ಬ್ರೇಕಿಂಗ್ ನ್ಯೂಸ್
06-07-24 07:40 pm Mangalore Correspondent ಕರಾವಳಿ
ಮಂಗಳೂರು, ಜುಲೈ.6: ಭಾರೀ ಜನವಿರೋಧ ಕೇಳಿಬಂದು ಪ್ರತಿಭಟನೆ, ಧರಣಿ, ಹೋರಾಟದ ಬಳಿಕ ಅಕ್ರಮವಾಗಿ ನಡೆಸುತ್ತಿದ್ದ ಸುರತ್ಕಲ್ ಟೋಲ್ ಗೇಟನ್ನು 20222ರ ಡಿಸೆಂಬರ್ 1ರಂದು ರದ್ದುಪಡಿಸಲಾಗಿತ್ತು. ಅಂದು ಟೋಲ್ ಗೇಟ್ ರದ್ದಾಗಲು ಕಾರಣವಾಗಿದ್ದು ಜನರು ಪಕ್ಷ ಭೇದ ಇಲ್ಲದೆ ಪ್ರತಿಭಟನೆ ನಡೆಸಿದ್ದು ಅನ್ನುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ಆ ಟೋಲ್ ಗೇಟ್ ರದ್ದಾಗುವಂತೆ ಹೋರಾಟ ನಡೆಸಿದ್ದ ಪ್ರತಿಭಟನಾಕಾರರು ಮಾತ್ರ ಪೊಲೀಸ್ ಕೇಸು ದಾಖಲಾಗಿ ಕೋರ್ಟಿಗೆ ಅಲೆದಾಡುವ ಸ್ಥಿತಿಯಾಗಿದೆ.
2022ರ ಅಕ್ಟೋಬರ್ 18ರಂದು ಪೊಲೀಸರ ಸರ್ಪಗಾವಲು ಭೇದಿಸಿ ಸಾವಿರಾರು ಪ್ರತಿಭಟನಾಕಾರರು ಟೋಲ್ ಗೇಟ್ ನುಗ್ಗಿದ್ದರು. ಟೋಲ್ ಸಂಗ್ರಹಕ್ಕಾಗಿ ಅಡ್ಡ ಇರಿಸಿದ್ದ ಕಂಬಗಳನ್ನು, ಟೋಲ್ ಬೂತ್ ಗಳನ್ನು ಒಡೆದು ಹಾಕಿದ್ದಲ್ಲದೆ, ಅದರ ಮೇಲೇರಿ ಆಕ್ರೋಶ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಮುಖಂಡ ಮಿಥುನ್ ರೈ ಪೊಲೀಸರನ್ನು ಲೆಕ್ಕಿಸದೆ ಸ್ವತಃ ಟೋಲ್ ಬೂತ್ ಮೇಲೇರಿ ಕಪ್ಪು ಬಾವುಟ ಬೀಸಿದ್ದರು. ಮುನೀರ್ ಕಾಟಿಪಳ್ಳ, ಎಂಜಿ ಹೆಗ್ಡೆ, ಪ್ರತಿಭಾ ಕುಳಾಯಿ ಹೀಗೆ ಹತ್ತಾರು ಮುಖಂಡರ ನೇತೃತ್ವದಲ್ಲಿ ನೂರಾರು ಜನರು ಟೋಲ್ ಗೇಟ್ ವಿರುದ್ಧ ಬೀದಿಗಿಳಿದಿದ್ದರು.
ಅಂದಿನ ಪೊಲೀಸ್ ಕಮಿಷನರ್ ಶಶಿಕುಮಾರ್, 144 ಸೆಕ್ಷನ್ ಜಾರಿಗೊಳಿಸಿದ್ದರೂ ಅದನ್ನು ಲೆಕ್ಕಿಸದೆ ರಸ್ತೆ ತಡೆ ಮಾಡಿದ್ದರು. ಆನಂತರ, ಹೆಚ್ಚುವರಿ ಪೊಲೀಸರು ಬಂದು ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಲ್ಲದೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ವಿವಿಧ ಆರೋಪಗಳನ್ನೊಡ್ಡಿ ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ಆನಂತರ, ಎರಡು ವಾರ ಕಾಲ ಸುರತ್ಕಲ್ ಟೋಲ್ ಗೇಟ್ ಬಳಿಯಲ್ಲೇ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷ ಮತ್ತು ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಧರಣಿಯೂ ನಡೆದಿತ್ತು. ರಸ್ತೆ ತಡೆ ಘಟನೆ ಸಂಬಂಧಿಸಿ ಸುರತ್ಕಲ್ ಪೊಲೀಸರು 101 ಮಂದಿಯ ವಿರುದ್ಧ ಚಾರ್ಜ್ ಶೀಟ್ ಹಾಕಿದ್ದರು.
ಚಾರ್ಜ್ ಶೀಟ್ ಪ್ರಕಾರ ಮಂಗಳೂರಿನ ಕೋರ್ಟಿನಲ್ಲಿ ವಿಚಾರಣೆ ಆರಂಭಗೊಂಡಿದ್ದು, ಜುಲೈ 6ರಂದು ಕೋರ್ಟಿಗೆ ಹಾಜರಾಗುವಂತೆ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಇದರಂತೆ, ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಹೆಚ್ಚಿನವರು ಶನಿವಾರ ಕೋರ್ಟಿಗೆ ಹಾಜರಾಗಿದ್ದು ನ್ಯಾಯಾಲಯದಲ್ಲಿ ಪರೇಡ್ ಮಾಡಿದ್ದಾರೆ. ಪ್ರಕರಣದಲ್ಲಿ ಆರೋಪಿಯೂ ಆಗಿರುವ ಹಿರಿಯ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಆರೋಪಿಗಳ ಪರ ಕೋರ್ಟಿನಲ್ಲಿ ವಾದಿಸುತ್ತಿದ್ದಾರೆ. ಮುನೀರ್ ಕಾಟಿಪಳ್ಳ ಪ್ರಕಾರ, ಇಲ್ಲಿ ಕೇಸು ಎದುರಿಸುತ್ತಿರುವ 70 ಮಂದಿಯಷ್ಟು ಜನ ಸಾಮಾನ್ಯ ಜನರಾಗಿದ್ದು, ಅಂದು ಪ್ರತಿಭಟನೆ ಬೆಂಬಲಿಸಿ ಬಂದ ಕಾರಣಕ್ಕೆ ಪೊಲೀಸರು ಕೇಸು ಹಾಕಿದ್ದಾರಂತೆ.
ಈ ಬಗ್ಗೆ ಕೇಸು ನಡೆಸಲು ಡಿವೈಎಫ್ಐ ಸಂಘಟನೆಯಿಂದ ವಕೀಲರ ತಂಡವನ್ನು ಮಾಡಲಾಗಿದೆ. ಈ ಪೈಕಿ ವಕೀಲ ಚರಣ್ ಶೆಟ್ಟಿ ಎಂಬವರಲ್ಲಿ ಕೇಳಿದಾಗ, 93 ಮಂದಿ ಶನಿವಾರ ಕೋರ್ಟಿಗೆ ಹಾಜರಾಗಿದ್ದು ಜಾಮೀನು ಪಡೆದಿದ್ದಾರೆ. ಉಳಿದ ಏಳು ಮಂದಿ ಹಾಜರಾಗುವುದು ಬಾಕಿಯಿದೆ ಎಂದರು. ಸುರತ್ಕಲ್ ಠಾಣೆಯಲ್ಲಿ ಸೆಕ್ಷನ್ 143, 147, 341, 283, 149 ಪ್ರಕಾರ ಕೇಸು ದಾಖಲಾಗಿತ್ತು. ಇದೇ ವೇಳೆ, ಟೋಲ್ ಗೇಟ್ ಹೋರಾಟದ ಕಾರಣಕ್ಕೆ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಹೋರಾಟ ಸಮಿತಿ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮೂಲಕ ಸರಕಾರಕ್ಕೆ ಮನವಿ ಮಾಡಲಾಗಿದ್ದು ಕ್ರಮ ಕೈಗೊಳ್ಳುವ ಭರವಸೆ ಸಿಕ್ಕಿದೆ.
The Suratkal toll gate, which was being operated illegally, was canceled on December 1, 2022, after protests, dharnas and struggles were heard due to massive public opposition. On that day, the toll gate was canceled due to the people's support regardless of party. Mangalore Charge sheet against 101 people for blocking road against Suratkal toll gate, protestors appeared in the court
26-08-25 06:06 pm
Bangalore Correspondent
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
SIT Issues Notice, Sujatha Bhat: ಸುಳ್ಳಜ್ಜಿ ಸು...
25-08-25 10:55 pm
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
26-08-25 10:36 am
Mangalore Correspondent
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
26-08-25 05:24 pm
HK News Desk
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm