ಬ್ರೇಕಿಂಗ್ ನ್ಯೂಸ್
05-07-24 09:49 pm Mangalore Correspondent ಕರಾವಳಿ
ಮಂಗಳೂರು, ಜುಲೈ.5: ಭಾರೀ ಮಳೆಯ ನಡುವೆ ಕಟ್ಟಡ ಕಾಮಗಾರಿ ನಡೆಸುವುದಕ್ಕೆ ಅನುಮತಿ ಇಲ್ಲದಿದ್ದರೂ, ಬಲ್ಮಠದಲ್ಲಿ ಮಹಾನಗರ ಪಾಲಿಕೆಯ ನಿಮಯ ಉಲ್ಲಂಘಿಸಿ ಕಟ್ಟಡ ಕಾಮಗಾರಿ ಮುಂದುವರಿಸಲಾಗಿತ್ತು. ಮಂಗಳೂರಿನ ಪ್ರಭಾವಿ ಬಿಲ್ಡರ್ ಒಬ್ಬರ ಕಟ್ಟಡ ಅದಾಗಿದ್ದು, ಜುಲೈ 3ರಂದು ಮಧ್ಯಾಹ್ನ ಕಟ್ಟಡದ ತಳಪಾಯದ ಕೆಲಸ ಮಾಡುತ್ತಿದ್ದಾಗ ಮಣ್ಣು ಕುಸಿದು ಬಿಹಾರ ಮೂಲದ ಕಾರ್ಮಿಕ ಮೃತಪಟ್ಟಿದ್ದ. ಘಟನೆ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ಆನಂದ್ ಸಿ.ಎಲ್. ಅವರು ಕಾನೂನು ಪ್ರಕಾರ, ಕಟ್ಟಡದ ಪರವಾನಿಗೆಯನ್ನು ರದ್ದುಗೊಳಿಸಿ ಆದೇಶ ಮಾಡಿದ್ದರು.
ಜುಲೈ 4ರಂದು ಮಧ್ಯಾಹ್ನ ಪಾಲಿಕೆಯ ಆಯುಕ್ತರು ಬಿಲ್ಡರ್ ಅವರನ್ನು ಉದ್ದೇಶಿಸಿ ನೀವು ಪಾಲಿಕೆಯ ಸೂಚನೆಯನ್ನು ಉಲ್ಲಂಘಿಸಿದ್ದೀರಿ. ಜೂನ್ 28ರಂದು ಮಳೆಗಾಲದಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ನಡೆಸಕೂಡದು ಎಂದು ಪ್ರಕಣೆ ನೀಡಿದ್ದೆವು. ಆದರೂ ನೀವು ಕಟ್ಟಡ ಕಾಮಗಾರಿ ಮುಂದುವರಿಸಿದ್ದರಿಂದ ಕಾರ್ಮಿಕನ ಸಾವಾಗಿದೆ. ಹಾಗಾಗಿ, ಮೇ 30ರಂದು ನಿಮಗೆ ನೀಡಲಾದ ಕಟ್ಟಡ ಪರವಾನಿಗೆಯನ್ನು ಮುಂದಿನ ಆದೇಶದ ವರೆಗೆ ರದ್ದುಪಡಿಸಲಾಗುವುದು ಎಂದು ಆದೇಶ ಹೊರಡಿಸಿದ್ದರು. ವಿಶೇಷ ಅಂದ್ರೆ, ನಿವೃತ್ತ ಸೈನಿಕರೂ ಆಗಿರುವ ಆಯುಕ್ತ ಆನಂದ ಸಿ.ಎಲ್ ಆದೇಶ ಹೊರಡಿಸಿದ ಎರಡೇ ಗಂಟೆಯಲ್ಲಿ ಆಯುಕ್ತ ಹುದ್ದೆಯಿಂದಲೇ ಅವರನ್ನು ಎತ್ತಂಗಡಿ ಮಾಡಲಾಗಿದೆ. ಆ ಜಾಗಕ್ಕೆ ಈ ಹಿಂದೆ ಮಂಗಳೂರಿನಲ್ಲಿ ತಹಸೀಲ್ದಾರ್, ಸಹಾಯಕ ಕಮಿಷನರ್ ಆಗಿದ್ದ, ಕಾಂಗ್ರೆಸ್- ಬಿಜೆಪಿಯವರಿಗೆ ಹತ್ತಿರವಾಗಿದ್ದ ರವಿಚಂದ್ರ ನಾಯಕ್ ಅವರನ್ನು ತಂದು ಕೂರಿಸಲಾಗಿದೆ. ಪಾಲಿಕೆ ಆಯುಕ್ತ ಆನಂದ್ ಗೆ ಹೊಸ ಹುದ್ದೆಯನ್ನು ತೋರಿಸದೆ ಶಿಕ್ಷೆ ವಿಧಿಸಿದ್ದಾರೆ.
