ಬ್ರೇಕಿಂಗ್ ನ್ಯೂಸ್
14-06-24 02:58 pm Mangalore Correspondent ಕರಾವಳಿ
ಮಂಗಳೂರು, ಜೂನ್.14: ಬೋಳಿಯಾರು ಘಟನೆ ಹೆಸರಲ್ಲಿ ಇಡೀ ಜಿಲ್ಲೆಯ ಹೆಸರು ಹಾಳು ಮಾಡುತ್ತಿದ್ದಾರೆ. ಹೊರಗಿನವರು ಬಂದು ರಾಜಕೀಯ ಲಾಭಕ್ಕೆ ಯತ್ನಿಸುತ್ತಿದ್ದಾರೆ. ನಿಮ್ಮ ಇಂತಹ ಕೆಲಸದಿಂದ ಒಂದೇ ಒಂದು ಮತವನ್ನೂ ಹೆಚ್ಚು ಪಡೆಯಲು ಸಾಧ್ಯವಿಲ್ಲ. ಅಲ್ಲಿನ ಜನರೆಲ್ಲ ಒಟ್ಟಿಗಿದ್ದಾರೆ. ಹೊರಗಿನವರು ಬಂದು ಸೌಹಾರ್ದ ಕೆಡಿಸುವ ಯತ್ನ ಮಾಡುತ್ತಿದ್ದಾರೆ ಎಂದು ಉಳ್ಳಾಲ ಕ್ಷೇತ್ರದ ಶಾಸಕ, ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಟಿ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಿಮಗೆ ದೇಶಪ್ರೇಮ ಇರೋದೇ ಆಗಿದ್ದರೆ ಹೊರಗಿನವರನ್ನು ಕರೆಸಿ ರಾಜಕೀಯ ಮಾಡಬೇಡಿ. ನನ್ನನ್ನು ಸೋಲಿಸಲು ಯತ್ನಿಸಿದ ಎರಡು ಪಕ್ಷಗಳು ಸೇರಿ ಗಲಾಟೆ ನಡೆಸುತ್ತಿದ್ದಾರೆ. ದೇಶದ ಎಲ್ಲ ಕಡೆಯೂ ಭಾರತ್ ಮಾತಾಕೀ ಜೈ ಅಂತ ಹೇಳುತ್ತಾರೆ. ಅದರಲ್ಲಿ ಎರಡು ಮಾತಿಲ್ಲ. ಇಲ್ಲಿ ರಾಜಕೀಯ ಲಾಭಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಇದರಿಂದ ಒಂದು ವೋಟು ಕೂಡ ಸಿಗಲ್ಲ. ನಿಮಗೆ ಮೈನಸ್ ಅಷ್ಟೇ. ಜನರನ್ನು ಸಮಾಧಾನ ಮಾಡಲು ನೋಡುವವರು, ಸೌಹಾರ್ದ ಬಯಸುವವರು ದೇಶಪ್ರೇಮಿಗಳು. ಗಲಾಟೆ ಸೃಷ್ಟಿಸುವವರು ದೇಶದ್ರೋಹಿಗಳು ಎಂದರು.
ಬೋಳಿಯಾರಿನಲ್ಲಿ ವಿಜಯೋತ್ಸವ ಮೆರವಣಿಗೆ ಹೋದಾಗ ಯಾವುದೇ ತೊಂದರೆ ಆಗಿರಲಿಲ್ಲ. ಮೂರು ಜನ ಮತ್ತೆ ಬಂದು ಈ ರೀತಿ ಮಾಡಿದ್ದು ಇಡೀ ಜಿಲ್ಲೆಯ ಪಾಲಿಗೆ ಎಷ್ಟು ಕೆಟ್ಟ ಹೆಸರು ಬರುವಂತಾಯ್ತು. ಇವರು ಪ್ರಚೋದನೆ ಮಾಡಿದ್ದು ಸರಿಯಾ ಎಂದು ಕೇಳಬೇಕಾಗುತ್ತದೆ. ಭಾರತ್ ಮಾತಾಕೀ ಹೇಳುವುದು ನಮಗೆಲ್ಲ ಹೆಮ್ಮೆ. ಎರಡು ದಿನಗಳ ಹಿಂದೆ ಕನ್ಯಾನದಲ್ಲಿ ಇಂಥದ್ದೇ ವಿವಾದಾತ್ಮಕ ಹೇಳಿಕೆಯ ವಿಡಿಯೋ ಬಂದಿತ್ತು. ಅದು ದೊಡ್ಡ ಇಶ್ಯು ಆಗಿರಲಿಲ್ಲ. ಈಗ ಘಟನೆ ಆಗಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ, ಇದರ ಬಗ್ಗೆ ಹೊರಗಿನವರು ಯಾಕೆ ತೀರ್ಪು ಕೊಡಬೇಕು. ನಾನ್ಯಾಕೆ ತೀರ್ಪು ಕೊಡಬೇಕು. ಎರಡು ಕಡೆಯ ತಪ್ಪುಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಾರೆ. 99 ಪರ್ಸೆಂಟ್ ಒಳ್ಳೆಯವರನ್ನು ನೋಡಿಕೊಳ್ಳುವುದು ನನ್ನ ಕೆಲಸ. ಒಂದು ಪರ್ಸೆಂಟ್ ಕೆಟ್ಟ ಜನರನ್ನು ಪೊಲೀಸರು ನೋಡಿಕೊಳ್ಳುತ್ತಾರೆ. ಒಬ್ಬ ನಿರಪರಾಧಿಗೆ ತೊಂದರೆಯಾದರೆ ಶಾಸಕನಾಗಿ ಪ್ರಶ್ನೆ ಮಾಡುವುದು ನನ್ನ ಜವಾಬ್ದಾರಿ ಎಂದರು.
ಸೋಶಿಯಲ್ ಮೀಡಿಯಾದಲ್ಲಿ ಫೇಕ್ ವಾಯ್ಸ್ ಹಾಕಿ ಗೊಂದಲ ಸೃಷ್ಟಿಸುವ ವಿಚಾರಕ್ಕೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದ ಅವರು, ಇರಿತಕ್ಕೊಳಗಾದವರು ಒಳ್ಳೆಯವರಾಗಿದ್ದರೆ ನಾನು ಆಸ್ಪತ್ರೆಗೆ ಹೋಗುತ್ತಿದ್ದೆ. ಇವರು ಅಲ್ಲಿ ಸಮಸ್ಯೆ ಸೃಷ್ಟಿಸಿದವರು. ಗಲಾಟೆಗೆ ಕಾರಣರಾದವರು. ಅವರನ್ನು ನಾವು ಹೋಗಿ ನೋಡಬೇಕಾ.. ಅವರೇನು ಸಾಧನೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಒಬ್ಬ ಶಾಸಕ ಗಲಾಟೆ ಮಾಡಿದವರು ನನ್ನ ಆತ್ಮೀಯರು ಎಂದಿದ್ದಾರೆ. ನನ್ನ ಕ್ಷೇತ್ರದ ಎಲ್ಲರೂ ನನಗೆ ಆತ್ಮೀಯರು. ಅವರು ಮಾತ್ರ ಅಲ್ಲ ಎಂದು ಹೇಳಿದ ಖಾದರ್, ಇದೇ ಕಾರಣಕ್ಕೆ ಪೊಲೀಸರು ಎರಡು ಕಡೆಯೂ ಕ್ರಮ ತೆಗೆದಿದ್ದಾರೆ. ತಪ್ಪು ಮಾಡಿದವರ ಮೇಲೆ ಕೇಸು ಹಾಕಿದ್ದಾರೆ. ಇವರು ಯಾಕೆ ಗದ್ದಲ ಎಬ್ಬಿಸಬೇಕು ಎಂದು ಬಿಜೆಪಿ ನಾಯಕರ ಹೆಸರೆತ್ತದೆ ಟೀಕಿಸಿದರು.
ಹಿಂದೆ ಎಲ್ಲ ಮುಚ್ಚಿದ್ದೆ, ಮತ್ತೆ ಓಪನ್ ಮಾಡಿದ್ರು ಯಾಕೆ ?
ಅಕ್ರಮ ಚಟುವಟಿಕೆ ಹೆಚ್ಚಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಖಾದರ್, 2018 - 20ರಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದಾಗ ಮಂಗಳೂರಿನಲ್ಲಿ ಎಲ್ಲ ಸ್ಕಿಲ್ ಗೇಮ್, ಪಬ್ ಎಲ್ಲ ಬಂದ್ ಮಾಡಿದ್ದೆ. ನನ್ನ ಅಧಿಕಾರ ಹೋದಾಗ ಎಲ್ಲ ಓಪನ್ ಆಗಿತ್ತು. ಮರಳು ದಂಧೆ ಮಾಡಬಾರದು ಅಂತ ಸ್ಯಾಂಡ್ ಬಜಾರ್ ಏಪ್ ತಂದಿದ್ದೆ. ನನ್ನ ಅವಧಿಯ ಬಳಿಕ ಎಲ್ಲವೂ ಹೋಗಿಬಿಡ್ತು. ನನ್ನ ಕ್ಷೇತ್ರದಲ್ಲಿ ಒಂದೂ ಕ್ಲಬ್, ಸ್ಕಿಲ್ ಗೇಮ್ ಇಲ್ಲ. ಬೇರೆ ಶಾಸಕರು ಇದ್ದಾರಲ್ವಾ.. ರಿಕ್ರಿಯೇಶನ್ ಕ್ಲಬ್ ಅಂತ ಹೈಕೋರ್ಟ್ ಆರ್ಡರ್ ಇದೆಯೆಂದು ಹೇಳಿ ಬಂದು ಒಬ್ಬರು ಕ್ಲಬ್ ಹಾಕಿದ್ರು. 24 ಗಂಟೆ ಪೊಲೀಸ್ ಹಾಕಿದೆ, ಯಾರು ಬರ್ತಾರೆ. ಒಂದು ವಾರದಲ್ಲಿ ಕ್ಲಬ್ ಬಂದ್ ಮಾಡಿ ಹೋಗಿದ್ರು. ಶಶಿಕಾಂತ್ ಸೆಂಥಿಲ್ ಜಿಲ್ಲಾಧಿಕಾರಿ ಇದ್ದಾಗ ಮರಳುಗಾರಿಕೆಯನ್ನು ಸರಿದಾರಿಗೆ ತಂದಿದ್ದೆವು. ಈಗ ಯಾಕೆ ಮಾಡ್ತಿಲ್ಲ ಎಂದು ಕೇಳಿದರು.
Mangalore Boliyar Stabbing case, UT Khader says people from other states involved to distrub peace. The police have arrested seven more persons in connection with the stabbing of two BJP workers at Boliyar in Konaje police station limits on June 9 night.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm