ಬ್ರೇಕಿಂಗ್ ನ್ಯೂಸ್
08-07-24 11:34 am Mangalore Correspondent ಕರಾವಳಿ
ಮಂಗಳೂರು, ಜುಲೈ.8: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಹಿಳೆಯೊಬ್ಬರು ಹೈದ್ರಾಬಾದಿನ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದು, ಆಸ್ಪತ್ರೆ ಬಿಲ್ ಭರಿಸಲಾಗದೆ ತನಗೆ ದಯಾಮರಣ ನೀಡುವಂತೆ ಕರ್ನಾಟಕ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಎರಡು ತಿಂಗಳಲ್ಲಿ ಆಸ್ಪತ್ರೆ ಬಿಲ್ 34 ಲಕ್ಷ ಆಗಿದ್ದು, ಬಿಲ್ ಪಾವತಿಗೆ ರಾಜ್ಯ ಸರಕಾರ ನೆರವಿಗೆ ಬಾರದೇ ಇದ್ದರೆ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಮಹಿಳೆಯೇ ಸ್ವತಃ ಪತ್ರ ಬರೆದಿದ್ದಾರೆ.
ಸುಳ್ಯ ತಾಲೂಕಿನ ನಾವೂರು ನಿವಾಸಿ ಧನಂಜಯ ನಾಯ್ಕ್ ಎಂಬವರ ಪುತ್ರಿ ಚಾಂದಿನಿ (33) ಎಂಬ ಮಹಿಳೆಯೇ ಅಪರೂಪದ ಕಾಯಿಲೆಗೆ ತುತ್ತಾದವರು. ಮೂರು ತಿಂಗಳಿನಿಂದ ಹೈದರಾಬಾದಿನ ಆಸ್ಪತ್ರೆಯಲ್ಲಿದ್ದು, ಬಿಲ್ ಈಗ 34 ಲಕ್ಷ ರೂ. ಆಗಿದೆ. ಹೀಗಾಗಿ ಬಿಲ್ ಪಾವತಿಸುವುದಕ್ಕೂ ಆಗದೆ, ಆಸ್ಪತ್ರೆಯಿಂದ ಬಿಡುಗಡೆ ಆಗುವುದಕ್ಕೂ ಆಗದೆ ಮಹಿಳೆ ದಿಕ್ಕೆಟ್ಟಿದ್ದಾರೆ. ಇದರಿಂದಾಗಿ ಸರಕಾರ ನೆರವಿಗೆ ಬರಬೇಕು, ಇಲ್ಲವೇ ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಮಹಿಳೆ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಕರ್ತವಾಧಿಕಾರಿ ಡಾ.ವೈಷ್ಣವಿ ಸೇರಿದಂತೆ ಆರೋಗ್ಯ ಸಚಿವರು, ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಜುಲೈ 4ರಂದು ಪತ್ರ ಇಮೇಲ್ ಮೂಲಕ ರವಾನೆಯಾಗಿದ್ದು ಅಧಿಕಾರಿಗಳು ಮಾತ್ರ ಮೀನ ಮೇಷ ಎಣಿಸುತ್ತಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಸೇರಿದ ಚಾಂದಿನಿ ಬಡ ಕುಟುಂಬದ ಮಹಿಳೆಯಾಗಿದ್ದು, ಮದುವೆಯಾಗಿ ಮೂರು ತಿಂಗಳ ಮಗುವನ್ನು ಹೊಂದಿದ್ದಾಗಲೇ ಅಪರೂಪದ ಕಾಯಿಲೆ ಎದುರಾಗಿತ್ತು. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿದ್ದಾಗಲೇ ಈ ಕಾಯಿಲೆಯನ್ನು ವೈದ್ಯರು ಗುರುತಿಸಿದ್ದು, Hyper IGE Medicated Cell activation syndrome, severe allergic reaction known as Anaphylaxis ಎಂದು ಹೇಳಿದ್ದರು. ಈ ಕಾಯಿಲೆಗೆ ಮಂಗಳೂರಿನಲ್ಲಿ ಚಿಕಿತ್ಸೆ ಇಲ್ಲ, ಬೆಂಗಳೂರು ಅಥವಾ ಹೈದ್ರಾಬಾದ್ ಹೋಗಬೇಕೆಂದು ಸೂಚಿಸಿದ್ದರು. ಅದರಂತೆ, ಬೆಂಗಳೂರಿನ ಹಲವು ಆಸ್ಪತ್ರೆಗಳಿಗೆ ಅಲೆದಾಡಿ ಆರೋಗ್ಯ ಇಲಾಖೆಯ ಗಮನಕ್ಕೆ ತಂದರೂ, ಚಿಕಿತ್ಸೆ ಲಭಿಸಿರಲಿಲ್ಲ. ಆನಂತರ, ಮಂಗಳೂರಿನ ದಾರಿ ಎನ್ನುವ ಸ್ವಯಂಸೇವಾ ಸಂಸ್ಥೆಯೊಂದರ ನೆರವಿನಿಂದ ಹೈದ್ರಾಬಾದಿನ ಆಸ್ಪತ್ರೆಗೆ ದಾಖಲಾಗಿದ್ದರು.
ಅಷ್ಟರಲ್ಲೇ ಆರೋಗ್ಯ ಇಲಾಖೆಯಿಂದ ಬೆಂಗಳೂರಿನ ನಾರಾಯಣ ಹೃದಯಾಲಯ ಅಥವಾ ಕಿದ್ವಾಯಿ ಆಸ್ಪತ್ರೆಗೆ ಸೇರಿಕೊಳ್ಳುವಂತೆ ಸೂಚನೆ ಲಭಿಸಿತ್ತು. ಆದರೆ, ಅದಕ್ಕೂ ಮೊದಲೇ ಹೈದ್ರಾಬಾದ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದುದರಿಂದ ಅಲ್ಲಿಂದ ಮರಳಿರಲಿಲ್ಲ. ಇದೀಗ ಆಸ್ಪತ್ರೆ ಬಿಲ್ ಕಂಡು ಇಡೀ ಕುಟುಂಬ ದಿಕ್ಕೆಟ್ಟಿದ್ದು, ಕರ್ನಾಟಕ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಚಿಕಿತ್ಸಾ ವೆಚ್ಚ ಪಾವತಿ ಮಾಡಲಾಗದೆ ಮುಂದಿನ ಚಿಕಿತ್ಸೆಗಾಗಿ ಸರಕಾರದ ಮತ್ತು ದಾನಿಗಳ ಮೊರೆ ಹೋಗಿದ್ದಾರೆ. ಸರಕಾರ ನೆರವು ನೀಡದಿದ್ದರೆ ದಯಾಮರಣ ಕರುಣಿಸಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮಹಿಳೆಯ ಪತ್ರದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಗಮನ ವಹಿಸಿದ್ದು, ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಕ್ಕೆ ಹೋಗಬೇಡಿ, ನಿಮ್ಮ ಆರೋಗ್ಯದ ಬಗ್ಗೆ ನಾವು ಇಲಾಖೆಯ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಎಂದು ಹಿಂಬರಹ ನೀಡಿದ್ದಾರೆ. ಜೂನ್ 21ರಂದು ಡಿಎಚ್ಓ ಡಾ.ಎಚ್.ಆರ್ ತಿಮ್ಮಯ್ಯ ಈ ಪತ್ರ ಬರೆದಿದ್ದು, ಅದಾಗಿ 20 ದಿನ ಕಳೆದರೂ ರಾಜ್ಯ ಆರೋಗ್ಯ ಇಲಾಖೆಯಿಂದ ಯಾವುದೇ ಸ್ಪಂದನೆ ದೊರಕಿಲ್ಲ. ಇದರಿಂದ ರೋಸಿ ಹೋದ ಸಂತ್ರಸ್ತ ಮಹಿಳೆ ತನಗೆ ದಯಾಮರಣ ನೀಡುವಂತೆ ಕರ್ನಾಟಕ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ರಾಜ್ಯದ ಆರೋಗ್ಯ ಸಚಿವರು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದು, ಮಹಿಳೆಯ ನೆರವಿಗೆ ಬರಬೇಕು. ಸಂವಿಧಾನದ ಆರ್ಟಿಕಲ್ 21ರ ಪ್ರಕಾರ, ಜೀವಿಸುವ ಹಾಗೂ ಬದುಕುವ ಹಕ್ಕು ಇದೆ. ಇದರ ಪ್ರಕಾರ ಸರಕಾರ ದಿಕ್ಕೆಟ್ಟು ಹೋಗಿರುವ ಮಹಿಳೆಯ ಕುಟುಂಬಕ್ಕೆ ಆಸರೆಯಾಗಬೇಕು. ಪತ್ರ ಬರೆದು ನಾಲ್ಕು ದಿನ ಕಳೆದರೂ, ಆರೋಗ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದಾರಿ ಸಂಘಟನೆಯ ಸಂಚಾಲಕಿ ಯಶೋಧಾ ಕೋಟ್ಯಾನ್ ಹೇಳುತ್ತಾರೆ. ಚಾಂದಿನಿ ಸುಳ್ಯದ ಮಹಿಳೆಯಾಗಿರುವುದರಿಂದ ಅಲ್ಲಿನ ಶಾಸಕಿಯೂ ಜವಾಬ್ದಾರಿ ಹೊತ್ತುಕೊಂಡು ತಮ್ಮದೇ ಪರಿಶಿಷ್ಟ ಪಂಗಡದ ಮಹಿಳೆಯ ನೆರವಿಗೆ ಬರಬೇಕಾಗಿದೆ ಎಂದವರು ಹೇಳಿದ್ದಾರೆ.
Mangalore Woman form Sullia stuck at Hyderabad hospital over due of 34 lakh bill amount for treatment, seeks help of Karnataka government. Chandini (33), daughter of Dhananjaya Naik, a resident of Navur in Sullia taluk, has contracted a rare disease. She has been in hospital in Hyderabad for three months and the bill is now Rs 34 lakh. Therefore, the woman is not able to pay the bill and is not able to be discharged from the hospital.
09-04-25 09:31 pm
HK News Desk
Vijayapura accident, Death: ಯಮನಂತೆ ಬಂದ ಲಾರಿ ;...
09-04-25 09:21 pm
ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಗಂಭೀರ ಆರೋಪ...
09-04-25 06:21 pm
Kukke Subrahmanya, New Train Service, Ministe...
09-04-25 04:05 pm
Karwar Sp Narayana, Bhatkal News: ಭಟ್ಕಳ ; ವಿಚ...
09-04-25 11:25 am
10-04-25 01:25 pm
HK News Desk
ಪಿಯುಸಿ ಹುಡುಗನ ವರಿಸಿದ ಮೂರು ಮಕ್ಕಳ ತಾಯಿ ; ಇಸ್ಲಾಂ...
10-04-25 11:30 am
Tahawwur Rana, India: ಮುಂಬೈ ದಾಳಿಯ ಮಾಸ್ಟರ್ ಮೈಂ...
09-04-25 04:07 pm
ಡೊನಾಲ್ಡ್ ಟ್ರಂಪ್ ಸುಂಕ ಬರೆಗೆ ಜಗತ್ತು ತಲ್ಲಣ ; ಕೋವ...
07-04-25 10:53 pm
ರಾಜ್ಯದ ಬಳಿಕ ಕೇಂದ್ರ ಸರ್ಕಾರದಿಂದಲೂ ಜನರಿಗೆ ಬೆಲೆ ಏ...
07-04-25 10:01 pm
09-04-25 10:57 pm
Mangalore Correspondent
Mangalore BJP Janakrosha Rally, Protest: ಕರ್ನ...
09-04-25 10:23 pm
Kpt Accident, Mangalore: ಕೆಪಿಟಿ ಬಳಿ ಭೀಕರ ಅಪಘಾ...
08-04-25 08:58 pm
PUC Results 2025, Mangalore Udupi topper: ಪಿಯ...
08-04-25 03:00 pm
Praveen Nettaru, Shafi Bellare, SDPI, Mangalo...
07-04-25 07:01 pm
10-04-25 02:57 pm
Mangalore Correspondent
ಸಾಮೂಹಿಕ ವಿವಾಹ ಹೆಸರಲ್ಲಿ ಬಡ ಯುವತಿಯರ ಮಾರಾಟ ಜಾಲ ;...
09-04-25 11:17 pm
Kalaburagi ATM Robbery: ಬೀದರ್ ದರೋಡೆ ಬೆನ್ನಲ್...
09-04-25 08:15 pm
Mangalore Gold smuggling, Crime, CCB: ಇಬ್ಬರು...
08-04-25 11:04 pm
Fake Note, Dandeli: ದಾಂಡೇಲಿ ; ಖಾಲಿ ಮನೆಯಲ್ಲಿ 1...
08-04-25 10:01 pm