ಕಾರ್ಮಿಕ ಮೃತಪಟ್ಟ ಘಟನೆ ನೆಪದಲ್ಲಿ ಪಾಲಿಕೆಯ ಆಯುಕ್ತರು ದಿಟ್ಟ ಕ್ರಮವನ್ನೇ ಕೈಗೊಂಡಿದ್ದರು. ಆದರೆ ಪ್ರಭಾವಿ ಬಿಲ್ಡರ್ ಸಿಟ್ಟಿಗೆ ಮಣಿದ ರಾಜ್ಯ ಸರಕಾರ, ಲೈಸನ್ಸ್ ರದ್ದು ಮಾಡಿದ ಕಾರಣಕ್ಕಾಗಿ ಪಾಲಿಕೆ ಕಮಿಷನರನ್ನೇ ಎತ್ತಂಗಡಿ ಮಾಡಿದೆ. ಕಾರ್ಮಿಕನ ಸಾವು ಹಿನ್ನೆಲೆಯಲ್ಲಿ ಬಿಲ್ಡರ್ ಮತ್ತು ಗುತ್ತಿಗೆದಾರನ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ಮಣ್ಣು ಕುಸಿದ ಘಟನೆ ನಡೆದಾಗಂತೂ ಪಾಲಿಕೆ ಆಯುಕ್ತ ಆನಂದ್, ಖುದ್ದಾಗಿ ಕಾರ್ಮಿಕರ ಜೊತೆಗೆ ತಳಪಾಯದ ಗುಂಡಿಗೆ ಇಳಿದು ಕಾರ್ಯಾಚರಣೆಗೆ ಸಾಥ್ ನೀಡಿದ್ದರು. ಕೆಎಎಸ್ ಅಧಿಕಾರಿಯಾಗಿದ್ದು ಉಟ್ಟಿದ್ದ ಬಿಳಿ ಅಂಗಿಯಲ್ಲಿ ಮಣ್ಣಿನ ಕೊಳೆಯಾಗುತ್ತಿದ್ದರೂ, ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಕಾರ್ಮಿಕರ ಜೊತೆಗೆ ನಿಂತು ಆಯುಕ್ತರು ಕೆಲಸ ಮಾಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿತ್ತು. ಆದರೆ, ಬಿಲ್ಡರ್ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದ್ದೇ ಅವರಿಗೆ ಮುಳುವಾಯ್ತು.
ಇದೇ ವೇಳೆ, ಘಟನೆಯಲ್ಲಿ ಮೃತಪಟ್ಟ ಬಿಹಾರ ಮೂಲದ ಕಾರ್ಮಿಕ ಚಂದನ್ ಕುಮಾರ್ (30) ಕುಟುಂಬಕ್ಕೆ ಕಾರ್ಮಿಕ ಕಲ್ಯಾಣ ಇಲಾಖೆಯಿಂದ 2 ಲಕ್ಷ ರೂ. ಪರಿಹಾರದ ಚೆಕ್ ನೀಡಲಾಗಿದೆ. ಚಂದನ್ ಮಂಗಳೂರಿನಲ್ಲಿ 12 ವರ್ಷಗಳಿಂದ ಕಾರ್ಮಿಕನಾಗಿ ದುಡಿಯುತ್ತಿದ್ದರೂ, ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿರಲಿಲ್ಲ. ಹೀಗಾಗಿ ನಾಲ್ಕು ಲಕ್ಷ ಪರಿಹಾರದ ಬದಲು ಎರಡು ಲಕ್ಷ ಮಾತ್ರ ನೀಡಲಾಗಿದೆ. ಉಳಿದ ಎರಡು ಲಕ್ಷವನ್ನು ಗುತ್ತಿಗೆದಾರರು ನೀಡಲಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ.
Mangalore city corporation commissioner Anand PL transferred after he cancelled the building lisence of Rohan corporation for the death of a labourer at construction site after landslide at balmatta. Kumar and Rajkumar, 18, from Dhawani village of Rohtas district of Bihar, were waterproofing a portion of the retaining wall, at the site of the construction of Rohan Suites Studio Apartment. The two were working between the retaining wall and the mud embankment and were standing on the scaffolding placed about 40 feet from the ground. Around 12.30 p.m. there was a mudslide and the two were trapped.
17-04-25 05:01 pm
Bangalore Correspondent
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
ಒಂದನೇ ತರಗತಿಗೆ ಪ್ರವೇಶ ; ಈ ವರ್ಷಕ್ಕೆ ಮಾತ್ರ ಮಕ್ಕಳ...
16-04-25 09:07 pm
Bigg Boss Kannada, Rajath arrested: ರೀಲ್ಸ್ ಶೋ...
16-04-25 06:42 pm
16-04-25 03:54 pm
HK News Desk
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
17-04-25 11:06 pm
Mangalore Correspondent
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
Mangalore, Bantwal Accident, Melroy D’Sa: ಬಂಟ...
16-04-25 10:58 pm
Mangalore Traffic diversion, Anti Waqf bill p...
16-04-25 08:22 pm
17-04-25 09:56 pm
Mangalore Correspondent
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm
Sullia, Drugs, Mangalore, Ccb Police; ದೆಹಲಿಯಿ...
17-04-25 11:39 am
Air Hostess, ICU, Sexual Harrasment: ICU ನಲ್ಲ...
15-04-25 10:24 pm
Pastor John Jebraj Arrest: ಇಬ್ಬರು ಹೆಣ್ಮಕ್ಕಳಿಗ...
15-04-25 06:17 pm