ಬ್ರೇಕಿಂಗ್ ನ್ಯೂಸ್
11-06-24 09:48 pm Mangalore Correspondent ಕರಾವಳಿ
ಮಂಗಳೂರು, ಜೂನ್.11: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಪೊಲೀಸರನ್ನು ಪಕ್ಷದ ನಾಯಕರೇ ಕಂಟ್ರೋಲ್ ಮಾಡುತ್ತಿದ್ದಾರೆ. ಈ ಹಿಂದೆ ಬೆಳ್ತಂಗಡಿಗೆ ಮುಖ್ಯಮಂತ್ರಿ ಬಂದಾಗಲೂ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸುಗಳಾಗಿದ್ದವು. ಈಗ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬಂದಾಗಲೂ ನಮ್ಮ ಕಾರ್ಯಕರ್ತರ ಮೇಲೆ ಟಾರ್ಗೆಟ್ ಮಾಡಿ ಕೇಸು ಹಾಕಿದ್ದಾರೆ. ಭಾರತ್ ಮಾತಾಕೀ ಜೈ ಹಾಕಿದ್ದಕ್ಕೆ ಕೇಸು ಹಾಕ್ತಿರೋದು ಹೊಸ ಅಧ್ಯಾಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಟೀಕಿಸಿದ್ದಾರೆ.
ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪದಗ್ರಹಣ ಮಾಡಿದಾಗ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಮಾಡಿದ್ದರು. ಎಲ್ಲ ಕಡೆ ಆದಂತೆ ಬೋಳಿಯಾರಿನಲ್ಲಿ ಸಂಭ್ರಮಾಚರಣೆ ಮಾಡಿದ್ದರು. ಆದರೆ, ಮಸೀದಿ ಎದುರಲ್ಲಿ ಜೈಕಾರ ಹಾಕಿದ್ದಾರೆಂದು ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು ಹಾಕಿದ್ದಾರೆ. ಸಂಭ್ರಮಾಚರಣೆ ಮಾಡಿ ಹಿಂತಿರುಗುತ್ತಿದ್ದ ಕಾರ್ಯಕರ್ತರ ಮೇಲೆ ಚೂರಿ ಹಾಕಿದ್ದನ್ನು ಹಗುರವಾಗಿ ನೋಡುತ್ತಿದ್ದಾರೆ. ಪೊಲೀಸರು ಕಾಂಗ್ರೆಸ್ ಪಕ್ಷದ ಅಣತಿಯಂತೆ ಕೆಲಸ ಮಾಡುವ ಸ್ಥಿತಿಯಾಗಿದೆ.
ರಸ್ತೆಯಲ್ಲಿ ಜೈಕಾರ ಹಾಕ್ಕೊಂಡು ಹೋಗಿದ್ದಕ್ಕೆ ಚೂರಿ ಇರಿಯುತ್ತಾರಂದ್ರೆ, ಇವರಲ್ಲಿ ಯಾವ ರೀತಿಯ ಜಿಹಾದಿ ಮನಸ್ಸು ಇದೆ ಎನ್ನುವುದು ತಿಳಿಯುತ್ತದೆ. ಇಷ್ಟಾದರೂ ನಿನ್ನೆ ದಿನೇಶ್ ಗುಂಡೂರಾವ್ ಅದೇ ಆಸ್ಪತ್ರೆಗೆ ಕಾರ್ಯಕ್ರಮಕ್ಕೆ ಹೋಗಿದ್ದರು. ಮೂರನೇ ಮಹಡಿಯಲ್ಲಿದ್ದ ಕಾರ್ಯಕರ್ತರನ್ನು ನೋಡಲು ಹೋಗಿಲ್ಲ. ಕ್ಷೇತ್ರದ ಶಾಸಕ ಸ್ಪೀಕರ್ ಆಗಿರುವ ಖಾದರ್ ಉಳಿದೆಲ್ಲ ಕಡೆಗೆ ಹೋಗುತ್ತಾರೆ. ಚೂರಿ ಇರಿತಕ್ಕೀಡಾದವರನ್ನು ತಮ್ಮ ವಿರೋಧಿ ಪಕ್ಷದವರು ಎನ್ನುವ ಕಾರಣಕ್ಕೆ ನೋಡಲು ಹೋಗಿಲ್ಲ. ಪಾಕಿಸ್ತಾನಕ್ಕೆ ಜೈ ಹಾಕಿದವರ ಮೇಲೆ ಕೇಸು ಹಾಕಿಲ್ಲ. ಭಾರತ್ ಮಾತಾಕೀ ಜೈ ಎಂದಿದ್ದಕ್ಕೆ ಕೇಸು ಹಾಕಿರುವುದು ಕಾಂಗ್ರೆಸ್ ಸರಕಾರದ ಹೊಸ ಅಧ್ಯಾಯ ತೆರೆದಿದ್ದಾರೆ. ಜಿಲ್ಲೆಯಲ್ಲಿ ಪೊಲೀಸರಿಗೂ ಭಯದ ವಾತಾವರಣ ಇದ್ದು ರಕ್ಷಣೆ ಕೊಡಬೇಕಾದ ಸ್ಥಿತಿಯಿದೆ. ಹಾಗೆಂದು, ಪೊಲೀಸರು ಕಾಂಗ್ರೆಸ್ ಹೇಳಿದ್ದನ್ನು ಮಾತ್ರ ಮಾಡುತ್ತೇವೆ ಎನ್ನುವುದು ಸರಿಯಲ್ಲ ಎಂದರು.
ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಭಾರತ್ ಮಾತಾ ಕೀ ಜೈ ಎಂದ ಕಾರಣಕ್ಕೆ ಚೂರಿ ಹಾಕಿದ್ದಾರೆ, ಅದರ ನೆಪದಲ್ಲಿ ಕೌಂಟರ್ ಕೇಸು ಹಾಕುತ್ತಾರೆ ಅಂದ್ರೆ ನಾವು ಸಿದ್ದರಾಮಯ್ಯ ಸರಕಾರದಲ್ಲಿ ಯಾವ ಸ್ಥಿತಿ ಎದುರಿಸುತ್ತಿದ್ದೇವೆ ಎನ್ನುವುದಕ್ಕೆ ಸಾಕ್ಷಿಯಿದು. ಪೊಲೀಸರು ಕಾಂಗ್ರೆಸ್ ಒತ್ತಡಕ್ಕೆ ಮಣಿದು ಹಿಂದು ಕಾರ್ಯಕರ್ತರನ್ನು ಹತ್ತಿಕ್ಕಲು ನೋಡ್ತಾ ಇದ್ದಾರೆ. ಜಿಹಾದಿ ಶಕ್ತಿಗಳ ಪರವಾಗಿ ನೀವು ಕೆಲಸ ಮಾಡುತ್ತಾರಂದ್ರೆ, ಕಾನೂನು ವಿರೋಧಿ ಕೃತ್ಯಗಳು ಹೆಚ್ಚಬಹುದು. ಇದರಿಂದ ಸಮಾಜದಲ್ಲಿ ಪೊಲೀಸರ ಮೇಲೆ ಅಪನಂಬಿಕೆಯೂ ಹುಟ್ಟುತ್ತದೆ ಎಂದರು.
ಮುಸ್ಲಿಮರು ಪಾಕಿಸ್ತಾನಿಗಳು ಎಂದು ಹೇಳಿಕೆ ನೀಡಿದ್ದು ಸರಿಯೇ ಎಂದು ಕೇಳಿದ ಪ್ರಶ್ನೆಗೆ, ಅಲ್ಲಿ ಏನು ಘೋಷಣೆ ಹಾಕಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ಮಾಡಲಿ. ಭಾರತ್ ಮಾತಾ ಕೀ ಜೈ ಹಾಕಿದ್ದಕ್ಕೆ ಎಫ್ಐಆರ್ ಹಾಕಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಲ್ಲಿ ಪ್ರಶ್ನೆ ಇರೋದು ಘಟನೆ ಆಗಿದ್ದು ಮುನ್ನಾ ದಿನ. ಮರುದಿನ ಪೊಲೀಸರು ಕೌಂಟರ್ ಕೇಸು ಹಾಕಿದ್ದಾರೆ. ಯಾರ ಒತ್ತಡಕ್ಕೆ ಮಣಿದು ಈ ಕೆಲಸ ಮಾಡಿದ್ದಾರೆ ಎನ್ನುವುದು ತಿಳಿಯುತ್ತದೆ ಎಂದು ಚೌಟ ಹೇಳಿದರು. ಸುದ್ದಿಗೋಷ್ಟಿಯಲ್ಲಿ ಮೇಯರ್ ಸುಧೀರ್ ಶೆಟ್ಟಿ, ಹರಿಕೃಷ್ಣ ಬಂಟ್ವಾಳ್, ರವೀಂದ್ರ ಶೆಟ್ಟಿ ಉಳಿದೊಟ್ಟು ಮತ್ತಿತರರಿದ್ದರು.
Demanding a comprehensive investigation into the stabbing of two BJP workers at Boliyar on Sunday night, the saffron party alleged on Tuesday that the Konaje police have filed a counter case against five BJP workers at the behest of Congress leaders. They alleged that the counter case was for shouting “Bharat Mata Ki Jai” while the BJP workers were returning after celebrating the “vijayotsava” of the NDA government returning to power.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
12-01-26 01:54 pm
Mangaluru Staffer
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm