ಬ್ರೇಕಿಂಗ್ ನ್ಯೂಸ್
24-06-24 11:12 pm Mangalore Correspondent ಕರಾವಳಿ
ಮಂಗಳೂರು, ಜೂನ್ 24: ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಪಾಲಿಕೆ ಚುನಾವಣೆಗಳಲ್ಲಿ ಜೆಡಿಎಸ್ ಜೊತೆ ಸೀಟು ಹೊಂದಾಣಿಕೆ ಇರಲಿದೆ. ಕುಮಾರಸ್ವಾಮಿಯವರು ಕೂಡ ಒಟ್ಟಾಗಿ ಕೆಲಸ ಮಾಡುವ ಅಭಿಪ್ರಾಯ ಹೊಂದಿದ್ದಾರೆ. ನಾವು ಎಲ್ಲ ಸ್ತರದಲ್ಲೂ ಮೈತ್ರಿ ಮಾಡಲಿದ್ದೇವೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿಯಿತ್ತು ನಾಣ್ಯಗಳ ತುಲಾಭಾರ ನೆರವೇರಿಸಿದ ಬಳಿಕ ಯಡಿಯೂರಪ್ಪ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯ ಜಂಜಾಟದ ಮಧ್ಯೆ ಧರ್ಮಸ್ಥಳ, ಸುಬ್ರಹ್ಮಣ್ಯ ಬಾರದೇ ತುಂಬಾ ದಿವಸ ಆಗಿತ್ತು. ದೇವರ ದರ್ಶನದ ಬಳಿಕ ನೆಮ್ಮದಿ, ಸಮಾಧಾನ ಮತ್ತು ತೃಪ್ತಿ ಇದೆ. ಈಗಿನ ಸರ್ಕಾರ ಜನಹಿತವನ್ನ ಮರೆತು ಅಭಿವೃದ್ಧಿ ಕಾರ್ಯವೆಲ್ಲ ಸ್ಥಗಿತ ಆಗಿದೆ. ಯಾವುದೋ ಗ್ಯಾರಂಟಿ ಯೋಜನೆ ಅಂತ ಹೇಳಿ ಅಭಿವೃದ್ಧಿ ಕೆಲಸ ಸ್ಥಗಿತ ಮಾಡಿದ್ದಾರೆ. ಇದರ ವಿರುದ್ದ ಮಾತನಾಡಲು ಯಾರೂ ಸಿದ್ದರಿಲ್ಲದ ವಿಚಿತ್ರವಾದ ಪರಿಸ್ಥಿತಿ ರಾಜ್ಯದಲ್ಲಿ ಇದೆ.
ಈ ಬಗ್ಗೆ ಅಧಿವೇಶನದಲ್ಲಿ ಅಂಕಿ ಅಂಶಗಳ ಮೂಲಕ ಬಿಜೆಪಿ ಸರ್ಕಾರದ ಗಮನಕ್ಕೆ ತರಲಿದೆ. ಆ ಬಳಿಕವಾದ್ರೂ ಚೇತರಿಸಿಕೊಂಡು ಅಭಿವೃದ್ಧಿ ಮಾಡಲಿ ಅಂತ ಒತ್ತಾಯಿಸ್ತೇವೆ. ಒತ್ತಾಯಕ್ಕೆ ಮಣಿಯದೇ ಇದ್ದರೆ ಮುಂದಿನ ಹೋರಾಟದ ರೂಪುರೇಷೆ ಮಾಡ್ತೇವೆ. ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಮುಂದಿನ ಹೋರಾಟದ ರೂಪುರೇಷೆ ನಿರ್ಧಾರ ಮಾಡ್ತಾರೆ.
ಎಂಎಲ್ ಸಿ ಚುನಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ, ಇದರಲ್ಲಿ ಗೊಂದಲ ಏನೂ ಇಲ್ಲ, ದೆಹಲಿಯಲ್ಲಿ ಇವೆಲ್ಲ ಫೈನಲ್ ಆಗಿರೋದು ಎಂದರು. ಸರ್ಕಾರ ಬೀಳುತ್ತಾ ಅನ್ನೋ ಪ್ರಶ್ನೆಗೆ, ಆ ಬಗ್ಗೆ ನಾನು ಏನೂ ಹೇಳಿಕೆ ಕೊಡಲು ಇಷ್ಟಪಡಲ್ಲ. ನಾನು ವಿರೋಧ ಪಕ್ಷದ ನಾಯಕನಲ್ಲ ಎಂದರು.
Former Chief Minister B.S. Yediyurappa on Sunday visited the Dharmasthala temple. During his visit, he met Dharmadhikari Dr. D. Veerendra Heggade and engaged in discussions.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 09:22 pm
Mangalore Correspondent
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm