ಬ್ರೇಕಿಂಗ್ ನ್ಯೂಸ್
10-07-24 07:22 pm Mangalore Correspondent ಕರಾವಳಿ
ಮಂಗಳೂರು, ಜುಲೈ 10: ಕೋಣಾಜೆ ಕೆಎಸ್ ಆರ್ ಪಿ 7ನೇ ಬೆಟಾಲಿಯನ್ನಲ್ಲಿ ಭ್ರಷ್ಟಾಚಾರಕ್ಕೆ ಹೆಸರಾಗಿದ್ದ ಇನ್ಸ್ ಪೆಕ್ಟರ್ ಮೊಹಮ್ಮದ್ ಹಾರೀಸ್ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮೀಸಲು ಪೊಲೀಸ್ ಪಡೆಯಲ್ಲಿ ಕಾನ್ಸ್ ಟೇಬಲ್ ಆಗಿರುವ ವ್ಯಕ್ತಿಯೊಬ್ಬರಲ್ಲಿ ಗೆಸ್ಟ್ ಹೌಸ್ ಡ್ಯೂಟಿ ಹಾಕಬೇಕಿದ್ದರೆ ಪ್ರತಿ ತಿಂಗಳು 6 ಸಾವಿರ ರೂ. ಹಣ ನೀಡಬೇಕೆಂದು ಇನ್ಸ್ ಪೆಕ್ಟರ್ ಹಾರೀಸ್ ಬೇಡಿಕೆ ಇಟ್ಟಿದ್ದ. ಏಳನೇ ಬೆಟಾಲಿಯನ್ನಿನ ಅತಿಥಿ ಗೃಹದ ನಿರ್ವಾಹಕರನಾಗಿ ಕರ್ತವ್ಯಕ್ಕೆ ಹಾಕಿದ್ದಕ್ಕಾಗಿ ಈ ವ್ಯಕ್ತಿ ಮೊದಲಿಗೆ 20 ಸಾವಿರ ಕೊಟ್ಟಿದ್ದು, ಆನಂತರ, ಪ್ರತಿ ತಿಂಗಳು 6 ಸಾವಿರದಂತೆ ಕೊಡುತ್ತಾ ಬಂದಿದ್ದರು. ಎಂಟು ತಿಂಗಳಿನಿಂದ ಸುಮಾರು 50 ಸಾವಿರ ರೂಪಾಯಿ ಲಂಚದ ರೂಪದಲ್ಲಿ ಇನ್ಸ್ ಪೆಕ್ಟರ್ ಗೆ ನೀಡಿದ್ದರು.
ಎಪ್ರಿಲ್ ತಿಂಗಳ ಬಳಿಕ ತಂದೆಯ ಅನಾರೋಗ್ಯದಿಂದಾಗಿ ಪ್ರತಿ ತಿಂಗಳು ನೀಡಬೇಕಿದ್ದ ಮೊತ್ತವನ್ನು ಹಾರೀಸ್ ಗೆ ನೀಡಿರಲಿಲ್ಲ. ಇದರಿಂದ ಇನ್ಸ್ ಪೆಕ್ಟರ್ ಮೊಹಮ್ಮದ್ ಹಾರೀಸ್ ಮೂರು ತಿಂಗಳ ಬಾಕಿ 18 ಸಾವಿರ ನೀಡಬೇಕು, ಇಲ್ಲದಿದ್ದರೆ ಡ್ಯೂಟಿ ಬದಲಾಯಿಸುತ್ತೇನೆ ಎಂದು ಬೆದರಿಸಿದ್ದ. ಈ ಬಗ್ಗೆ ಸಂತ್ರಸ್ತ ವ್ಯಕ್ತಿ ಮಂಗಳೂರಿನ ಲೋಕಾಯುಕ್ತ ತಂಡಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ಅಧಿಕಾರಿಗಳ ಸೂಚನೆಯಂತೆ ಪೊಲೀಸ್ ಕಾನ್ಸ್ ಟೇಬಲ್ 18 ಸಾವಿರ ಹಣವನ್ನು ನೀಡುತ್ತಿದ್ದಾಗಲೇ ಆರೋಪಿ ಇನ್ಸ್ ಪೆಕ್ಟರ್ ಮೊಹಮ್ಮದ್ ಹಾರೀಸ್ ತಗ್ಲಾಕ್ಕೊಂಡಿದ್ದಾನೆ. ಲೋಕಾಯುಕ್ತ ಎಸ್ಪಿ ಎಂ.ಎ.ನಟರಾಜ್, ಡಿವೈಎಸ್ಪಿಗಳಾದ ಗಾನ ಪಿ. ಕುಮಾರ್, ಚೆಲುವರಾಜು, ಇನ್ಸ್ ಪೆಕ್ಟರ್ ಗಳಾದ ಅಮಾನುಲ್ಲಾ, ಸುರೇಶ್ ಕುಮಾರ್, ಚಂದ್ರಶೇಖರ್ ಸಿ.ಎಲ್ ಕಾರ್ಯಾಚರಣೆ ನಡೆಸಿದ್ದು, ತಮ್ಮದೇ ಬಳಗದ ಲಂಚಕೋರ ಇನ್ಸ್ ಪೆಕ್ಟರನ್ನು ಬಲೆಗೆ ಕೆಡವಿದ್ದಾರೆ.
ಮೊಹಮ್ಮದ್ ಹಾರೀಸ್ ವಿರುದ್ಧ ಹಿಂದಿನಿಂದಲೂ ಬಹಳಷ್ಟು ಆರೋಪಗಳು ಕೇಳಿಬಂದಿದ್ದು ಮೀಸಲು ಪಡೆಯ ಪೇದೆಗಳು ಹಲವು ಬಾರಿ ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ವರ್ಷದ ಹಿಂದೆ ಪೇದೆಗಳನ್ನು ಟಾಯ್ಲೆಟ್ ಗುಂಡಿ ಕ್ಲೀನ್ ಮಾಡುವುದಕ್ಕೂ ಬಳಸಿಕೊಂಡಿದ್ದ ಆರೋಪ ಕೇಳಿಬಂದಿತ್ತು. ಹಿಂದುಳಿದ ವರ್ಗದ ಪೇದೆಗಳನ್ನು ಹಿರಿಯ ಅಧಿಕಾರಿಗಳು ಹೀನಾಯವಾಗಿ ನಡೆಸಿಕೊಳ್ಳುವುದೂ ನಡೆದಿತ್ತು. ಹಿರಿಯ ಅಧಿಕಾರಿಗಳು ಹಣ ಪಡೆದು ಕೆಲವು ಪೇದೆಗಳಿಗೆ ಎಷ್ಟು ಬೇಕಾದರೂ ರಜೆ ನೀಡುತ್ತಿದ್ದ ಆರೋಪಗಳೂ ಇದ್ದವು. ಇದೀಗ ಒಬ್ಬ ಭ್ರಷ್ಟ ತಗ್ಲಾಕ್ಕೊಂಡಿದ್ದು ಬಹಳಷ್ಟು ತಿಮಿಂಗಿಲಗಳು ಅಲ್ಲಿ ಝಂಡಾ ಹೂಡಿರುವ ಬಗ್ಗೆ ಆರೋಪಗಳಿವೆ.
Mangalore KSRP inspector Mohammed Harris arrested by Lokayukta over bribe from staffs. Rs 6 thousand was demanded from KSRP staff for guest house duty after which he has caught red handed by the Lokayukta.
26-08-25 02:04 pm
Bangalore Correspondent
SIT Issues Notice, Sujatha Bhat: ಸುಳ್ಳಜ್ಜಿ ಸು...
25-08-25 10:55 pm
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
26-08-25 10:36 am
Mangalore Correspondent
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am