸಿದ್ದರು.
ವಿ.ವಿ ಉಪ ಕುಲಪತಿ ಸುಬ್ರಮಣ್ಯ ಯಡಿಪಡಿತ್ತಾಯ, ಕ್ಷೇತ್ರದ ಶಾಸಕ ಯು.ಟಿ.ಖಾದರ್, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಯಾವುದೇ ಕಾರಣಕ್ಕೂ ವಿ.ವಿ.ಯಲ್ಲಿ B.P.Ed ಕೋರ್ಸ್ ನಿಲ್ಲಿಸಬಾರದೆಂದು ಒತ್ತಾಯಿಸಿದ್ದರು.
ಉಳ್ಳಾಲ ಕ್ಷೇತ್ರದ ಶಾಸಕ ಯು.ಟಿ. ಖಾದರ್, ವಿಶೇಷ ಮುತುವರ್ಜಿ ವಹಿಸಿ ಈ ಬಗ್ಗೆ ವಿವಿ ಉಪ ಕುಲಪತಿಗಳಲ್ಲಿ ಚರ್ಚಿಸಿದರ ಫಲವಾಗಿ ವಿ.ವಿ ಆಡಳಿತವು ಇದೀಗ ಮತ್ತೆ ದೈಹಿಕ ಶಿಕ್ಷಣ ಕೋರ್ಸನ್ನು ಆರಂಭಿಸಲು ಮುಂದಾಗಿರುವುದು ಕ್ರೀಡಾಭಿಮಾನಿಗಳು, ಬಡ ಕ್ರೀಡಾಪಟುಗಳಿಗೆ ಸಂತಸ ತಂದಿದೆ.
ವಿ.ವಿ ಯಲ್ಲಿ ವೃತ್ತಿಪರ ದೈಹಿಕ ಶಿಕ್ಷಣ(B.P.Ed) ಕೋರ್ಸನ್ನು ಮತ್ತೆ ಪ್ರಾರಂಭಿಸಲು ಶ್ರಮಿಸಿದ ಕ್ರೀಡಾಭಿಮಾನಿಗಳು ಮತ್ತು ಉಳ್ಳಾಲ ಶಾಸಕ ಯು.ಟಿ. ಖಾದರ್ ಅವರನ್ನು ಕಾಪಿಕಾಡು ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ ಸ್ಥಾಪಕಾಧ್ಯಕ್ಷರಾದ ಗೋಪಿನಾಥ್ ಕಾಪಿಕಾಡ್ ಅವರು ಪ್ರಶಂಸಿದ್ದಾರೆ. ಹೆಡ್ ಲೈನ್ ಕರ್ನಾಟಕ ವೆಬ್ ನಲ್ಲಿ ಇದರ ಬಗ್ಗೆ ಮೊಟ್ಟಮೊದಲಿಗೆ ಸುದ್ದಿ ಮಾಡಿ ಗಮನಸೆಳೆಯಲಾಗಿತ್ತು.
ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗವು ಶೈಕ್ಷಣಿಕ ವರ್ಷ 2020-21ನೇ ಸಾಲಿನ ಬಿ.ಪಿ.ಎಡ್ (B.P.Ed) ಪದವಿ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. (ಸಾಮಾನ್ಯ ವರ್ಗ ಹಾಗೂ ಪಾವತಿ ವರ್ಗ), ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 14 -12 -2020 ಆಗಿರುತ್ತದೆ.
ಇದನ್ನೂ ಓದಿ: ಮಂಗಳೂರು ವಿವಿಯಲ್ಲಿ ಮತ್ತೆ ಎಡವಟ್ಟು; ಬಿಪಿಎಡ್ ಕೋರ್ಸ್ ಮುಚ್ಚಲು ಕಸರತ್ತು!
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm