ಬ್ರೇಕಿಂಗ್ ನ್ಯೂಸ್
08-07-24 06:37 pm Udupi Correspondent ಕರಾವಳಿ
ಉಡುಪಿ, ಜುಲೈ 8: ಕರಾವಳಿಯ ದಕ್ಷಿಣ ಕನ್ನಡ, ಉಡುಪಿಯಲ್ಲಿ ಭತ್ತದ ಗದ್ದೆಗಳೇ ಮಾಯವಾಗುತ್ತಿವೆ. ಇದ್ದ ಗದ್ದೆಗಳಲ್ಲಿ ಉತ್ತು ಬೆಳೆ ತೆಗೆಯುವುದಕ್ಕೆ ಕೃಷಿ ಕಾರ್ಮಿಕರ ಕೊರತೆಯೂ ಇದೆ. ಉಡುಪಿ ಜಿಲ್ಲೆಯ ಕೋಟ ಆಸುಪಾಸಿನಲ್ಲೀಗ ಭತ್ತದ ಗದ್ದೆಗಳಲ್ಲಿ ಒಡಿಶಾ ಮೂಲದ ಮಹಿಳೆಯರು ಭತ್ತದ ಕೃಷಿ ಕೆಲಸದಲ್ಲಿ ತೊಡಗಿಸಿದ್ದಾರೆ.
ಗದ್ದೆಗಳು ಒಂದೆಡೆ ಮರೆಯಾಗುತ್ತಿದ್ದರೂ, ಅಕ್ಕಿಗೆ ಒಂದೇ ಸಮನೆ ದರ ಏರುತ್ತಿರುವುದರಿಂದ ಹಿಂದಿನಿಂದಲೂ ಗದ್ದೆ ಬೇಸಾಯ ಮಾಡಿಕೊಂಡಿದ್ದವರು ಬಿಟ್ಟಾಕುತ್ತಿಲ್ಲ. ಸಾಂಪ್ರದಾಯಿಕ ಕೃಷಿಯಿಂದ ಲಾಭ ಇದೆಯೆಂದು ಹೇಳುವವರು ಕಷ್ಟದಲ್ಲೂ ಭತ್ತದ ಒಂದು ಬೆಳೆ ತೆಗೆಯುತ್ತಿದ್ದಾರೆ. ಕೃಷಿಗೆ ಯಂತ್ರಕ್ಕಿಂತಲೂ ಕೂಲಿಗೆ ಜನ ಸಿಕ್ಕರೆ, ಅವರಲ್ಲೇ ನಾಟಿ ಮಾಡಿಸುವುದು ಒಳ್ಳೆದು ಅಂತಾರೆ. ಒಡಿಶಾದ ಮಹಿಳಾ ಕಾರ್ಮಿಕರು ಉಡುಪಿ, ಮಲ್ಪೆಯಲ್ಲಿ ಮೀನಿಗೆ ಸಂಬಂಧಿಸಿದ ಕೈಗಾರಿಕೆ, ಮಾರುಕಟ್ಟೆಗಳಲ್ಲಿ ದುಡಿಯುತ್ತಿದ್ದವರು. ಮಳೆಗಾಲದಲ್ಲಿ ಮೀನುಗಾರಿಕೆಗೆ ರಜೆ ಇರುವುದರಿಂದ ಸಾಮಾನ್ಯವಾಗಿ ಇವರು ತಮ್ಮೂರಿಗೆ ತೆರಳುತ್ತಿದ್ದರು. ಈ ಬಾರಿ, ತಮ್ಮೂರಿನ ರೀತಿಯಲ್ಲೇ ಕೃಷಿ ಕಾರ್ಯದ ಕೂಲಿ ಸಿಕ್ಕಿದ್ದು, ಕೋಟ, ಸಾಲಿಗ್ರಾಮ ಕಡೆಗಳಲ್ಲಿ ಗದ್ದೆಗಳಲ್ಲಿಳಿದು ಕೆಲಸ ಮಾಡುತ್ತಿದ್ದಾರೆ.
ಒಡಿಶಾದಲ್ಲಿಯೂ ಇಲ್ಲಿನ ರೀತಿಯಲ್ಲೇ ಸಾಂಪ್ರದಾಯಿಕ ಮಾದರಿಯಲ್ಲಿ ಭತ್ತದ ಗದ್ದೆ ಮಾಡುತ್ತಾರಂತೆ. ಭತ್ತದ ನೇಜಿ ನೆಡುವ ಕೆಲಸ ಗೊತ್ತಿರುವ ಮಹಿಳೆಯರು ಇದೀಗ ಉಡುಪಿ ಜಿಲ್ಲೆಯಲ್ಲಿ ಭತ್ತದ ಕೃಷಿ ಕೆಲಸಕ್ಕೆ ಮುಂದಾಗಿದ್ದಾರೆ. ತಮ್ಮೂರಿಗೆ ಹೋಲಿಸಿದರೆ, ಇಲ್ಲಿ ಸಂಬಳವೂ ಹೆಚ್ಚಿರುವುದರಿಂದ ಹೆಚ್ಚಿನ ಮಹಿಳೆಯರು ಊರಿಗೆ ಹಿಂತಿರುಗದೆ ಭತ್ತ ನಾಟಿಯಲ್ಲಿ ತೊಡಗಿದ್ದಾರೆ. ಇಲ್ಲಿ ಕೃಷಿ ಕೆಲಸದಲ್ಲಿ ತೊಡಗಿರುವ ಇವರೆಲ್ಲ ಮೂಲತಃ ಕೃಷಿ ಕಾರ್ಮಿಕರೇ ಆಗಿರುವುದು ವಿಶೇಷ. ತಂಡದ ಮಹಿಳೆಯರು ಉಡುಪಿ ಆಸುಪಾಸಿನಲ್ಲಿ ಬಿಡಾರದಲ್ಲಿದ್ದು, ಬೆಳಗ್ಗೆ 7ರಿಂದ ಸಂಜೆ 5.30ರ ತನಕ ನಾಟಿ ಮಾಡುತ್ತಾರೆ. ಪ್ರತಿದಿನ ಎಕ್ರೆಗಟ್ಟಲೆ ಗದ್ದೆ ನಾಟಿ ಮಾಡುವ ಇವರಿಗೆ ದಿನಕ್ಕೆ 550 ರೂ. ಸಂಬಳ ನೀಡಲಾಗುತ್ತದೆ.
ತಂಡದ ಸದಸ್ಯರು ನಾಟಿಯ ನಡುವೆ ಒಡಿಸ್ಸಿ ಜಾನಪದ ಹಾಡು ಹಾಡುತ್ತ ಖುಷಿ ಪಡೆದುಕೊಳ್ಳುತ್ತಾರೆ. ಇದರಿಂದಾಗಿ ಹಿಂದೆಲ್ಲಾ ಗದ್ದೆಗಳ ಎಡೆಯಿಂದ ಕೇಳುತ್ತಿದ್ದ ಓಬೇಲೇ ಹಾಡು ಕೇಳದಾಗಿದೆ. ಒಡಿಸ್ಸಿಗಳು ಕೂಡ ಸ್ಥಳೀಯ ಕಾರ್ಮಿಕರಿಗೆ ಕಡಿಮೆ ಇಲ್ಲದಂತೆ ವೇಗವಾಗಿ ಕೆಲಸ ಮಾಡುತ್ತಾರೆ ಎನ್ನುವುದು ಇವರ ಜೊತೆಗಿರುವ ಸ್ಥಳೀಯರ ಅನಿಸಿಕೆ. ಇವರ ಜತೆಗೆ ಕೊಪ್ಪಳ, ಗಂಗಾವತಿಯಿಂದಲೂ ನೂರಾರು ಕಾರ್ಮಿಕರು ಇಲ್ಲಿಗೆ ಆಗಮಿಸಿ ಭತ್ತ ಬೇಸಾಯದ ಕೆಲಸ ನಿರ್ವಹಿಸುತ್ತಿದ್ದಾರೆ.
Paddy fields in coastal Dakshina Kannada and Udupi are disappearing. There is also a shortage of agricultural labourers to plough the existing fields. Women from Odisha are now engaged in paddy cultivation in paddy fields around Kota in Udupi district.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm