ಬ್ರೇಕಿಂಗ್ ನ್ಯೂಸ್
10-06-24 03:57 pm Mangalore Correspondent ಕರಾವಳಿ
ಮಂಗಳೂರು, ಜೂನ್ 10: ಮಂಗಳೂರು- ಬೆಂಗಳೂರು ಸಂಪರ್ಕದ ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕದಲ್ಲಿ ರಸ್ತೆ ಹಾಳಾಗಿರುವ ಬಗ್ಗೆ ಹೆದ್ದಾರಿ ಅಧಿಕಾರಿಗಳ ಜೊತೆಗಿನ ರಿವೀವ್ ಮೀಟಿಂಗಲ್ಲಿ ಕ್ಲಾಸ್ ತೆಗೆದುಕೊಂಡಿದ್ದೇನೆ. 2-3 ದಿನದಲ್ಲಿ ರಸ್ತೆಯನ್ನು ಸಂಚಾರ ಯೋಗ್ಯ ಮಾಡಬೇಕೆಂದು ಸೂಚನೆ ನೀಡಿದ್ದೇನೆ. ಮತ್ತೆ ರಸ್ತೆ ಹಾಳಾದರೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಕಲ್ಲಡ್ಕ ರಸ್ತೆ ಹದಗೆಟ್ಟ ಬಗ್ಗೆ ಪ್ರಶ್ನೆ ಎತ್ತಿದಾಗ, ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ. ಪುಂಜಾಲಕಟ್ಟೆ- ಚಾರ್ಮಾಡಿ ಹೆದ್ದಾರಿಯಲ್ಲೂ ಕಾಮಗಾರಿ ಆಗ್ತಾ ಇದೆ. ರಸ್ತೆ ಅಗೆದು ಹಾಕಿರುವಲ್ಲಿ ಅಪಘಾತ ಆಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಪುತ್ತೂರು ಸುಬ್ರಹ್ಮಣ್ಯ ಭಾಗದಲ್ಲಿ ಸಿಡಿಲು ಬಡಿದು ಆರೇಳು ಮಂದಿ ಸಾವು ಆಗಿದೆ. ಈ ಬಗ್ಗೆ ಗಂಭೀರ ಪರಿಗಣಿಸಲಾಗಿದ್ದು ನಾಲ್ಕರಿಂದ ಆರು ಕಡೆ ಸಿಡಿಲು ನಿರೋಧಕ ಅಳವಡಿಸಲು ನಿರ್ಧರಿಸಿದ್ದೇವೆ, ಒಂದು ಕಡೆ ಹಾಕಿದರೆ ಐನೂರು ಮೀಟರ್ ನಿಂದ ಒಂದೂವರೆ ಕಿಮೀ ವರೆಗೆ ಅದರ ವ್ಯಾಪ್ತಿ ಇರತ್ತೆ. ಸಿಡಿಲಿನ ಶಾಕ್ ಆಗುವುದನ್ನು ತಡೆಯುತ್ತದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಸುಬ್ರಹ್ಮಣ್ಯ ದೇವಸ್ಥಾನದಿಂದ ಈಗಾಗಲೇ 2-3 ಕಡೆ ಸಿಡಿಲು ನಿರೋಧಕ ಹಾಕಿದ್ದಾರೆ. ಅದನ್ನು ನೋಡಿಕೊಂಡು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಕಡಲ್ಕೊರೆತ ಸಮಸ್ಯೆ ಕುರಿತ ಪ್ರಶ್ನೆಗೆ, ಉಳ್ಳಾಲದ ಬಟ್ಟಪ್ಪಾಡಿ ಪ್ರದೇಶದಲ್ಲಿ ಬಂದರು ಇಲಾಖೆಯಿಂದ ಮರವಂತೆ ಮಾದರಿಯಲ್ಲಿ ಕಾಮಗಾರಿ ಮಾಡಲು 80 ಕೋಟಿ ಪ್ರಸ್ತಾವನೆ ಕೊಟ್ಟಿದ್ದಾರೆ. ಅದರ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದರು.
ಕೆಂಪು ಮಣ್ಣು ಸಾಗಾಟದ ಬಗ್ಗೆ ದೂರು ಬಂದಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಲೋಪ ಆದರೆ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ. ಮರಳುಗಾರಿಕೆ ವಿಚಾರದಲ್ಲಿ ಸಿಆರ್ ಝೆಡ್ ದುರುಪಯೋಗ ಆಗ್ತಾ ಇದೆ. ಜಿಲ್ಲಾಡಳಿತ ನಿಗಾ ವಹಿಸಬೇಕು, ಸಿಸಿಟಿವಿ ಇದ್ರೂ ಅಕ್ರಮ ಮರಳುಗಾರಿಕೆ ಆಗತ್ತೆ ಅಂದ್ರೆ ಆಡಳಿತದ ವೈಫಲ್ಯ ಅಂತ ಹೇಳಬೇಕಾಗುತ್ತದೆ ಎಂದರು. ಪುತ್ತೂರು ಶಾಸಕ ಅಶೋಕ ರೈ, ವಿನಯರಾಜ್ ಮತ್ತಿತರರು ಇದ್ದರು.
Mangalore kalladka highway to be made proper in few days says Dinesh Gundu Rao in Mangalore during the review meeting held at DC office. Measures are taken to avoid accident at Dharmasthala Charmadi roads he added.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm