ಬ್ರೇಕಿಂಗ್ ನ್ಯೂಸ್
07-12-20 01:03 pm Mangalore Correspondent ಕರಾವಳಿ
ಮಂಗಳೂರು, ಡಿ.7 : ಕೊರೊನಾ ಬಳಿಕ ನಿಂತು ಹೋಗಿದ್ದ ಮಂಗಳೂರು- ಬೆಂಗಳೂರು ನಡುವಿನ ನಡುವೆ ಸ್ಪೇಷಲ್ ಎಕ್ಸ್ಪ್ರೆಸ್ ರೈಲು ಸೇವೆ ಮತ್ತೆ ಆರಂಭಗೊಂಡಿದೆ.
ಈ ರೈಲು ವಾರದಲ್ಲಿ ನಾಲ್ಕು ದಿನಗಳ ಕಾಲ ಪ್ರಯಾಣಿಕರಿಗೆ ಸೇವೆ ನೀಡಲಿವೆ. ಬೆಂಗಳೂರು- ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ (06515) ರೈಲು ಬೆಂಗಳೂರು ರೈಲು ನಿಲ್ದಾಣದಿಂದ ಪ್ರತೀ ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಪ್ರಯಾಣ ಬೆಳೆಸಲಿದೆ. ಈ ರೈಲು ಸೇವೆಯು ಡಿ.8ರಿಂದ 24ರವರೆಗೆ ಸಾರ್ವಜನಿಕ ಸೇವೆಗೆ ಮುಕ್ತವಾಗಿ ಸಿಗಲಿದೆ.

ಇದೇ ವೇಳೆ, ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಹೊರಡುವ ಸ್ಪೇಷಲ್ ಎಕ್ಸ್ಪ್ರೆಸ್ ರೈಲು ರಾತ್ರಿ 10:30ಕ್ಕೆ ಪ್ರಯಾಣ ಆರಂಭಿಸಲಿದ್ದು, ಯಶವಂತಪುರ (10:40), ಕುಣಿಗಲ್ (11:39), ಬಿ.ಜಿ. ನಗರ (12:04), ಶ್ರವಣ ಬೆಳಗೊಳ (12:29), ಚೆನ್ನರಾಯಪಟ್ಟಣ (12:39), ಹಾಸನ (1:40), ಸಕಲೇಶಪುರ (2:40), ಸುಬ್ರಹ್ಮಣ್ಯ (5:35), ಕಬಕ ಪುತ್ತೂರು (6:23), ಬಂಟ್ವಾಳ (6:53), ಮಂಗಳೂರು ಜಂಕ್ಷನ್ (7:30), ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ಬೆಳಗ್ಗೆ 8:35ಕ್ಕೆ ತಲುಪಲಿದೆ.
ಮಂಗಳೂರು ಸೆಂಟ್ರಲ್ನಿಂದ ಬೆಂಗಳೂರಿಗೆ ಹೊರಡುವ ರೈಲು (06516) ಕೂಡ ನಾಲ್ಕು ದಿನಗಳ ಕಾಲ ಸೇವೆ ನೀಡಲಿದೆ. ಮಂಗಳವಾರ, ಬುಧವಾರ, ಶುಕ್ರವಾರ, ರವಿವಾರ ಈ ರೈಲು ಓಡಾಡಲಿದೆ. ಡಿ.9ರಿಂದ 25ರವರೆಗೆ ಈ ವಿಶೇಷ ರೈಲಿನ ಸೇವೆ ಲಭ್ಯವಾಗಲಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಹೊರಡುವ ರೈಲು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ರಾತ್ರಿ 7 ಗಂಟೆಗೆ ಪ್ರಯಾಣ ಆರಂಭಿಸಲಿದೆ. ಅಲ್ಲಿಂದ ಮಂಗಳೂರು ಜಂಕ್ಷನ್ (8:23), ಬಂಟ್ವಾಳ (8:54), ಕಬಕ ಪುತ್ತೂರು (9:19), ಸುಬ್ರಹ್ಮಣ್ಯ (10:10) ಸಕಲೇಶಪುರ (1:45), ಹಾಸನ (2:55), ಚೆನ್ನರಾಯಪಟ್ಟಣ (3:44), ಬಿ.ಜಿ.ನಗರ (4:29), ಕುಣಿಗಲ್ (4:59), ಯಶವಂತಪುರ (6:28), ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣವನ್ನು ಬೆಳಗ್ಗೆ 7 ಗಂಟೆಗೆ ತಲುಪಲಿದೆ.
ಸ್ಪೇಷಲ್ ಎಕ್ಸ್ಪ್ರೆಸ್ ರೈಲು ಸೇವೆ ನೀಡುವ ರೈಲುಗಳು ಒಂದು ಎಸಿ 2-ಟೈರ್ ಕೋಚ್, ಒಂದು ಎಸಿ 3-ಟೈರ್ ಕೋಚ್, ಏಳು ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚೆಸ್, ನಾಲ್ಕು ಜನರಲ್ ಸೆಕೆಂಡ್ ಕ್ಲಾಸ್ ಕೋಚೆಸ್ ಮತ್ತು ಎರಡು ಸೆಕೆಂಡ್ ಕ್ಲಾಸ್ ಕೋಚೆಸ್, ಜೊತೆಗೆ ಲಗೇಜ್ ಬೋಗಿಯನ್ನು ಒಳಗೊಂಡಿರಲಿವೆ ಎಂದು ಭಾರತೀಯ ನೈರುತ್ಯ ರೈಲ್ವೆಯ ಪಾಲಕ್ಕಾಡ್ ವಿಭಾಗದ ಪ್ರಕಟನೆ ತಿಳಿಸಿದೆ.
Mangalore - Bangalore Train services that were halted due to Coronavirus Lockdown is now going to resume from December 8, 2020.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am