ಬ್ರೇಕಿಂಗ್ ನ್ಯೂಸ್
03-06-24 09:37 pm Mangalore Correspondent ಕರಾವಳಿ
ಪುತ್ತೂರು, ಜೂನ್ 3: ಸೋಮವಾರ ಸಂಜೆ ಪುತ್ತೂರು ಪೇಟೆಯಲ್ಲಿ ಮೇಘಸ್ಫೋಟ ಆದ ರೀತಿ ಮಳೆಯಾಗಿದೆ. ಸಂಜೆ 4 ಗಂಟೆಯಿಂದ 45 ನಿಮಿಷ ಕಾಲ ಭಾರೀ ಮಳೆ ಸುರಿದಿದ್ದು ಪುತ್ತೂರು ಪೇಟೆ ಇಡೀ ಮಳೆನೀರಿನಲ್ಲಿ ತೋಯ್ದು ಹೋಗಿದೆ. ಪುತ್ತೂರು ಪೇಟೆಯ ಜನರ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಕಂಡರಿಯದ ರೀತಿ ಮಳೆ ಆಗಿದ್ಯಂತೆ.
ಒಂದೇ ಸಮನೆ ಧೋ ಎಂದು ಮಳೆ ಸುರಿದಿದ್ದು, ರಸ್ತೆಯಲ್ಲಿ ನೀರು ನದಿಯಂತೆ ತುಂಬಿಕೊಂಡಿದೆ. ದರ್ಭೆಯಲ್ಲಿ ಆಟೋ ರಿಕ್ಷಾಗಳು, ದ್ವಿಚಕ್ರ ವಾಹನಗಳು ಸಾಗಲು ಸಾಧ್ಯವಾಗದೆ ನಿಂತುಬಿಟ್ಟಿದ್ದವು. ಕೋರ್ಟ್ ರೋಡಿನಲ್ಲಿ ತಗ್ಗಿನ ಪ್ರದೇಶದಲ್ಲಿದ್ದ ಜುವೆಲ್ಲರಿ ಅಂಗಡಿಗೆ ನೀರು ನುಗ್ಗಿದ್ದು ಮೊಣಕಾಲು ಮುಳುಗುವಷ್ಟು ಮಳೆ ನೀರು ಶೇಖರಗೊಂಡಿತ್ತು.




ಕೋರ್ಟ್ ರೋಡ್, ಮಹಾಲಿಂಗೇಶ್ವರ ದೇವಸ್ಥಾನ ಆಸುಪಾಸಿನಲ್ಲಿ ತಗ್ಗಿನ ಜಾಗದ ಹಲವಾರು ಅಂಗಡಿಗಳಿಗೆ ನೀರು ನುಗ್ಗಿದೆ. ದೇವಸ್ಥಾನ ಪರಿಸರದಲ್ಲಿ ಜನರ ಸಂಚಾರಕ್ಕೆ ತೊಡಕಾಗಿದೆ. ಆದರೆ ಅರ್ಧ ಗಂಟೆಯ ಮಳೆಯ ಬಳಿಕ ಮಳೆಯೇ ಬಂದಿಲ್ಲವೇನೋ ಎನ್ನುವಂತೆ ಹಠಾತ್ ನಿಂತುಬಿಟ್ಟಿದೆ. ಪುತ್ತೂರು ಆಸುಪಾಸಿನಲ್ಲಿ ಅಷ್ಟು ಮಳೆಯಾಗಿಲ್ಲ. ಒಂದೇ ಕಡೆ ಮಳೆಯಾಗಿರುವುದು ಭಾರೀ ವಿಶೇಷ ಅಂತ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಡೀ ದಿನ ಮೋಡ ಕವಿದ ವಾತಾವರಣ ಇತ್ತು. ಸಂಜೆಯ ಹೊತ್ತಿಗೆ ಕಪ್ಪಗಿನ ಮೋಡ ಆವರಿಸಿದ್ದರಿಂದ ಭಾರೀ ಮಳೆಯಾಗುತ್ತೆ ಅನ್ನುವ ಸುಳಿವು ನೀಡಿತ್ತು. ಆದರೆ ಮಂಗಳೂರಿನಲ್ಲಿ ಹನಿ ಹನಿ ಸುರಿದಿದ್ದು ನೆಲ ಒದ್ದೆಯಾಗುವಷ್ಟು ಮಾತ್ರ ಮಳೆಯಾಗಿದೆ.
Heavy rains in Puttur causes havoc, water enters shops, most of the shops were filled with shops causing huge damage to many business people.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm