ಬ್ರೇಕಿಂಗ್ ನ್ಯೂಸ್
12-06-24 03:52 pm Mangalore Correspondent ಕರಾವಳಿ
ಉಳ್ಳಾಲ, ಜೂ.12: ಬೋಳಿಯಾರಿನಲ್ಲಿ ನಡೆದ ವಿಜಯೋತ್ಸವದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಡ್ರಾಗರ್ ನಿಂದ ಇರಿದಿರುವುದು ಪೂರ್ವಯೋಜಿತ ಕೃತ್ಯ. ಭಾರತ್ ಮಾತಾ ಕೀ ಜೈಕಾರವನ್ನು ಹಾಕಲು ಸ್ವಾತಂತ್ರ್ಯ ಇಲ್ಲವಾದರೆ ರಾಜ್ಯದಲ್ಲಿ ತಾಲಿಬಾನಿ ಸರಕಾರ ಇದೆಯಾ..? ಸಿಎಂ ಸಿದ್ಧರಾಮಯ್ಯ ಅಂತೂ ಟಿಪ್ಪು ಮೈಮೇಲೆ ಬಂದಂತೆ ಮಾಡುತ್ತಿದ್ದಾರೆ ಎಂದು ರಾಜ್ಯ ವಿದಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಬೋಳಿಯಾರು ಚೂರಿ ಇರಿತ ಪ್ರಕರಣದಲ್ಲಿ ಗಾಯಗೊಂಡು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಂದನ್ ಮತ್ತು ಹರೀಶ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದ ಜೊತೆಗೆ ಅವರು ಮಾತನಾಡಿದರು. ಡ್ರಾಗರ್ ನಿಂದ ಬಿಜೆಪಿ ಕಾರ್ಯಕರ್ತರಿಗೆ ಇರಿದಿರುವುದನ್ನ ಗಮನಿಸಿದರೆ ಇದೊಂದು ಪೂರ್ವಯೋಜಿತ ಕೃತ್ಯ ಎಂದು ಮನದಟ್ಟಾಗುತ್ತದೆ. ತಕ್ಷಣಕ್ಕೆ ಡ್ರಾಗರ್ ನಂತಹ ಮಾರಕಾಯುಧ ಎಲ್ಲಿಂದ ಸಿಗುತ್ತೆ. ಮೊದಲೇ ಚೂರಿ ಹಿಡಿದು ಕೊಲೆಗಾಗಿ ಹೊಂಚು ಹಾಕಿರುವುದು ಇಲ್ಲಿ ಕಾಣುತ್ತದೆ.



ವಿಜಯೋತ್ಸವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಭಾರತ್ ಮಾತಾ ಕಿ ಜೈ ಅನ್ನುವ ಘೋಷಣೆ ಹಾಕಿರುವ ಸಿಸಿಟಿವಿ ಫೂಟೇಜ್ ಗಮನಿಸಿದ್ದೇನೆ. ದೇಶದಲ್ಲಿ ಎಲ್ಲಿಯೂ ಭಾರತ ಮಾತೆಗೆ ಜೈ ಅಂದಲ್ಲಿ ಚೂರಿ ಹಾಕಿದ್ದು ಕೇಳಿಲ್ಲ. ಕರ್ನಾಟಕದಲ್ಲಿ ಹಾಗೂ ಮಂಗಳೂರು, ಉಡುಪಿ ಭಾಗದಲ್ಲಿ ಭಾರತ್ ಮಾತಾ ಕಿ ಜೈ ಅಂದಲ್ಲಿ ಕೊಲೆ, ಕೊಲೆ ಯತ್ನಗಳಂತಹ ಕೃತ್ಯಗಳು ನಡೀತಿವೆ. ರಾಜ್ಯದಲ್ಲಿ ತಾಲಿಬಾನ್ ಸರಕಾರದ ಆಡಳಿತ ಇದೆ. ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದ ನಂತರವಂತೂ ಟಿಪ್ಪು ಮೈಮೇಲೆ ಬಂದಂತೆ ಆಡ್ತಾ ಇದ್ದಾರೆ. ಅವರ ನಡವಳಿಕೆಗಳೆಲ್ಲವೂ ಟಿಪ್ಪು ರೀತಿಯಲ್ಲೇ ಇದೆ. ಹಿಂದಿನ ಸಿದ್ದರಾಮಯ್ಯ ಸರಕಾರದ ಆಡಳಿತ ಅವಧಿಯಲ್ಲಿ ಬೆಂಗಳೂರಿನ ಶಿವಾಜಿನಗರದಲ್ಲೇ ಕೊಲೆಯಾಗಿತ್ತು. ಅಲ್ಲದೆ ಇಡೀ ರಾಜ್ಯದಲ್ಲೇ 30-40 ಕೊಲೆಗಳೇ ನಡೆದಿತ್ತು. ಇದೀಗ ಮತ್ತೆ ಕರ್ನಾಟಕ ರಾಜ್ಯ ಕೊಲೆಗಳಿಂದ ಖ್ಯಾತಿ ಪಡೆಯುತ್ತಿದೆ.
ನ್ಯಾಷನಲ್ ಕ್ರೈಂ ಅಂಕಿ ಅಂಶದ ಪ್ರಕಾರ ಕರ್ನಾಟಕದಲ್ಲಿ 40% ಅಪರಾಧ ಒಂದೇ ವರ್ಷದಲ್ಲಿ ಜಾಸ್ತಿಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಗೂಂಡಾಗಳಿಗೆ, ತಾಲಿಬಾನಿಗಳಿಗೆ, ಪಾಕಿಸ್ತಾನದ ಏಜೆಂಟರುಗಳಿಗೆ ಹಬ್ಬ ಶುರುವಾದಂತೆ. ಪೊಲೀಸರು ಖುದ್ದಾಗಿ ಕೌಂಟರ್ ಕೇಸ್ ಕೊಡಿಸುವ ಮೂಲಕ ಕಾಂಪ್ರಮೈಸ್ ಮಾಡುವ ಕಾರ್ಯಗಳಾಗುತ್ತಿವೆ. ಬೋಳಿಯಾರು ಇರಿತ ಪ್ರಕರಣದಲ್ಲಿ ಕಾಂಗ್ರೆಸ್ ಸರಕಾರ ಬೆಲೆ ತೆರಲೇಬೇಕಾಗುತ್ತದೆ. ಹಲ್ಲೆಗೊಳಗಾದವರು ಪಾಕಿಸ್ತಾನದ ಕುನ್ನಿಗಳೇ ಅಂದಿರುವ ಘೋಷಣೆಯ ದಾಖಲೆಗಳನ್ನು ಪೊಲೀಸ್ ಕಮೀಷನರ್ ಬಳಿಯೇ ಕೇಳುತ್ತೇನೆ. ಪಾಕಿಸ್ತಾನದ ಕುನ್ನಿಗಳೇ ಅಂದರೆ ಸಮಸ್ಯೆ ಏನು..? ಇಲ್ಲಿ ಪಾಕಿಸ್ತಾನಿಗಳು ಯಾರಿದ್ದಾರೆ ಎಂದು ಪ್ರಶ್ನಿಸಿದರು.
ಜೈ ಶ್ರೀ ರಾಮ್, ಭಾರತ್ ಮಾತಾ ಕಿ ಜೈ ಅನ್ನೋರಿಗೆ ಡ್ರಾಗನ್ ನಿಂದ ಕೊಲೆಯತ್ನ ಮಾಡಲಾಗ್ತಾ ಇದೆ. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈ ಅಂದವರಿಗೆ ಬಿರಿಯಾನಿ ನೀಡಿ ಬೇಲ್ ಕೊಟ್ಟು ವಾಪಸ್ಸು ಕಳುಹಿಸ್ತಾ ಇದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದ್ದು ಗೃಹಸಚಿವರು ಯಾರಂತಲೇ ತಿಳೀತಿಲ್ಲ. ಇಡೀ ಪ್ರಕರಣದ ಕುರಿತು ವಿಧಾನಸಭೆಯಲ್ಲಿ ಧ್ವನಿ ಎತ್ತುತ್ತೇನೆ. ಗಾಯಾಳುಗಳಿಗೆ ಪರಿಹಾರದ ಕುರಿತು ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸುತ್ತೇನೆ ಎಂದರು.
ಈ ಸಂದರ್ಭ ಸಂಸದ ಬೃಜೇಶ್ ಚೌಟ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಶಾಸಕರುಗಳಾದ ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
Mangalore Boliyar stabbing, BJP R Ashok visits victims admitted at hospital, says its pre planned case. How did the knife or dragger come into thier hands, this clearly shows its a pre planned case.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
12-01-26 01:54 pm
Mangaluru Staffer
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm