ಬ್ರೇಕಿಂಗ್ ನ್ಯೂಸ್
13-06-24 10:33 pm Mangalore Correspondent ಕರಾವಳಿ
ಮಂಗಳೂರು, ಜೂನ್ 13: ಮಂಗಳೂರು ನಗರ ವ್ಯಾಪ್ತಿಯಲ್ಲಿ ಅಪಘಾತ ತಡೆಯುವ ನಿಟ್ಟಿನಲ್ಲಿ ವಾಹನಗಳ ವೇಗಕ್ಕೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ. ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಆದೇಶದ ಅನುಸಾರ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಹೆದ್ದಾರಿ, ರಾಜ್ಯ ಹೆದ್ದಾರಿ, ನಗರಸಭೆ, ಪುರಸಭೆ, ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ನಿಗದಿಗಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದರೆ, ದಂಡ ವಿಧಿಸಲು ಮಂಗಳೂರು ಪೊಲೀಸ್ ಆಯುಕ್ತರು ನಿರ್ಧರಿಸಿದ್ದಾರೆ.
ಇದಕ್ಕಾಗಿ ಮಂಗಳೂರು ವ್ಯಾಪ್ತಿಯಲ್ಲಿ ವಾಹನಗಳ ಚಾಲನೆಗೆ ಸ್ಪೀಡ್ ಲಿಮಿಟ್ ನಿಗದಿ ಮಾಡಲಾಗಿದೆ. ಪ್ರಯಾಣಿಕರನ್ನು ಕರೆದೊಯ್ಯುವ 9 ಸೀಟಿಗಿಂತ ಕಡಿಮೆ ಸಾಮರ್ಥ್ಯದ ವಾಹನಗಳು ರಾಷ್ಟ್ರೀಯ ಹೆದ್ದಾರಿ ಅಥವಾ ರಸ್ತೆ ವಿಭಜಕ ಇರುವ ರಸ್ತೆಗಳಲ್ಲಿ ಗಂಟೆಗೆ ನೂರು ಕಿಮೀ, ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯ ರಸ್ತೆಗಳಲ್ಲಿ 70 ಕಿಮೀಗಿಂತ ಹೆಚ್ಚು ವೇಗದಲ್ಲಿ ಸಂಚರಿಸುವಂತಿಲ್ಲ. ಪ್ರಯಾಣಿಕರನ್ನು ಕರೆದೊಯ್ಯುವ 9 ಸೀಟಿಗಿಂತ ಹೆಚ್ಚು ಸೀಟನ್ನು ಹೊಂದಿರುವ ಎಲ್ಲ ಮಾದರಿಯ ಬಸ್, ಟ್ರಾವೆಲರ್ ಇನ್ನಿತರ ವಾಹನಗಳು ಹೆದ್ದಾರಿಗಳಲ್ಲಿ 90 ಕಿಮೀ, ಇತರ ಕಡೆಗಳಲ್ಲಿ ಗಂಟೆಗೆ 60 ಕಿಮೀ ಹೆಚ್ಚು ವೇಗದಲ್ಲಿ ಚಲಿಸುವಂತಿಲ್ಲ.
ಎಲ್ಲಾ ತರದ ಗೂಡ್ಸ್ ವಾಹನಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ 80 ಕಿಮೀ, ಪಾಲಿಕೆ, ಪುರಸಭೆ ಇನ್ನಿತರ ಕಡೆಗಳಲ್ಲಿ 60 ಕಿಮೀ ಹೆಚ್ಚು ವೇಗದಲ್ಲಿ ಹೋಗುವಂತಿಲ್ಲ. ಮೋಟಾರ್ ಸೈಕಲ್ ಗಳು ಹೆದ್ದಾರಿಯಲ್ಲಿ 80 ಕಿಮೀ, ಇತರ ಕಡೆಗಳಲ್ಲಿ 60 ಕಿಮೀ ಹೆಚ್ಚು ವೇಗದಲ್ಲಿ ಹೋಗುವಂತಿಲ್ಲ. ತ್ರಿಚಕ್ರ ವಾಹನಗಳು ಹೆದ್ದಾರಿ, ರಾಜ್ಯ ಹೆದ್ದಾರಿ, ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯ ರಸ್ತೆಗಳಲ್ಲಿ ಗಂಟೆಗೆ 50 ಕಿಮೀ ಹೆಚ್ಚು ವೇಗದಲ್ಲಿ ಚಲಿಸುವಂತಿಲ್ಲ. ಈ ಮಿತಿಯನ್ನು ಉಲ್ಲಂಘಿಸಿದರೆ, ಮೊಬೈಲ್ ಸ್ಪೀಡ್ ರಾಡಾರ್ ಗನ್ ಮೂಲಕ ಸಂಚಾರಿ ಪೊಲೀಸರು ನಿಗಾ ವಹಿಸಲಿದ್ದು, ಅಂತಹ ವಾಹನಗಳ ಮೇಲೆ ದಂಡ ವಿಧಿಸಲಿದ್ದಾರೆ.
ಈ ಬಗ್ಗೆ ಹೆದ್ದಾರಿ ಇಲಾಖೆಯ ಅದಿಕಾರಿಗಳ ಜೊತೆಗೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಉಪ ಪೊಲೀಸ್ ಆಯುಕ್ತ ಬಿಪಿ ದಿನೇಶ್ ಕುಮಾರ್ ಸಭೆ ನಡೆಸಿದ್ದು, ಹೆದ್ದಾರಿ ಇನ್ನಿತರ ಕಡೆಗಳಲ್ಲಿ ವೇಗದ ಮಿತಿಯ ಸೂಚನಾ ಫಲಕಗಳನ್ನು ಹಾಕುವಂತೆ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಹೆದ್ದಾರಿ ಇಲಾಖೆಯ ಯೋಜನಾ ನಿರ್ದೇಶಕ ಜಾವೇದ್ ಅಬ್ದುಲ್ಲ ಅಜ್ಮಿ, ಅನಿರುದ್ಧ ಕಾಮತ್, ಪಿಡಬ್ಲ್ಯುಡಿ ಇಲಾಖೆಯ ಜೆಇ ಲಾಯಿಡ್ ಡಿಸಿಲ್ವ, ಮಂಗಳೂರು ಸ್ಮಾರ್ಟ್ ಸಿಟಿ ಎಇಇ ಮಂಜು ಕೀರ್ತಿ, ಮಹಾನಗರ ಪಾಲಿಕೆಯ ಇಇ ಜ್ಞಾನೇಶ್, ಎಇಇ ಎಂ.ಎನ್ ಶಿವಲಿಂಗಪ್ಪ, ಎಇಇ ಮಿಥುನ್ ಹಾಜರಿದ್ದರು.
The Mangaluru City Police on Thursday, June 13, urged road users to adhere to speed limits prescribed for different categories of roads as the police will use Mobile Speed Radar Guns to impose penalties for overspeeding.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm